ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ತಾಲಿಬಾನ್ ಜತೆ ಪಾಕ್ ಪಡೆಗಳ ಬೀದಿಕಾಳಗ
ಇಸ್ಲಾಮಾಬಾದ್, 20 ಮೇ 2009   ( 17:27 IST )
ತಾಲಿಬಾನ್ ಹಿಡಿತದ ಪ್ರದೇಶಗಳನ್ನು ಆಕ್ರಮಿಸುತ್ತಿರುವ ಪಾಕಿಸ್ತಾನ ಪಡೆಗಳು ಉಗ್ರಗಾಮಿ ಪೀಡಿತ ಮಟ್ಟಾ ಪಟ್ಟಣವನ್ನು ಸುತ್ತುವರಿದಿದೆ ಮತ್ತು ಉಗ್ರರ ಜತೆ ಬೀದಿಕಾಳಗಗಳಲ್ಲಿ ನಿರತವಾದ ಪಾಕ್ ಪಡೆಗಳು ಸ್ವಾತ್ ಕಣಿವೆಯ ಆಯಕಟ್ಟಿನ ನಗರ ಮಿಂಗೋರಾದತ್ತ ಧಾವಿಸುತ್ತಿದೆ. ಸ್ವಾತ್‌ನಲ್ಲಿ ನಡೆದ ಹೋರಾಟದಲ್ಲಿ ಕನಿಷ್ಠ 16 ಉಗ್ರಗಾಮಿಗಳು ಮತ್ತು ನಾಲ್ವರು ಭದ್ರತಾ ಸಿಬ್ಬಂದಿ ಸತ್ತಿದ್ದು, ಭೂಸೇನೆಯು ಮಟ್ಟಾದತ್ತ ಮುನ್ನಡೆಯನ್ನು ಮುಂದುವರಿಸಿವೆ.

ಭದ್ರತಾಪಡೆಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಂತೆ, ಪಡೆಗಳು ಮತ್ತು ಉಗ್ರಗಾಮಿಗಳ ನಡುವೆ ಗುಂಡಿನ ಚಕಮಕಿ ಉದ್ಭವಿಸಿದೆ. ಪಡೆಗಳು ಮಟ್ಟಾದ ಪ್ರದೇಶಗಳಿಗೆ ಕಾಲ್ನಡಿಗೆಯಲ್ಲೇ ಧಾವಿಸಿದ್ದು, ಬೀದಿ ಕಾಳಗಗಳಲ್ಲಿ ಉಗ್ರಗಾಮಿಗಳ ಪ್ರತಿರೋಧವನ್ನು ಹತ್ತಿಕ್ಕಿವೆ. ಆಸ್ತಿಪಾಸ್ತಿ ಹಾನಿಯನ್ನು ಕನಿಷ್ಠಗೊಳಿಸುವ ಸಲುವಾಗಿ ಸೇನಾಪಡೆಗಳು ಉದ್ದೇಶಪೂರ್ವಕವಾಗಿ ನಿಧಾನಗತಿಯಲ್ಲಿ ಸಾಗುತ್ತಿವೆಯೆಂದು ಅಧಿಕಾರಿಗಳು ಟಿವಿ ನ್ಯೂಸ್ ಚಾನೆಲ್‌ಗಳಿಗೆ ತಿಳಿಸಿದ್ದಾರೆ.

ಮಟ್ಟಾವನ್ನು ಎಲ್ಲಾ ದಿಕ್ಕುಗಳಲ್ಲಿ ಸೇನಾಪಡೆ ಸುತ್ತುವರಿಯುತ್ತಿದ್ದಂತೆ ಹೆಲಿಕಾಪ್ಟರ್‌ಗಳು ಆಕಾಶದಲ್ಲಿ ಸುತ್ತುಹಾಕಿದವು. ಮಿಂಗೋರಾದತ್ತ ವಿವಿಧ ದಿಕ್ಕುಗಳಿಂದ ಭದ್ರತಾ ಪಡೆಗಳು ಧಾವಿಸಿವೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಶ್ರೀಲಂಕಾ ನಿರಾಶ್ರಿತ ಶಿಬಿರಗಳಿಗೆ ಪ್ರವೇಶ ನಿರ್ಬಂಧ
ವಿಶ್ವಾದ್ಯಂತ ತಮಿಳರ ಪ್ರತಿಭಟನೆ
ಸಾವನ್ನು ಆಹ್ವಾನಿಸಿಕೊಂಡ ಪ್ರಭಾಕರನ್: ಕರುಣಾ
ತಮಿಳರಿಗೆ ಸಮಾನಹಕ್ಕು ತಮ್ಮ ಗುರಿ: ರಾಜಪಕ್ಷೆ
ಪಾಕ್ ಅಣ್ವಸ್ತ್ರ ಸುರಕ್ಷತೆ ಪೆಂಟಗನ್‌ಗೆ ತೃಪ್ತಿ
ತಮಿಳು, ಸಿಂಹಳೀಯರ ಅಧಿಕಾರ ಹಂಚಿಕೆಗೆ ಅಮೆರಿಕ ಕರೆ
ಗ್ರಹ ಗತಿ
ದೈನಿಕ - ಕೆಲವು ಅಡೆತಡೆಗಳ ಬಳಿಕ ಯಶಸ್ಸು ನಿಮ್ಮದಾಗಲಿದೆ. ನಿಮ್ಮ ವ್ಯವಹಾರ ಚಟುವಟಿಕೆಗಳು ಕೂಡ ಸರಾಸರಿ ವೇಗದಲ್ಲಿ ಕಾರ್ಯನಿರ್ವಹಿಸಲಿವೆ. ವೈವಾಹಿಕ ವಿಷಯಗಳಿಂದ ಸಂತಸ ಲಭಿಸಲಿದೆ. ಆರೋಗ್ಯ ಯಾವುದೇ ಚಿಂತೆಯ ವಿಷಯವಾಗದು.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಕಾಫಿ ಬೆಳೆಗಾರರ ಪ್ಯಾಕೇಜ್‌ಗೆ ಆದ್ಯತೆ: ಚಂದ್ರೇಗೌಡ
ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ ಕೇಂದ್ರ ಸರ್ಕಾರದ ಮುಂದಿಡುವ ಕಾಫಿ ಪ್ಯಾಕೇಜನ್ನು ತಕ್ಷಣ ಜಾರಿಗೆ ತರುವಂತೆ ಬೆಂಗಳೂರು ಉತ್ತರ ಲೋಕಸಭಾ ಸದಸ್ಯ ಡಿ.ಬಿ. ಚಂದ್ರೇಗೌಡ
ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಬಸ್ ಪಾಸ್
ಬಿಜೆಪಿ ಕತೆ ಏನಾಗುತ್ತೆ ಅಂತ ನೋಡಿ: ಸಿದ್ದರಾಮಯ್ಯ
ಮನರಂಜನೆ
ಚಿತ್ರ ಸುದ್ದಿ - ಕನ್ನಡದಲ್ಲಿ ಈ ವಾರ ಸ್ಟಾರ್ ವಾರ್. ದೊಡ್ಡ ನಟರ ಎರಡು ಚಿತ್ರಗಳು ಒಟ್ಟೊಟ್ಟಿಗೆ ಬಿಡುಗಡೆಯಾಗುತ್ತಿದೆ. ಇದರಿಂದ ಸಹಜವಾಗಿಯೇ ಪ್ರೇಕ್ಷಕರ ಪ್ರತಿಕ್ರಿಯೆ ಯಾವ ಚಿತ್ರಕ್ಕೆ ಹೇಗಿರುತ್ತದೆ ಎಂಬುದು
ಮುಂದೆ ಓದಿ|ಮತ್ತಷ್ಟು...