ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಪಾಕ್ ಅಣ್ವಸ್ತ್ರ ಸುರಕ್ಷತೆ ಪೆಂಟಗನ್‌ಗೆ ತೃಪ್ತಿ
ವಾಷಿಂಗ್ಟನ್, ಬುಧವಾರ, 20 ಮೇ 2009   ( 11:23 IST )
ತನ್ನ ಅಣ್ವಸ್ತ್ರಗಳ ಸುರಕ್ಷತೆ ಖಾತರಿಗೆ ಪಾಕಿಸ್ತಾನ ಮಿಲಿಟರಿ ಅನುಸರಿಸಿದ ಶಿಷ್ಟಾಚಾರಗಳ ಬಗ್ಗೆ ಪೆಂಟಗಾನ್ ತೃಪ್ತಿಹೊಂದಿರುವುದಾಗಿ ಪೆಂಟಗಾನ್ ತಿಳಿಸಿದೆ. ಆದರೆ ತಾಲಿಬಾನ್ ಪಾಕ್ ಅಣ್ವಸ್ತ್ರಗಳ ಕೈವಶಕ್ಕೆ ಯತ್ನಿಸಿದರೆ ಅಮೆರಿಕವು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ. ಪಾಕಿಸ್ತಾನದ ಎಲ್ಲ ಅಣ್ವಸ್ತ್ರಗಳನ್ನು ಎಲ್ಲಿ ಇರಿಸಲಾಗಿದೆಯೆಂದು ಅಮೆರಿಕಕ್ಕೆ ತಿಳಿದಿಲ್ಲವೆಂದು ಸಿಐಎ ನಿರ್ದೇಶಕ ಲಿಯೋನ್ ಪೆನೆಟ್ಟಾ ತಿಳಿಸಿದ ಮರುದಿನವೇ ಪೆಂಟಗಾನ್ ಹೇಳಿಕೆ ಹೊರಬಿದ್ದಿದೆ.

ರಕ್ಷಣಾ ಇಲಾಖೆಯ ವಕ್ತಾರ ಜೆಫ್ ಮಾರೆಲ್ ವರದಿಗಾರರ ಜತೆ ಮಾತನಾಡುತ್ತಾ, ಅಣ್ವಸ್ತ್ರಗಳ ಸುರಕ್ಷಿತತೆಗೆ ಪಾಕಿಸ್ತಾನ ಮಿಲಿಟರಿ ಕೈಗೊಂಡ ಶಿಷ್ಟಾಚಾರಗಳ ಬಗ್ಗೆ ತಮಗೆ ಸಮಾಧಾನವಿದೆ ಎಂದು ತಿಳಿಸಿದರು.

ಪಾಕಿಸ್ತಾನದ ಅಣ್ವಸ್ತ್ರಗಳು ತಾಲಿಬಾನಿಗಳ ಕೈವಶವಾದ ಸಂದರ್ಭದಲ್ಲಿ ಅವುಗಳ ಮರುಸ್ವಾಧೀನಕ್ಕೆ ವಿಶೇಷ ಕಾರ್ಯಾಚರಣೆ ಪಡೆಗಳು ತುರ್ತು ಯೋಜನೆಯನ್ನು ಹೊಂದಿರುವ ವರದಿಗಳನ್ನು ಕುರಿತು ಪ್ರಶ್ನಿಸಿದಾಗ, ಪಾಕಿಸ್ತಾನ ಕೈಗೊಂಡ ಸುರಕ್ಷತೆ ಕ್ರಮಗಳ ಬಗ್ಗೆ ತಮಗೆ ತೃಪ್ತಿಯಿರುವುದಾಗಿ ಅವರು ಹೇಳಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ತಮಿಳು, ಸಿಂಹಳೀಯರ ಅಧಿಕಾರ ಹಂಚಿಕೆಗೆ ಅಮೆರಿಕ ಕರೆ
ಬಾನ್ ಕಿ ಮ‌ೂನ್ ಶ್ರೀಲಂಕಾಗೆ ಭೇಟಿ
ಇಂಡೋನೇಶಿಯ ವಿಮಾನ ಅಪಘಾತ: 68 ಬಲಿ
ಸ್ವಾತ್ ಕಣಿವೆಯಲ್ಲಿ 27 ತಾಲಿಬಾನಿಗಳು ಹತ
ಮಗನ ಕಣ್ಣನ್ನು ಕಚ್ಚಿದ ಮಾದಕವ್ಯಸನಿ ತಂದೆ
ಮಾದಕವಸ್ತು ಸಾಗಣೆ: ಇರಾನ್‌ನಲ್ಲಿ ಗಲ್ಲುಶಿಕ್ಷೆ
ಗ್ರಹ ಗತಿ
ದೈನಿಕ - ವಿವಾದಗಳಿಗೆ ಚಾಲನೆ, ಪಿತೃ ನೆರವಿನಿಂದ ಆರ್ಥಿಕ ಸಂಕಷ್ಟ ನಿವಾರಣೆಗೊಂಡು ನೂತನ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಕುಟುಂಬ ಮತ್ತು ಕಚೇರಿ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದೀರಿ. ಆದರೂ ಈಗ ಏನು ಬೇಕಾದರೂ ಮಾಡು ಎಂದು ಸ್ವತಂತ್ರವಾಗಿ ನಿಮ್ಮನ್ನು ಬಿಟ್ಟದ್ದು ನಿಮಗೆ ಖುಷಿಯಾಗುತ್ತದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ದೇವೇಗೌಡರ 77ನೇ ಹುಟ್ಟು ಹಬ್ಬ ಆಚರಣೆ
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ..
ಜೆಡಿಎಸ್ ಕಾಂಗ್ರೆಸ್ ಜತೆ ವಿಲೀನವಾಗಲಿ: ಡಿವಿಎಸ್
ರಾಜ್ಯವನ್ನು ನಿರ್ಲಕ್ಷಿಸಿದರೆ ಎಚ್ಚರ!: ಯುಪಿಎಗೆ ಸವಾಲ್
ಮನರಂಜನೆ
ಚಿತ್ರ ಸುದ್ದಿ - ಖೇಣಿ ಅವರಿಗೂ ಚಿತ್ರರಂಗಕ್ಕೂ ಒಂದು ಸಂಬಂಧ ಇದ್ದೇ ಇರುತ್ತದೆ. ಉದ್ಯಮಿಯಾದರೂ ಅವರಿಗೆ ಬಣ್ಣದ ಲೋಕದ ಬಗ್ಗೆ ಸ್ವಲ್ಪ ಕ್ರೇಜ್ ಹೆಚ್ಚೇ ಎನ್ನಬಹುದು. ಅವರು ಎರಡು ಮೂರು ಚಿತ್ರಗಳಲ್ಲಿ ಕೆಲವು ಪಾತ್ರಗಳನ್ನು
ಮುಂದೆ ಓದಿ|ಮತ್ತಷ್ಟು...