ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಸ್ವಾತ್ ಕಣಿವೆಯಲ್ಲಿ 27 ತಾಲಿಬಾನಿಗಳು ಹತ
ಇಸ್ಲಾಮಾಬಾದ್, ಮಂಗಳವಾರ, 19 ಮೇ 2009   ( 18:23 IST )
ಪಾಕಿಸ್ತಾನದ ಭದ್ರತಾಪಡೆಗಳು ಸ್ವಾತ್‌ನ ಎರಡು ಆಯಕಟ್ಟಿನ ನಗರಗಳಿಗೆ ಉಭಯ ಪಾರ್ಶ್ವಗಳಿಂದ ಆಕ್ರಮಣ ಮಾಡಿದ್ದು, ತಾಲಿಬಾನ್ ಪೀಡಿತ ಮಿಂಗೋರಾಗೆ ಸಮೀಪಿಸಿದೆ. ವಾಯವ್ಯ ಕಣಿವೆಯಲ್ಲಿ ಶಾಂತಿ ಸ್ಥಾಪನೆಯಾಗುವ ತನಕ ಕಾರ್ಯಾಚರಣೆ ಮುಂದುವರಿಸುವುದಾಗಿ ಸರ್ಕಾರ ತಿಳಿಸಿದೆ.

ಹೆಲಿಕಾಪ್ಟರ್ ಗನ್‌ಶಿಪ್ ಮತ್ತು ಸಮರಜೆಟ್ ಬೆಂಬಲದಿಂದ ಪಾಕಿಸ್ತಾನ ಸೇನೆಯು ಮ‌ೂವರು ತಾಲಿಬಾನ್ ಕಮಾಂಡರ್‌ಗಳು ಸೇರಿದಂತೆ 27 ಮಂದಿ ಉಗ್ರರನ್ನು ಬಲಿತೆಗೆದುಕೊಂಡಿದ್ದು, ಭಾರೀ ಹೋರಾಟದ ನಿರೀಕ್ಷೆಯಲ್ಲಿ ಮಿಂಗೋರಾ ನಿವಾಸಿಗಳಿಗೆ ನಗರವನ್ನು ತೆರವು ಮಾಡುವಂತೆ ಸೇನೆ ಆದೇಶಿಸಿದೆ.

ಮಿಂಗೋರಾ ಹಾದಿಯಲ್ಲಿ ತಾಲಿಬಾನ್ ಭದ್ರಕೋಟೆಯೆಂದು ಹೇಳಲಾದ ಮಾಟ್ಟಾ ಮತ್ತು ಕಾಂಜುಗೆ ಪಡೆಗಳು ಪ್ರವೇಶಿಸಿವೆ. ಮಿಂಗೋರಾದಲ್ಲಿ ನೂರಾರು ತಾಲಿಬಾನ್ ಉಗ್ರರು ಅಡಗಿದ್ದು, ಪ್ರಮುಖ ಕಟ್ಟಡಗಳನ್ನು ಆಕ್ರಮಿಸಿಕೊಂಡಿದ್ದಾರೆ ಮತ್ತು ರಸ್ತೆಗಳಲ್ಲಿ ನೆಲಬಾಂಬ್‌ಗಳನ್ನು ಇರಿಸಿ ಪಡೆಗಳ ಪ್ರವೇಶಕ್ಕೆ ತಡೆಯೊಡ್ಡಿದ್ದಾರೆ.

ಮಿಂಗೋರಾ ಕದನ ಸುದೀರ್ಘ ಮತ್ತು ರಕ್ತಸಿಕ್ತವಾಗಬಹುದೆಂದು ತಜ್ಞರು ಹೇಳಿದ್ದು, ಸೇನೆ ಪ್ರವೇಶಕ್ಕೆ ಮುಂಚಿತವಾಗಿ ನಾಗರಿಕರು ನಗರವನ್ನು ತ್ಯಜಿಸುವುದನ್ನು ಖಾತ್ರಿ ಮಾಡಲಾಗುತ್ತಿದೆ. ಉಗ್ರರು ತಪ್ಪಿಸಿಕೊಳ್ಳದಂತೆ ಮಿಂಗೋರಾದ ಉತ್ತರ ಮತ್ತು ದಕ್ಷಿಣ ದಿಕ್ಕುಗಳಿಂದ ಸೇನೆ ಧಾವಿಸುತ್ತಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಮಗನ ಕಣ್ಣನ್ನು ಕಚ್ಚಿದ ಮಾದಕವ್ಯಸನಿ ತಂದೆ
ಮಾದಕವಸ್ತು ಸಾಗಣೆ: ಇರಾನ್‌ನಲ್ಲಿ ಗಲ್ಲುಶಿಕ್ಷೆ
ತಮಿಳರು, ಲಂಡನ್ ಪೊಲೀಸರ ಮಾರಾಮಾರಿ
ಪ್ರಭಾಕರನ್ ಮೃತದೇಹ ಪತ್ತೆ: ಊಹಾಪೋಹಗಳಿಗೆ ತೆರೆ
ಹಂದಿ ಜ್ವರ ಸೋಂಕು ಗುರುತಿಸಲು ದುಬೈ ನಿಲ್ದಾಣ ವಿಫಲ
ತಮಿಳರ ಹಿತರಕ್ಷಣೆಗೆ ಅಮೆರಿಕ ಕರೆ
ಗ್ರಹ ಗತಿ
ದೈನಿಕ - ವಿವಾದಗಳಿಗೆ ಚಾಲನೆ, ಪಿತೃ ನೆರವಿನಿಂದ ಆರ್ಥಿಕ ಸಂಕಷ್ಟ ನಿವಾರಣೆಗೊಂಡು ನೂತನ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಕುಟುಂಬ ಮತ್ತು ಕಚೇರಿ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದೀರಿ. ಆದರೂ ಈಗ ಏನು ಬೇಕಾದರೂ ಮಾಡು ಎಂದು ಸ್ವತಂತ್ರವಾಗಿ ನಿಮ್ಮನ್ನು ಬಿಟ್ಟದ್ದು ನಿಮಗೆ ಖುಷಿಯಾಗುತ್ತದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ದೇವೇಗೌಡರ 77ನೇ ಹುಟ್ಟು ಹಬ್ಬ ಆಚರಣೆ
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ..
ಜೆಡಿಎಸ್ ಕಾಂಗ್ರೆಸ್ ಜತೆ ವಿಲೀನವಾಗಲಿ: ಡಿವಿಎಸ್
ರಾಜ್ಯವನ್ನು ನಿರ್ಲಕ್ಷಿಸಿದರೆ ಎಚ್ಚರ!: ಯುಪಿಎಗೆ ಸವಾಲ್
ಮನರಂಜನೆ
ಚಿತ್ರ ಸುದ್ದಿ - ಖೇಣಿ ಅವರಿಗೂ ಚಿತ್ರರಂಗಕ್ಕೂ ಒಂದು ಸಂಬಂಧ ಇದ್ದೇ ಇರುತ್ತದೆ. ಉದ್ಯಮಿಯಾದರೂ ಅವರಿಗೆ ಬಣ್ಣದ ಲೋಕದ ಬಗ್ಗೆ ಸ್ವಲ್ಪ ಕ್ರೇಜ್ ಹೆಚ್ಚೇ ಎನ್ನಬಹುದು. ಅವರು ಎರಡು ಮೂರು ಚಿತ್ರಗಳಲ್ಲಿ ಕೆಲವು ಪಾತ್ರಗಳನ್ನು
ಮುಂದೆ ಓದಿ|ಮತ್ತಷ್ಟು...