ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಮಗನ ಕಣ್ಣನ್ನು ಕಚ್ಚಿದ ಮಾದಕವ್ಯಸನಿ ತಂದೆ
ಬೇಕರ್ಸ್‌ಫೀಲ್ಡ್, ಮಂಗಳವಾರ, 19 ಮೇ 2009   ( 18:13 IST )
4 ವರ್ಷ ವಯಸ್ಸಿನ ಬಾಲಕನ ಕಣ್ಣನ್ನು ಕಚ್ಚಿ, ಇನ್ನೊಂದು ಕಣ್ಣನ್ನು ಸ್ವತಃ ಅವನ ತಂದೆಯೇ ವಿರೂಪಗೊಳಿಸಿದ್ದರಿಂದ ಬಾಲಕ ಶಾಶ್ವತ ಕುರುಡಾಗಬಹುದೆಂದು ಪೊಲೀಸರು ತಿಳಿಸಿದ್ದಾರೆ. 34 ವರ್ಷ ವಯಸ್ಸಿನ ಏಂಜಲ್ ವಿಡಾಲ್ ಮೆಂಡೋಜಾ ಮಾದಕವಸ್ತು ಪಿಸಿಪಿ ಸೇವಿಸಿ ಅದರ ಪ್ರಭಾವಕ್ಕೆ ಒಳಗಾಗಿ ಕಳೆದ ಏಪ್ರಿಲ್ 28ರಂದು ಬಾಲಕನ ಮೇಲೆ ದಾಳಿ ಮಾಡಿದ್ದಾನೆಂದು ಬೇಕರ್ಸ್‌ಫೀಲ್ಡ್ ಕ್ಯಾಲಿಫೋರ್ನಿಯ ಸುದ್ದಿಪತ್ರಿಕೆ ತಿಳಿಸಿದೆ.

ಬಳಿಕ ಮೆಂಡೋಜಾ ತನ್ನ ವೀಲ್‌ಚೇರ್ ಹೊರಕ್ಕೆ ತಳ್ಳಿ ಸ್ವತಃ ತನ್ನ ಕಾಲುಗಳನ್ನು ಕೊಡಲಿಯಿಂದ ಕೊಚ್ಚಿದನೆಂದು ಪೊಲೀಸರು ತಿಳಿಸಿದ್ದಾರೆ. ತಂದೆ ನನ್ನ ಕಣ್ಣುಗಳನ್ನು ತಿಂದರೆಂದು ನಾಲ್ಕು ವರ್ಷದ ಬಾಲಕ ಪೊಲೀಸರಿಗೆ ಅಳುತ್ತಾ ತಿಳಿಸಿದ್ದಾನೆ. ಬಾಲಕ ಏಂಜಲೊ ದೃಷ್ಟಿ ಉಳಿಯುವುದೇ ಎನ್ನುವುದು ಅಸ್ಪಷ್ಟವಾಗಿದೆ.

ಬಾಲಕನ ತಾಯಿ ಆ ಸಂದರ್ಭದಲ್ಲಿ ಮನೆಯಲ್ಲಿರಲಿಲ್ಲವೆಂದು ಹೇಳಲಾಗಿದೆ. ಬಾಲಕನ ತಂದೆಯ ವಿಚಾರಣೆ ಬುಧವಾರ ನಡೆಯಲಿದ್ದು, ಹಾನಿ, ಚಿತ್ರಹಿಂಸೆ, ಮಕ್ಕಳ ಮೇಲೆ ಕ್ರೌರ್ಯದ ಆರೋಪಗಳನ್ನು ಹೊರಿಸಲಾಗಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಮಾದಕವಸ್ತು ಸಾಗಣೆ: ಇರಾನ್‌ನಲ್ಲಿ ಗಲ್ಲುಶಿಕ್ಷೆ
ತಮಿಳರು, ಲಂಡನ್ ಪೊಲೀಸರ ಮಾರಾಮಾರಿ
ಪ್ರಭಾಕರನ್ ಮೃತದೇಹ ಪತ್ತೆ: ಊಹಾಪೋಹಗಳಿಗೆ ತೆರೆ
ಹಂದಿ ಜ್ವರ ಸೋಂಕು ಗುರುತಿಸಲು ದುಬೈ ನಿಲ್ದಾಣ ವಿಫಲ
ತಮಿಳರ ಹಿತರಕ್ಷಣೆಗೆ ಅಮೆರಿಕ ಕರೆ
ಪ್ರಭಾಕರನ್ ಗತಿ ಏನಾಯಿತು: ದೃಢಪಡಿಸದ ರಾಜಪಕ್ಷೆ
ಗ್ರಹ ಗತಿ
ದೈನಿಕ - ವಿವಾದಗಳಿಗೆ ಚಾಲನೆ, ಪಿತೃ ನೆರವಿನಿಂದ ಆರ್ಥಿಕ ಸಂಕಷ್ಟ ನಿವಾರಣೆಗೊಂಡು ನೂತನ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಕುಟುಂಬ ಮತ್ತು ಕಚೇರಿ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದೀರಿ. ಆದರೂ ಈಗ ಏನು ಬೇಕಾದರೂ ಮಾಡು ಎಂದು ಸ್ವತಂತ್ರವಾಗಿ ನಿಮ್ಮನ್ನು ಬಿಟ್ಟದ್ದು ನಿಮಗೆ ಖುಷಿಯಾಗುತ್ತದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ದೇವೇಗೌಡರ 77ನೇ ಹುಟ್ಟು ಹಬ್ಬ ಆಚರಣೆ
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ..
ಜೆಡಿಎಸ್ ಕಾಂಗ್ರೆಸ್ ಜತೆ ವಿಲೀನವಾಗಲಿ: ಡಿವಿಎಸ್
ರಾಜ್ಯವನ್ನು ನಿರ್ಲಕ್ಷಿಸಿದರೆ ಎಚ್ಚರ!: ಯುಪಿಎಗೆ ಸವಾಲ್
ಮನರಂಜನೆ
ಚಿತ್ರ ಸುದ್ದಿ - ಖೇಣಿ ಅವರಿಗೂ ಚಿತ್ರರಂಗಕ್ಕೂ ಒಂದು ಸಂಬಂಧ ಇದ್ದೇ ಇರುತ್ತದೆ. ಉದ್ಯಮಿಯಾದರೂ ಅವರಿಗೆ ಬಣ್ಣದ ಲೋಕದ ಬಗ್ಗೆ ಸ್ವಲ್ಪ ಕ್ರೇಜ್ ಹೆಚ್ಚೇ ಎನ್ನಬಹುದು. ಅವರು ಎರಡು ಮೂರು ಚಿತ್ರಗಳಲ್ಲಿ ಕೆಲವು ಪಾತ್ರಗಳನ್ನು
ಮುಂದೆ ಓದಿ|ಮತ್ತಷ್ಟು...