ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ತಮಿಳರಿಗೆ ಸಮಾನಹಕ್ಕು ತಮ್ಮ ಗುರಿ: ರಾಜಪಕ್ಷೆ
ಕೊಲಂಬೊ, ಬುಧವಾರ, 20 ಮೇ 2009   ( 12:15 IST )
ಶ್ರೀಲಂಕಾ ತಮಿಳರ ಹಿತರಕ್ಷಣೆಗಾಗಿ ಹೋರಾಡಿದ ಎಲ್‌ಟಿಟಿಇ ಸಂಘಟನೆ ನಿರ್ಮ‌ೂಲನೆಯಾಗಿದ್ದು, ರಾಜಕೀಯ ಪರಿಹಾರದ ಮ‌ೂಲಕ ತಮಿಳರಿಗೆ ಸಮಾನ ಹಕ್ಕುಗಳನ್ನು ನೀಡುವ ಪ್ರಸ್ತಾವನೆಯನ್ನು ಅಧ್ಯಕ್ಷ ರಾಜಪಕ್ಷೆ ಮಂಡಿಸಿದ್ದಾರೆ. ಎಲ್‌ಟಿಟಿಇ ವರಿಷ್ಠ ವೇಲುಪಿಳ್ಳೈ ಪ್ರಭಾಕರನ್ ಹತ್ಯೆಯಾದ ಮರುದಿನವೇ ರಾಜಪಕ್ಷೆ ಸಂಸತ್ ಅಧಿವೇಶನ ಕರೆದು ತಮಿಳಿನಲ್ಲಿ ಸಂಕ್ಷಿಪ್ತ ಭಾಷಣ ಮಾಡುವ ಮ‌ೂಲಕ ಉತ್ತರದಲ್ಲಿರುವ ಅಲ್ಪಸಂಖ್ಯಾತ ತಮಿಳರನ್ನು ತಲುಪಲು ಅವರು ಯತ್ನಿಸಿದರು.

ಮಿಲಿಟರಿ ಪರಿಹಾರವನ್ನು ಅಂತಿಮವೆಂದು ಸರ್ಕಾರ ಒಪ್ಪಿಕೊಳ್ಳುವುದಿಲ್ಲ ಮತ್ತು ಎಲ್ಲ ಸಮುದಾಯದವರಿಗೆ ಸಮಾನ ಹಕ್ಕುಗಳನ್ನು ನೀಡುವುದು ತಮ್ಮ ಗುರಿಯೆಂದು ರಾಜಪಕ್ಷೆ ಹೇಳಿದರು.ರಾಷ್ಟ್ರದ ಎಲ್ಲ ಭಾಗಗಳ ಜನರ ಹಕ್ಕಾದ ಸ್ವಾತಂತ್ರ್ಯವನ್ನು ತಮಿಳುಜನರಿಗೆ ನೀಡುವ ಅಗತ್ಯವಿದೆ ಎಂದು ರಾಜಪಕ್ಷೆ ತಿಳಿಸಿದ್ದು, ಯಾವುದೇ ರಾಷ್ಟ್ರ ಅಥವಾ ಸರ್ಕಾರಕ್ಕಿಂತ ವೇಗವಾಗಿ ತಮಿಳರಿಗೆ ಅಗತ್ಯವಾದ ರಾಜಕೀಯ ಪರಿಹಾರಗಳನ್ನು ಅವರ ಸಮೀಪಕ್ಕೆ ತರುವುದಾಗಿ ರಾಜಪಕ್ಷೆ ಹೇಳಿದರು.

ಆದರೆ ಅದು ಆಮದಾದ ಪರಿಹಾರವಲ್ಲ. ಇತರೆ ರಾಷ್ಟ್ರಗಳು ಸಲಹೆ ಮಾಡಿದ ಪರಿಹಾರಗಳನ್ನು ಕುರಿತು ಪ್ರಯೋಗ ಮಾಡಲು ನಮಗೆ ವೇಳೆಯಿಲ್ಲ ಎಂದು ಅವರು ಹೇಳಿ ರಾಷ್ಟ್ರದಲ್ಲೇ ಪರಿಹಾರ ಹುಡುಕುವುದಾಗಿ ತಿಳಿಸಿದರು. ಅದಕ್ಕೆ ಅಂತಾರಾಷ್ಟ್ರೀಯ ಸಮುದಾಯದ ನೆರವನ್ನು ನಿರೀಕ್ಷಿಸುತ್ತಿರುವುದಾಗಿ ಅವರು ನುಡಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಪಾಕ್ ಅಣ್ವಸ್ತ್ರ ಸುರಕ್ಷತೆ ಪೆಂಟಗನ್‌ಗೆ ತೃಪ್ತಿ
ತಮಿಳು, ಸಿಂಹಳೀಯರ ಅಧಿಕಾರ ಹಂಚಿಕೆಗೆ ಅಮೆರಿಕ ಕರೆ
ಬಾನ್ ಕಿ ಮ‌ೂನ್ ಶ್ರೀಲಂಕಾಗೆ ಭೇಟಿ
ಇಂಡೋನೇಶಿಯ ವಿಮಾನ ಅಪಘಾತ: 68 ಬಲಿ
ಸ್ವಾತ್ ಕಣಿವೆಯಲ್ಲಿ 27 ತಾಲಿಬಾನಿಗಳು ಹತ
ಮಗನ ಕಣ್ಣನ್ನು ಕಚ್ಚಿದ ಮಾದಕವ್ಯಸನಿ ತಂದೆ
ಗ್ರಹ ಗತಿ
ದೈನಿಕ - ವಿವಾದಗಳಿಗೆ ಚಾಲನೆ, ಪಿತೃ ನೆರವಿನಿಂದ ಆರ್ಥಿಕ ಸಂಕಷ್ಟ ನಿವಾರಣೆಗೊಂಡು ನೂತನ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಕುಟುಂಬ ಮತ್ತು ಕಚೇರಿ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದೀರಿ. ಆದರೂ ಈಗ ಏನು ಬೇಕಾದರೂ ಮಾಡು ಎಂದು ಸ್ವತಂತ್ರವಾಗಿ ನಿಮ್ಮನ್ನು ಬಿಟ್ಟದ್ದು ನಿಮಗೆ ಖುಷಿಯಾಗುತ್ತದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ದೇವೇಗೌಡರ 77ನೇ ಹುಟ್ಟು ಹಬ್ಬ ಆಚರಣೆ
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ..
ಜೆಡಿಎಸ್ ಕಾಂಗ್ರೆಸ್ ಜತೆ ವಿಲೀನವಾಗಲಿ: ಡಿವಿಎಸ್
ರಾಜ್ಯವನ್ನು ನಿರ್ಲಕ್ಷಿಸಿದರೆ ಎಚ್ಚರ!: ಯುಪಿಎಗೆ ಸವಾಲ್
ಮನರಂಜನೆ
ಚಿತ್ರ ಸುದ್ದಿ - ಖೇಣಿ ಅವರಿಗೂ ಚಿತ್ರರಂಗಕ್ಕೂ ಒಂದು ಸಂಬಂಧ ಇದ್ದೇ ಇರುತ್ತದೆ. ಉದ್ಯಮಿಯಾದರೂ ಅವರಿಗೆ ಬಣ್ಣದ ಲೋಕದ ಬಗ್ಗೆ ಸ್ವಲ್ಪ ಕ್ರೇಜ್ ಹೆಚ್ಚೇ ಎನ್ನಬಹುದು. ಅವರು ಎರಡು ಮೂರು ಚಿತ್ರಗಳಲ್ಲಿ ಕೆಲವು ಪಾತ್ರಗಳನ್ನು
ಮುಂದೆ ಓದಿ|ಮತ್ತಷ್ಟು...