ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಬಾನ್ ಕಿ ಮ‌ೂನ್ ಶ್ರೀಲಂಕಾಗೆ ಭೇಟಿ
ಜಿನೀವಾ, ಬುಧವಾರ, 20 ಮೇ 2009   ( 10:53 IST )
ಶ್ರೀಲಂಕಾ ಸೇನೆ ಮತ್ತು ಎಲ್‌ಟಿಟಿಇ ನಡುವೆ ಕದನವು ಕೊನೆಗೂ ಮುಕ್ತಾಯ ಕಂಡಿತು. ಪ್ರಭಾಕರನ್ ಸಾವಿನೊಂದಿಗೆ ಎಲ್‌ಟಿಟಿಇ ರಕ್ತಸಿಕ್ತ ಅಧ್ಯಾಯಕ್ಕೆ ತೆರೆಬಿತ್ತು. ಆದರೆ ಸೇನೆ ಮತ್ತು ಎಲ್‌ಟಿಟಿಇ ನಡುವೆ ಕದನದಿಂದ ನಿರಾಶ್ರಿತರಾದ ಸಾವಿರಾರು ಮಂದಿ ತಮಿಳರಿಗೆ ತುರ್ತು ಮಾನವೀಯ ನೆರವು ನೀಡಲು ಪರಿಹಾರ ಏಜನ್ಸಿಗಳು ಮತ್ತು ಸರ್ಕಾರಗಳು ಕರೆ ನೀಡಿವೆ.

ಈ ಕುರಿತು ಶ್ರೀಲಂಕಾಗೆ ಭೇಟಿ ಕೊಡುವುದಾಗಿ ವಿಶ್ವಸಂಸ್ಥೆ ಮುಖ್ಯಸ್ಥ ಬಾನ್ ಕಿ ಮ‌ೂನ್ ಪ್ರಕಟಿಸಿದ್ದಾರೆ. ಮಿಲಿಟರಿ ಕಾರ್ಯಾಚರಣೆ ಮುಗಿದಿದ್ದರಿಂದ ತಮಗೆ ಸಮಾಧಾನವಾಗಿದೆ ಎಂದು ಬಾನ್ ಹೇಳಿದ್ದಾರೆ. ಆದರೆ ಅಪಾರ ಸಂಖ್ಯೆಯಲ್ಲಿ ನಾಗರಿಕರ ಸಾವುನೋವಿನಿಂದ ತಾವು ಕಳವಳಪಟ್ಟಿದ್ದಾಗಿ ಬಾನ್ ಹೇಳಿದ್ದು, ಮಾನವೀಯ ಪರಿಹಾರದಲ್ಲಿ ತುರ್ತು ಪ್ರಗತಿ, ಪುನರ್ನಿರ್ಮಾಣ ಮತ್ತು ಸುಸ್ಥಿರ ರಾಜಕೀಯ ಮಾತುಕತೆಯನ್ನು ಕಾಣಲು ತಾವು ಬಯಸುವುದಾಗಿ ಅವರು ಹೇಳಿದ್ದಾರೆ.

ಎಲ್ಲ ರಂಗಗಳಲ್ಲಿ ಪ್ರಗತಿ ಸಮಾನಾಂತರವಾಗಿರಬೇಕು ಮತ್ತು ಅದು ಈಗಲೇ ಆರಂಭವಾಗಬೇಕು ಎಂದು ಅವರು ಹೇಳಿದ್ದು, ಯಾವುದೇ ಯುದ್ಧಾಪರಾಧದ ಗಂಭೀರ ಆರೋಪಗಳನ್ನು ಸೂಕ್ತ ವಿಚಾರಣೆ ಮಾಡುವುದಾಗಿ ತಿಳಿಸಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಇಂಡೋನೇಶಿಯ ವಿಮಾನ ಅಪಘಾತ: 68 ಬಲಿ
ಸ್ವಾತ್ ಕಣಿವೆಯಲ್ಲಿ 27 ತಾಲಿಬಾನಿಗಳು ಹತ
ಮಗನ ಕಣ್ಣನ್ನು ಕಚ್ಚಿದ ಮಾದಕವ್ಯಸನಿ ತಂದೆ
ಮಾದಕವಸ್ತು ಸಾಗಣೆ: ಇರಾನ್‌ನಲ್ಲಿ ಗಲ್ಲುಶಿಕ್ಷೆ
ತಮಿಳರು, ಲಂಡನ್ ಪೊಲೀಸರ ಮಾರಾಮಾರಿ
ಪ್ರಭಾಕರನ್ ಮೃತದೇಹ ಪತ್ತೆ: ಊಹಾಪೋಹಗಳಿಗೆ ತೆರೆ
ಗ್ರಹ ಗತಿ
ದೈನಿಕ - ವಿವಾದಗಳಿಗೆ ಚಾಲನೆ, ಪಿತೃ ನೆರವಿನಿಂದ ಆರ್ಥಿಕ ಸಂಕಷ್ಟ ನಿವಾರಣೆಗೊಂಡು ನೂತನ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಕುಟುಂಬ ಮತ್ತು ಕಚೇರಿ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದೀರಿ. ಆದರೂ ಈಗ ಏನು ಬೇಕಾದರೂ ಮಾಡು ಎಂದು ಸ್ವತಂತ್ರವಾಗಿ ನಿಮ್ಮನ್ನು ಬಿಟ್ಟದ್ದು ನಿಮಗೆ ಖುಷಿಯಾಗುತ್ತದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ದೇವೇಗೌಡರ 77ನೇ ಹುಟ್ಟು ಹಬ್ಬ ಆಚರಣೆ
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ..
ಜೆಡಿಎಸ್ ಕಾಂಗ್ರೆಸ್ ಜತೆ ವಿಲೀನವಾಗಲಿ: ಡಿವಿಎಸ್
ರಾಜ್ಯವನ್ನು ನಿರ್ಲಕ್ಷಿಸಿದರೆ ಎಚ್ಚರ!: ಯುಪಿಎಗೆ ಸವಾಲ್
ಮನರಂಜನೆ
ಚಿತ್ರ ಸುದ್ದಿ - ಖೇಣಿ ಅವರಿಗೂ ಚಿತ್ರರಂಗಕ್ಕೂ ಒಂದು ಸಂಬಂಧ ಇದ್ದೇ ಇರುತ್ತದೆ. ಉದ್ಯಮಿಯಾದರೂ ಅವರಿಗೆ ಬಣ್ಣದ ಲೋಕದ ಬಗ್ಗೆ ಸ್ವಲ್ಪ ಕ್ರೇಜ್ ಹೆಚ್ಚೇ ಎನ್ನಬಹುದು. ಅವರು ಎರಡು ಮೂರು ಚಿತ್ರಗಳಲ್ಲಿ ಕೆಲವು ಪಾತ್ರಗಳನ್ನು
ಮುಂದೆ ಓದಿ|ಮತ್ತಷ್ಟು...