|
| ಉಮಾಭಾರತಿ ಬಿಜೆಪಿಗೆ ಮರಳುವಿಕೆ ಇಲ್ಲ |
| ಭೋಪಾಲ (ಏಜೆನ್ಸಿ), ಸೋಮವಾರ, 31 ಡಿಸೆಂಬರ್ 2007 ( 11:12 IST ) | |
ಬಿಜೆಪಿಗೆ ಮರಳುವ ಸಾಧ್ಯತೆಗಳನ್ನು ಭಾರತೀಯ ಜನಶಕ್ತಿ ಪಕ್ಷದ ಅಧಿನಾಯಕಿ ಉಮಾಭಾರತಿ ತಳ್ಳಿಹಾಕಿದ್ದಾರೆ. ಬದಲಿಗೆ, ಮಹಾರಾಷ್ಟ್ರದಲ್ಲಿ ಶಿವಸೇನೆಯೊಂದಿಗೆ ಮಾಡಿಕೊಂಡಿರುವಂತೆ, ಮಧ್ಯಪ್ರದೇಶ ಮತ್ತು ರಾಜಸ್ತಾನದಲ್ಲಿ ಅಧಿಕಾರ ಹಂಚಿಕೆ ಒಪ್ಪಂದಕ್ಕೆ ಬರಲು ಬಿಜೆಪಿಯನ್ನು ಕೇಳಿಕೊಂಡಿರುವುದಾಗಿ ಅವರು ಹೇಳಿದ್ದಾರೆ.
"ಬಿಜೆಪಿ ನಾಯಕರು ನವೆಂಬರ್ 7-9 ನಡುವೆ ಸಂಘದ ನಾಯಕರ ಮುಖಾಂತರ ನನ್ನನ್ನು ಸಂಪರ್ಕಿಸಿದ್ದಾರೆ. ಬಿಜೆಪಿಗೆ ಮರಳುವ ಪ್ರಸ್ತಾಪವನ್ನು ಒಪ್ಪುವ ಬದಲಿಗೆ, ಮಧ್ಯಪ್ರದೇಶ ಮತ್ತು ರಾಜಸ್ತಾನಗಳಲ್ಲಿ ಸ್ಥಾನಗಳನ್ನು ಹಂಚಿಕೊಳ್ಳುವ ಒಪ್ಪಂದದ ಕುರಿತು ಹೇಳಿದೆ" ಎಂಬುದಾಗಿ ಬೆಂಕಿಚೆಂಡು ಉಮಾಭಾರತಿ, ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ನುಡಿದರು.
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾ, ಅಧಿಕಾರ ಹಂಚಿಕೆಯ ಪ್ರಸ್ತಾಪದ ಸಂದೇಶವನ್ನು ಬಿಜೆಪಿಗೆ ಕಳುಹಿಸಿರುವುದಾಗಿ ಕಾರ್ಯಕರ್ತರಿಗೆ ತಿಳಿಸಿದರು.
ಭಾರತೀಯ ಜನಶಕ್ತಿ ಪಕ್ಷದ ನಾಯಕರೊಂದಿಗೆ ಈ ಕುರಿತು ಚರ್ಚೆ ನಡೆಸಲು ತಾನು ಹೇಳಿದ್ದಾಗಿ ನುಡಿದ ಅವರು, ನಾಯಕರು ತನ್ನ ಬಳಿ ಚರ್ಚಿಸುವರೆಂದು ತಿಳಿಸಿದ್ದಾಗಿ ನುಡಿದ ಉಮಾ, ಇದುವರೆಗೆ ಈ ಪ್ರಸ್ತಾಪಕ್ಕೆ ಯಾರೂ ಉತ್ತರಿಸಿಲ್ಲ ಎಂದು ತಿಳಿಸಿದರು.
ಒಂದೊಮ್ಮೆ ತಾನು ಬಿಜೆಪಿಗೆ ಮರುಸೇರ್ಪಡೆಗೊಂಡರೆ, ತನ್ನ ಶಕ್ತಿ ಮತ್ತು ಸಾಮರ್ಥ್ಯಗಳು ಕುಂದುತ್ತವೆ ಮತ್ತು ಬಳಕೆಯಾಗದೇ ಹೋಗುತ್ತದೆ, ಬದಲಿಗೆ ಬಿಜೆಪಿಯೇ ಬಿಜೆಎಸ್‌ನೊಂದೆಗೆ ಸೇರಲಿ ಎಂದು ಅವರು ನುಡಿದರು. ತಾನು ಬಿಜೆಪಿ ಸೇರುತ್ತೇನೆಂಬುದು, ತನ್ನ ಬೆಂಬಲಿಗರ ಹಾದಿ ತಪ್ಪಿಸಲು ಮಾಡಿರುವ ಅಪಪ್ರಚಾರ ಎಂದು ಉಮಾ ಹೇಳಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸಮೀಕ್ಷೆ - ನಾಟಕವನ್ನು ಷೂಟ್ ಮಾಡಬೇಕೆಂದರೆ ಏನು ಮಾಡಬೇಕು? ಸ್ಟೇಜ್ ಎದುರಿಗೆ ಒಂದು ಕೆಮೆರಾ ಫಿಕ್ಸ್ ಮಾಡಿ ಆನ್ ಮಾಡಿದರೆ ಆಯಿತು ಎನ್ನುವುದು ಉತ್ತರ. ಅದೇ ಟೆಕ್ನಿಕ್ ಬಳಸಿರುವುದು "ಆಪರೇಷನ್ ಅಂಕುಶ" ಚಿತ್ರದ ವಿಶೇಷ. |
| |
|
|
|
|
 | | PTI |
| | | ಅನಿಲ್ ಕುಂಬ್ಳೆ | | ಇತ್ತೀಚೆಗೆ ನಡೆದ ಕ್ರಿಕೆಟ್ ಟೆಸ್ಟ್ ಸರಣಿಯಲ್ಲಿ, ಇಪ್ಪತ್ತೇಳು ವರ್ಷಗಳ ಬಳಿಕ ಸಾಂಪ್ರದಾಯಿಕ ವೈರಿ ಪಾಕಿಸ್ತಾನದ... |
|
| |
|
|
|
|
|
| ಆತ್ಮಚರಿತ್ರೆ - ಈ ಮಣ್ಣಿನ ಸೊಗಡಿನ ಸಾಹಿತ್ಯ ರಚಿಸಿದ ನಮ್ಮೆಲ್ಲರ ಅಚ್ಚುಮೆಚ್ಚಿನ ಕು.ವೀರಭದ್ರಪ್ಪನರ 'ಅರಮನೆ' ಕಾದಂಬರಿಗೆ ಈಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗರಿ. |
| |
|
|
|
|
|
|
|