ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ದೇಶ
ಹೊಸವರ್ಷದಂದು ತಿರುಪತಿ ಭಕ್ತರಿಗೆ ಉಚಿತ ಲಡ್ಡು
ಚೆನ್ನೈ (ಏಜೆನ್ಸಿ), ಸೋಮವಾರ, 31 ಡಿಸೆಂಬರ್ 2007   ( 11:38 IST )
ಜಗದ್ವಿಖ್ಯಾತ ಹಿಂದೂಗಳ ಧಾರ್ಮಿಕ ಕೇಂದ್ರ ತಿರುಪತಿಯಲ್ಲಿ ಹೊಸ ವರ್ಷದ ದಿನದಂದು ದೇವಳ ಸಂದರ್ಶಿಸುವ ಭಕ್ತರಿಗೆ ಒಂದು ಲಕ್ಷ ಉಚಿತ 'ಲಡ್ಡು' ಪ್ರಸಾದ ವಿತರಿಸಲು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಮಂಡಿಳಿಯು ಸರ್ವ ರೀತಿಯ ಸಿದ್ಧತೆ ನಡೆಸಿದೆ.

ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಟಿಟಿಡಿ ಸ್ಥಳೀಯ ಸಲಹಾ ಸಮಿತಿ ಉಸ್ತುವಾರಿ ವಹಿಸಿರುವ ಕೆ.ಆನಂದ್ ಕುಮಾರ್ ರೆಡ್ಡಿ ಅವರು, 2008ರ ಜನವರಿ ಒಂದರಂದು ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ತಿರುಪತಿ ಸಂದರ್ಶಿಸುವ ನಿರೀಕ್ಷೆ ಇದೆ. ಪ್ರತಿಯೊಬ್ಬ ಭಕ್ತರಿಗೂ ಉಚಿತವಾಗಿ ಲಡ್ಡುಗಳನ್ನು ವಿತರಿಸಲಾಗುತ್ತದೆ ಎಂದು ಹೇಳಿದರು.

ಇದು ಮಾತ್ರವಲ್ಲದೆ, ಶ್ರೀವೆಂಕಟೇಶ್ವರನ ಪ್ರಸಾದವಾಗಿರುವ ಲಡ್ಡುಗಳನ್ನು ಮಂದಿರದ ಆವರಣದಲ್ಲಿರುವ ವಿಶೇಷ ಕೌಂಟರುಗಳ ಮೂಲಕ ಮಾರಾಟದ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ತಿಳಿಸಿದರು.

ದೇವಳದಲ್ಲಿ ಹೊಸ ವರ್ಷಾಚರಣೆ ಪ್ರಯುಕ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಪೊಲೀಸರು, ಸ್ವಯಂಸೇವಕರು ಮತ್ತು ಇತರ ಅಧಿಕಾರಿಗಳು ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಸಹಕಾರ ನೀಡಲಿದ್ದಾರೆ. ಹೊಸವರ್ಷದಂದು ದೇವಸ್ಥಾನವು ಮುಂಜಾನೆ 2.30ರಿಂದ ರಾತ್ರಿ 11 ಗಂಟೆವರೆಗೆ ತೆರೆದಿರುತ್ತದೆ ಎಂದು ರೆಡ್ಡಿ ತಿಳಿಸಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಉಮಾಭಾರತಿ ಬಿಜೆಪಿಗೆ ಮರಳುವಿಕೆ ಇಲ್ಲ
ಲೂಧಿಯಾನ ಸ್ಫೋಟ: ಪ್ರಮುಖ 4 ಬಂಧನ
ಕರ್ನಾಟಕದಲ್ಲಿ ಮುಕ್ತ ಚುನಾವಣೆಗೆ ಆಯೋಗ ಚಿಂತನೆ
ಪ್ರಮಾಣ ವಚನ ಸ್ವೀಕರಿಸಿದ ಧುಮಾಲ್
ಹಿಮಾಚಲ್ ಮುಖ್ಯಮಂತ್ರಿಯಾಗಿ ಇಂದು ಧುಮಾಲ್ ಪ್ರಮಾಣ ವಚನ
ಪಾಕ್‌ನಲ್ಲಿ ಭದ್ರತಾ ವ್ಯವಸ್ಥೆ ಬಗ್ಗೆ ಭಾರತಕ್ಕೆ ಆತಂಕ: ನಾರಾಯಣನ್
ಮನರಂಜನೆ
ಚಿತ್ರ ಸಮೀಕ್ಷೆ - ನಾಟಕವನ್ನು ಷೂಟ್ ಮಾಡಬೇಕೆಂದರೆ ಏನು ಮಾಡಬೇಕು? ಸ್ಟೇಜ್ ಎದುರಿಗೆ ಒಂದು ಕೆಮೆರಾ ಫಿಕ್ಸ್ ಮಾಡಿ ಆನ್‌ ಮಾಡಿದರೆ ಆಯಿತು ಎನ್ನುವುದು ಉತ್ತರ. ಅದೇ ಟೆಕ್ನಿಕ್ ಬಳಸಿರುವುದು "ಆಪರೇಷನ್ ಅಂಕುಶ" ಚಿತ್ರದ ವಿಶೇಷ.
ಮುಂದೆ ಓದಿ|ಮತ್ತಷ್ಟು...
ಗ್ರಹ ಗತಿ
PTI
 
ಅನಿಲ್ ಕುಂಬ್ಳೆ
ಇತ್ತೀಚೆಗೆ ನಡೆದ ಕ್ರಿಕೆಟ್ ಟೆಸ್ಟ್ ಸರಣಿಯಲ್ಲಿ, ಇಪ್ಪತ್ತೇಳು ವರ್ಷಗಳ ಬಳಿಕ ಸಾಂಪ್ರದಾಯಿಕ ವೈರಿ ಪಾಕಿಸ್ತಾನದ...
ರಾಬಿನ್ ಉತ್ತಪ್ಪ
ಲಗ್ನೇಶ ಬುಧ ಇದ್ದರೂ ವಿಶ್ವಕಪ್ ತಂದ ಧೋನಿ
ಸಾಹಿತ್ಯ
ಆತ್ಮಚರಿತ್ರೆ - ಈ ಮಣ್ಣಿನ ಸೊಗಡಿನ ಸಾಹಿತ್ಯ ರಚಿಸಿದ ನಮ್ಮೆಲ್ಲರ ಅಚ್ಚುಮೆಚ್ಚಿನ ಕು.ವೀರಭದ್ರಪ್ಪನರ 'ಅರಮನೆ' ಕಾದಂಬರಿಗೆ ಈಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗರಿ.
ಮುಂದೆ ಓದಿ|ಮತ್ತಷ್ಟು...
Marketplace