ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಸ್ವಾತ್ ಕಣಿವೆ ಉಗ್ರರಿಂದ ಬಹುತೇಕ ಮುಕ್ತ
ಇಸ್ಲಾಮಾಬಾದ್, ಗುರುವಾರ, 21 ಮೇ 2009   ( 11:07 IST )
ಪಾಕಿಸ್ತಾನದ ಸೈನಿಕರು ತಾಲಿಬಾನ್ ಹೋರಾಟಗಾರರನ್ನು ರಾಜಧಾನಿಯಿಂದ 100 ಕಿಮೀ ದೂರದಲ್ಲಿರುವ ಬುನೇರ್ ಜಿಲ್ಲೆಯಿಂದ ಬಹುತೇಕ ಹೊರಗಟ್ಟಿದ್ದಾರೆ. ಈ ಕಾಳಗದಲ್ಲಿ ಉಗ್ರಗಾಮಿಗಳು ಅತೀವ ಸಾವುನೋವಿಗೆ ಗುರಿಯಾಗಿದ್ದಾರೆಂದು ಮಿಲಿಟರಿ ತಿಳಿಸಿದೆ. ಸ್ವಾತ್ ಕಣಿವೆಯಲ್ಲಿ ಮತ್ತು ನೆರೆಯ ಬುನೇರ್ ಮತ್ತು ದಿರ್‌ನಲ್ಲಿ ಕಾರ್ಯಾಚರಣೆಯಿಂದ ಸುಮಾರು 1.4 ಮಿಲಿಯ ಜನರು ಸಂತ್ರಸ್ತರಾಗಿದ್ದಾರೆ.

ಬುನೇರ್‌ನಲ್ಲಿ ತೀವ್ರ ಹೋರಾಟದಲ್ಲಿ ಭದ್ರತಾ ಪಡೆಗಳು ಗಣನೀಯ ಮುನ್ನಡೆ ಸಾಧಿಸಿದ್ದು, ಅನೇಕ ಪ್ರದೇಶಗಳು ಉಗ್ರಗಾಮಿಗಳಿಂದ ಮುಕ್ತವಾಗಿದ್ದು, ಉಗ್ರರು ತೀವ್ರ ಸಾವುನೋವಿಗೆ ಗುರಿಯಾಗಿದ್ದಾರೆಂದು ಮಿಲಿಟರಿ ಮಂಗಳವಾರ ತಿಳಿಸಿದೆ. ಸ್ವಾತ್ ಕಣಿವೆಯಲ್ಲಿ ತಾಲಿಬಾನ್ ಪ್ರಮುಖ ನೆಲೆಯನ್ನು ಪಾಕಿಸ್ತಾನ ಸೇನೆ ಕೈವಶ ಮಾಡಿಕೊಂಡಿದ್ದು, ಕನಿಷ್ಠ 80 ಉಗ್ರಗಾಮಿಗಳು ಭೀಕರ ಕಾಳಗದಲ್ಲಿ ಸತ್ತಿದ್ದಾರೆ.

ತಾಲಿಬಾನ್ ಕಳೆದ ತಿಂಗಳು ಕೈವಶಮಾಡಿಕೊಂಡ ಬುನೇರ್ ಜಿಲ್ಲೆಯ ಸುಲ್ದಾನ್‌ವಾಸ್ ಗ್ರಾಮವನ್ನು ಭದ್ರತಾ ಪಡೆಗಳು ತೀವ್ರ ಹೋರಾಟದ ಬಳಿಕ ಆಕ್ರಮಿಸಿಕೊಂಡಿವೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಬಾಗ್ದಾದ್ ಕಾರ್ ಬಾಂಬ್ ದಾಳಿಗೆ 34 ಬಲಿ
ಆತ್ಮಾಹುತಿ ದಾಳಿಗೆ ಇಬ್ಬರು ಅಮೆರಿಕನ್ನರ ಬಲಿ
ತಾಲಿಬಾನ್ ಜತೆ ಪಾಕ್ ಪಡೆಗಳ ಬೀದಿಕಾಳಗ
ಶ್ರೀಲಂಕಾ ನಿರಾಶ್ರಿತ ಶಿಬಿರಗಳಿಗೆ ಪ್ರವೇಶ ನಿರ್ಬಂಧ
ವಿಶ್ವಾದ್ಯಂತ ತಮಿಳರ ಪ್ರತಿಭಟನೆ
ಸಾವನ್ನು ಆಹ್ವಾನಿಸಿಕೊಂಡ ಪ್ರಭಾಕರನ್: ಕರುಣಾ
ಗ್ರಹ ಗತಿ
ದೈನಿಕ - ಕೆಲವು ಅಡೆತಡೆಗಳ ಬಳಿಕ ಯಶಸ್ಸು ನಿಮ್ಮದಾಗಲಿದೆ. ನಿಮ್ಮ ವ್ಯವಹಾರ ಚಟುವಟಿಕೆಗಳು ಕೂಡ ಸರಾಸರಿ ವೇಗದಲ್ಲಿ ಕಾರ್ಯನಿರ್ವಹಿಸಲಿವೆ. ವೈವಾಹಿಕ ವಿಷಯಗಳಿಂದ ಸಂತಸ ಲಭಿಸಲಿದೆ. ಆರೋಗ್ಯ ಯಾವುದೇ ಚಿಂತೆಯ ವಿಷಯವಾಗದು.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಕಾಫಿ ಬೆಳೆಗಾರರ ಪ್ಯಾಕೇಜ್‌ಗೆ ಆದ್ಯತೆ: ಚಂದ್ರೇಗೌಡ
ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ ಕೇಂದ್ರ ಸರ್ಕಾರದ ಮುಂದಿಡುವ ಕಾಫಿ ಪ್ಯಾಕೇಜನ್ನು ತಕ್ಷಣ ಜಾರಿಗೆ ತರುವಂತೆ ಬೆಂಗಳೂರು ಉತ್ತರ ಲೋಕಸಭಾ ಸದಸ್ಯ ಡಿ.ಬಿ. ಚಂದ್ರೇಗೌಡ
ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಬಸ್ ಪಾಸ್
ಬಿಜೆಪಿ ಕತೆ ಏನಾಗುತ್ತೆ ಅಂತ ನೋಡಿ: ಸಿದ್ದರಾಮಯ್ಯ
ಮನರಂಜನೆ
ಚಿತ್ರ ಸುದ್ದಿ - ಕನ್ನಡದಲ್ಲಿ ಈ ವಾರ ಸ್ಟಾರ್ ವಾರ್. ದೊಡ್ಡ ನಟರ ಎರಡು ಚಿತ್ರಗಳು ಒಟ್ಟೊಟ್ಟಿಗೆ ಬಿಡುಗಡೆಯಾಗುತ್ತಿದೆ. ಇದರಿಂದ ಸಹಜವಾಗಿಯೇ ಪ್ರೇಕ್ಷಕರ ಪ್ರತಿಕ್ರಿಯೆ ಯಾವ ಚಿತ್ರಕ್ಕೆ ಹೇಗಿರುತ್ತದೆ ಎಂಬುದು
ಮುಂದೆ ಓದಿ|ಮತ್ತಷ್ಟು...