ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಸಾವನ್ನು ಆಹ್ವಾನಿಸಿಕೊಂಡ ಪ್ರಭಾಕರನ್: ಕರುಣಾ
ಕೊಲಂಬೊ, ಬುಧವಾರ, 20 ಮೇ 2009   ( 13:11 IST )
ವೇಲುಪಿಳ್ಳೈ ಪ್ರಭಾಕರನ್ ಹಿಂಸೆಯನ್ನು ತ್ಯಜಿಸಿ ಮುಖ್ಯವಾಹಿನಿಗೆ ಸೇರಬೇಕೆಂಬ ಮನವಿಗಳಿಗೆ ಎಂದೂ ಕಿವಿಗೊಡದಿದ್ದರಿಂದ ಹಿಂಸಾತ್ಮಕ ಸಾವಿಗೆ ಗುರಿಯಾದನೆಂದು ಎಲ್‌ಟಿಟಿಇ ಮುಖ್ಯಸ್ಥನ ಮಾಜಿ ನಿಕಟವರ್ತಿ ಮಂಗಳವಾರ ತಿಳಿಸಿದ್ದಾರೆ. ಕರ್ನಲ್ ಕರುಣಾ 2004ರಲ್ಲಿ ಪ್ರಭಾಕರನ್‌ ಸಂಗದಿಂದ ಬೇರ್ಪಡುವ ತನಕ ಪೂರ್ವ ಪ್ರದೇಶದ ಎಲ್‌ಟಿಟಿಇ ಕಮಾಂಡರ್ ಆಗಿದ್ದರು.

ಉತ್ತರ ಲಂಕಾದಲ್ಲಿ ತಾವು ಗುಂಡುಹಾರಾಟ ನಿಷೇಧ ವಲಯದಲ್ಲಿ ಪ್ರಭಾಕರನ್ ದೇಹವನ್ನು ಗುರುತಿಸಿದ್ದಾಗಿ ಅವರು ಖಚಿತವಾಗಿ ಹೇಳಿದ್ದಾರೆ.'ಅದು ಪ್ರಭಾಕರನ್ ದೇಹ ಅನ್ನುವುದಕ್ಕೆ ಅನುಮಾನವಿಲ್ಲ. ಅವನು ಸತ್ತಿದ್ದಾನೆನ್ನುವುದು ಸ್ವಲ್ಪಮಟ್ಟಿಗೆ ಖೇದಕರವೆನಿಸಿದರೂ ಅವನು ಯಾರ ಮಾತನ್ನೂ ಕೇಳುತ್ತಿರಲಿಲ್ಲ. ಹಿಂಸಾಚಾರವೊಂದೇ ಏಕೈಕಪರಿಹಾರವೆಂದು ಪ್ರಭಾಕರನ್ ನಂಬಿದ್ದಾಗಿ' ಪ್ರಸಕ್ತ ಫೆಡರಲ್ ಸಚಿವರಾಗಿರುವ ಕರುಣಾ ತಿಳಿಸಿದರು.

ಪ್ರಭಾಕರನ್ ಸರ್ಕಾರದ ಎಲ್ಲ ಪ್ರಸ್ತಾವನೆಗಳನ್ನು ನಿರಾಕರಿಸಿದನೆಂದು ಕರುಣಾ ತಿಳಿಸಿದ್ದು, ಹಿಂಸೆ ತ್ಯಜಿಸಿ ಸರ್ಕಾರದ ಮುಖ್ಯವಾಹಿನಿಗೆ ಸೇರುವ ಎಲ್ಲ ಅವಕಾಶವನ್ನು ಅವನು ಕಳೆದುಕೊಂಡನೆಂದು ಹೇಳಿದರು. ದಶಕಗಳ ಕಾಲದ ಜನಾಂಗೀಯ ಸಂಘರ್ಷಕ್ಕೆ ರಾಜಕೀಯ ಪರಿಹಾರಕ್ಕೆ ತಾವು ಸದಾ ಬಯಸಿದ್ದಾಗಿ ಕರುಣಾ ಹೇಳಿದರು. ಆದರೆ ಆ ಅಭಿಪ್ರಾಯಕ್ಕೆ ಎಲ್‌ಟಿಟಿಇ ನಾಯಕ ಪ್ರಭಾಕರನ್ ಮನ್ನಣೆ ನೀಡಲಿಲ್ಲವೆಂದು ಅವರು ಹೇಳಿದರು.

'ಇದರಿಂದಾಗಿ ಅನೇಕ ಯುವಜನರು ಹತರಾದರು. ಎಲ್‌ಟಿಟಿಇಗೆ ಅನೇಕರನ್ನು ಬಲಪ್ರಯೋಗದಿಂದ ಸೇರಿಸಲಾಯಿತು. ಮಹಿಳೆಯರನ್ನು ಕೂಡ ಪ್ರಭಾಕರನ್ ಬಲವಂತವಾಗಿ ಸಂಘಟನೆಗೆ ಸೇರಿಸಿಕೊಂಡನೆಂದು' ಕರುಣಾ ಹೇಳಿದ್ದಾರೆ.

ತಮಿಳು ಮಕ್ಕಳ್ ವಿದುತಲೈ ಪುಲಿಗಲ್(ಟಿಎಂವಿಪಿ) ರಚಿಸಿದ ಕರುಣಾ, ಉಪನಾಯಕ ಪಿಳ್ಳಯನ್ ಜತೆ ಭಿನ್ನಾಭಿಪ್ರಾಯದಿಂದ ಪಕ್ಷವನ್ನು ತ್ಯಜಿಸಿ ಶ್ರೀಲಂಕಾ ಫ್ರೀಡಂ ಪಾರ್ಟಿಯ ಉಪಾಧ್ಯಕ್ಷರಾಗಿ ಸೇರಿದರು. ಕರುಣಾ ಅವರನ್ನು ಇತ್ತೀಚೆಗೆ ರಾಷ್ಟ್ರೀಯ ಭಾವೈಕ್ಯತೆ ಮತ್ತು ಸಾಮರಸ್ಯ ಸಚಿವರಾಗಿ ಮಹೀಂದ್ರ ರಾಜಪಕ್ಷ ಸಂಪುಟದಲ್ಲಿ ನೇಮಕಮಾಡಲಾಗಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ತಮಿಳರಿಗೆ ಸಮಾನಹಕ್ಕು ತಮ್ಮ ಗುರಿ: ರಾಜಪಕ್ಷೆ
ಪಾಕ್ ಅಣ್ವಸ್ತ್ರ ಸುರಕ್ಷತೆ ಪೆಂಟಗನ್‌ಗೆ ತೃಪ್ತಿ
ತಮಿಳು, ಸಿಂಹಳೀಯರ ಅಧಿಕಾರ ಹಂಚಿಕೆಗೆ ಅಮೆರಿಕ ಕರೆ
ಬಾನ್ ಕಿ ಮ‌ೂನ್ ಶ್ರೀಲಂಕಾಗೆ ಭೇಟಿ
ಇಂಡೋನೇಶಿಯ ವಿಮಾನ ಅಪಘಾತ: 68 ಬಲಿ
ಸ್ವಾತ್ ಕಣಿವೆಯಲ್ಲಿ 27 ತಾಲಿಬಾನಿಗಳು ಹತ
ಗ್ರಹ ಗತಿ
ದೈನಿಕ - ವಿವಾದಗಳಿಗೆ ಚಾಲನೆ, ಪಿತೃ ನೆರವಿನಿಂದ ಆರ್ಥಿಕ ಸಂಕಷ್ಟ ನಿವಾರಣೆಗೊಂಡು ನೂತನ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಕುಟುಂಬ ಮತ್ತು ಕಚೇರಿ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದೀರಿ. ಆದರೂ ಈಗ ಏನು ಬೇಕಾದರೂ ಮಾಡು ಎಂದು ಸ್ವತಂತ್ರವಾಗಿ ನಿಮ್ಮನ್ನು ಬಿಟ್ಟದ್ದು ನಿಮಗೆ ಖುಷಿಯಾಗುತ್ತದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ದೇವೇಗೌಡರ 77ನೇ ಹುಟ್ಟು ಹಬ್ಬ ಆಚರಣೆ
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ..
ಜೆಡಿಎಸ್ ಕಾಂಗ್ರೆಸ್ ಜತೆ ವಿಲೀನವಾಗಲಿ: ಡಿವಿಎಸ್
ರಾಜ್ಯವನ್ನು ನಿರ್ಲಕ್ಷಿಸಿದರೆ ಎಚ್ಚರ!: ಯುಪಿಎಗೆ ಸವಾಲ್
ಮನರಂಜನೆ
ಚಿತ್ರ ಸುದ್ದಿ - ಖೇಣಿ ಅವರಿಗೂ ಚಿತ್ರರಂಗಕ್ಕೂ ಒಂದು ಸಂಬಂಧ ಇದ್ದೇ ಇರುತ್ತದೆ. ಉದ್ಯಮಿಯಾದರೂ ಅವರಿಗೆ ಬಣ್ಣದ ಲೋಕದ ಬಗ್ಗೆ ಸ್ವಲ್ಪ ಕ್ರೇಜ್ ಹೆಚ್ಚೇ ಎನ್ನಬಹುದು. ಅವರು ಎರಡು ಮೂರು ಚಿತ್ರಗಳಲ್ಲಿ ಕೆಲವು ಪಾತ್ರಗಳನ್ನು
ಮುಂದೆ ಓದಿ|ಮತ್ತಷ್ಟು...