|
| ಎಲ್‌ಟಿಟಿಇ ತ.ನಾಡಿನಲ್ಲಿ ನೆಲೆಕಂಡುಕೊಳ್ಳಲು ಯತ್ನಿಸುತ್ತಿದೆ: ಜಯಾ |
| ಚೆನ್ನೈ (ಏಜೆನ್ಸಿ), ಸೋಮವಾರ, 31 ಡಿಸೆಂಬರ್ 2007 ( 18:09 IST ) | |
ಎಲ್‌ಟಿಟಿಇ ತನ್ನ ಕಾರ್ಯಾಚರಣೆಗೆ ತಮಿಳ್ನಾಡಿನಲ್ಲಿ ನೆಲೆ ಕಂಡುಕೊಳ್ಳಲು ಯೋಜಿಸುತ್ತಿದೆ ಎಂದು ಹೇಳಿರುವ ಎಐಎಡಿಎಂಕೆ ವರಿಷ್ಠೆ ಜಯಲಲಿತಾ, ತಮಿಳ್ನಾಡಿನಲ್ಲಿ ಭದ್ರತಾ ಪರಿಸ್ಥಿತಿ ಅಪಾಯಕಾರಿಯಾಗಿ ಪರಿವರ್ತನೆಯಾಗುತ್ತಿದೆ ಎಂದು ಹೇಳಿದ್ದಾರೆ.
ಶ್ರೀಲಂಕಾದಲ್ಲಿ ಎಲ್‌ಟಿಟಿಇಗೆ ಮಿಲಿಟರಿ ಕಾರ್ಯಾಚರಣೆಯಿಂದಾಗಿ ತೀವ್ರ ಹಿನ್ನಡೆ ಉಂಟಾಗಿರುವುದರಿಂದ ಅದು ತನ್ನ ಕಾರ್ಯಾಚರಣೆಗೆ ತಮಿಳುನಾಡಿನಲ್ಲಿ ನೆಲೆ ಕಂಡುಕೊಳ್ಳಲು ಯೋಜಿಸುತ್ತಿದೆ ಎಂದು ಅವರು ನುಡಿದರು. ಜಯಲಲಿತಾ ಪಕ್ಷದ ಮುಖ್ಯಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ರಾಜ್ಯದಲ್ಲಿ ಅಪಾಯಕಾರಿ ಪರಿಸ್ಥಿತಿ ತಲೆದೋರಿದ್ದು, ನಿಷೇಧಿತ ಸಂಘಟನೆಗೆ ಎಐಎಡಿಎಂಕೆ ಹೊರತುಪಡಿಸಿ ಮಿಕ್ಕೆಲ್ಲ ರಾಜಕೀಯ ಪಕ್ಷಗಳು ಕೆಂಪು ಹಾಸಿನ ಸ್ವಾಗತ ನೀಡಲು ಸಿದ್ಧವಾಗಿದೆ ಎಂದು ನುಪಡಿದರು.ರಾಜ್ಯ ಸರ್ಕಾರಕ್ಕೆ ಕೇಂದ್ರದ ಬೆಂಬಲವಿರುವ ಹಿನ್ನೆಲೆಯಲ್ಲಿ ದೇವರೇ ತಮಿಳುನಾಡನ್ನು ಉಳಿಸಬೇಕು ಎಂದು ಅವರು ನುಡಿದರು.
ಶ್ರೀಲಂಕಾ ಮಿಲಿಟರಿಯ ದಾಳಿಯಿಂದ ಅಲ್ಲಿ ದುರ್ಬಲವಾಗಿರುವ ಎಲ್‌ಟಿಟಿಇ, ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ನಿರ್ವಹಣೆ ಸರಿಯಿಲ್ಲದಿರುವುದರಿಂದ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿದೆ ಎಂದು ಅವರು ನುಡಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸಮೀಕ್ಷೆ - ನಾಟಕವನ್ನು ಷೂಟ್ ಮಾಡಬೇಕೆಂದರೆ ಏನು ಮಾಡಬೇಕು? ಸ್ಟೇಜ್ ಎದುರಿಗೆ ಒಂದು ಕೆಮೆರಾ ಫಿಕ್ಸ್ ಮಾಡಿ ಆನ್ ಮಾಡಿದರೆ ಆಯಿತು ಎನ್ನುವುದು ಉತ್ತರ. ಅದೇ ಟೆಕ್ನಿಕ್ ಬಳಸಿರುವುದು "ಆಪರೇಷನ್ ಅಂಕುಶ" ಚಿತ್ರದ ವಿಶೇಷ. |
| |
|
|
|
|
 | | PTI |
| | | ಅನಿಲ್ ಕುಂಬ್ಳೆ | | ಇತ್ತೀಚೆಗೆ ನಡೆದ ಕ್ರಿಕೆಟ್ ಟೆಸ್ಟ್ ಸರಣಿಯಲ್ಲಿ, ಇಪ್ಪತ್ತೇಳು ವರ್ಷಗಳ ಬಳಿಕ ಸಾಂಪ್ರದಾಯಿಕ ವೈರಿ ಪಾಕಿಸ್ತಾನದ... |
|
| |
|
|
|
|
|
| ಆತ್ಮಚರಿತ್ರೆ - ಈ ಮಣ್ಣಿನ ಸೊಗಡಿನ ಸಾಹಿತ್ಯ ರಚಿಸಿದ ನಮ್ಮೆಲ್ಲರ ಅಚ್ಚುಮೆಚ್ಚಿನ ಕು.ವೀರಭದ್ರಪ್ಪನರ 'ಅರಮನೆ' ಕಾದಂಬರಿಗೆ ಈಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗರಿ. |
| |
|
|
|
|
|
|
|