|
| ತಮಿಳರು, ಲಂಡನ್ ಪೊಲೀಸರ ಮಾರಾಮಾರಿ |
| ಲಂಡನ್, ಮಂಗಳವಾರ, 19 ಮೇ 2009 ( 15:30 IST ) | |
ಶ್ರೀಲಂಕಾ ಸೇನೆಯ ವಿರುದ್ಧ ಬ್ರಿಟನ್ ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ತಮಿಳರು ಮತ್ತು ಪೊಲೀಸರ ನಡುವೆ ಮಾರಾಮಾರಿ ನಡೆದಿದ್ದರಿಂದ 16 ಮಂದಿ ಗಾಯಗೊಂಡಿದ್ದಾರೆ ಮತ್ತು 10 ಜನರನ್ನು ಬಂಧಿಸಲಾಗಿದೆ. ಎಲ್‌ಟಿಟಿಇ ವಿರುದ್ಧ ಶ್ರೀಲಂಕಾ ವಿಜಯದ ಘೋಷಣೆ ಮಾಡಿದ ಕೆಲವೇ ಗಂಟೆಗಳಲ್ಲಿ ಲಂಡನ್ ಹೌಸ್ ಆಫ್ ಕಾಮನ್ಸ್ ಹೊರಗೆ ಪ್ರತಿಭಟನೆಕಾರರು ಧರಣಿ ಕುಳಿತರು.
ಆದರೆ ರಸ್ತೆ ಸಂಚಾರ ಪುನಾರಂಭಕ್ಕೆ ಪೊಲೀಸರು ಪ್ರತಿಭಟನೆಕಾರರನ್ನು ತೆರವು ಮಾಡಲು ಯತ್ನಿಸಿದಾಗ ಮುಂಜಾನೆ ಪ್ರತಿಭಟನೆಕಾರರು ಮತ್ತು ಪೊಲೀಸರ ನಡುವೆ ಘರ್ಷಣೆಗೆ ನಾಂದಿಯಾಯಿತು. ಈ ಘಟನೆಗೆ ಸಂಬಂಧಿಸಿದಂತೆ 10 ಜನರನ್ನು ಬಂಧಿಸಿದ್ದಾಗಿ ಸ್ಕಾಟ್‌ಲ್ಯಾಂಡ್ ಯಾರ್ಡ್ ದೃಢಪಡಿಸಿದ್ದು, 16 ಜನರು ಗಾಯಗೊಂಡಿದ್ದಾಗಿ ಲಂಡನ್ ಆಂಬುಲೆನ್ಸ್ ಸೇವೆಯ ವಕ್ತಾರ ತಿಳಿಸಿದ್ದಾರೆ.
ಸುಮಾರು 21 ಜನರನ್ನು ಸಣ್ಣಪುಟ್ಟ ಗಾಯಗಳಿಗಾಗಿ ಚಿಕಿತ್ಸೆ ನೀಡಲಾಗಿದ್ದು, ಪೊಲೀಸರು ಒರಟಾಗಿ ವರ್ತಿಸಿದರೆಂದು ಕೆಲವು ಪ್ರತಿಭಟನೆಕಾರರು ದೂರಿದ್ದಾರೆ.ಜನರನ್ನು ಥಳಿಸಿ, ಒದೆಯಲಾಯಿತು. ರಸ್ತೆಯಿಂದ ನಮ್ಮನ್ನು ಸಂಸತ್ತಿನ ಚೌಕದವರೆಗೆ ಪೊಲೀಸರು ತಳ್ಳುವವರೆಗೆ ನಮಗೆ ಏನಾಗುತ್ತದೆಂದು ತಿಳಿಯಲಿಲ್ಲ.
ನಾವು ಅವರ ನೆರವನ್ನು ಯಾಚಿಸಿದರೆ ಬ್ರಿಟನ್ ಸರ್ಕಾರ ಈ ರೀತಿ ನಡೆಸಿಕೊಳ್ಳುವುದೇ ಎಂದವರು ಪ್ರಶ್ನಿಸಿದ್ದಾರೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಅನೇಕ ಮಂದಿ ಇಲ್ಲಿದ್ದಾರೆ. ಅವರು ಇಲ್ಲಿ ಶೋಕಾಚರಣೆಗೆ ಬಂದಿರುವಾಗ ಪೊಲೀಸರು ಈ ರೀತಿ ವರ್ತಿಸಿದ್ದು ಅಕ್ಷಮ್ಯ ಎಂದು ಅವರು ಹೇಳಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ವಿವಾದಗಳಿಗೆ ಚಾಲನೆ, ಪಿತೃ ನೆರವಿನಿಂದ ಆರ್ಥಿಕ ಸಂಕಷ್ಟ ನಿವಾರಣೆಗೊಂಡು ನೂತನ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಕುಟುಂಬ ಮತ್ತು ಕಚೇರಿ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದೀರಿ. ಆದರೂ ಈಗ ಏನು ಬೇಕಾದರೂ ಮಾಡು ಎಂದು ಸ್ವತಂತ್ರವಾಗಿ ನಿಮ್ಮನ್ನು ಬಿಟ್ಟದ್ದು ನಿಮಗೆ ಖುಷಿಯಾಗುತ್ತದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಪ್ರತಿ ಬಾರಿ ದೆಹಲಿಯಲ್ಲಿ ನಡೆಯುವ ಹ್ಯಾಬಿಟ್ಯಾಟ್ ಚಲನಚಿತ್ರೋತ್ಸವದಲ್ಲಿ ಬಿ ಸುರೇಶ್ ಹಾಗೂ ಶೈಲಜ ನಿರ್ಮಿಸಿ, ಅಭಯಸಿಂಹ ನಿರ್ದೇಶನ ಮಾಡಿರುವ 'ಗುಬ್ಬಚ್ಚಿಗಳು' ಚಿತ್ರ ಪ್ರದರ್ಶಗೊಳ್ಳಲಿದೆ. ಚಿತ್ರ ಬೆಂಗಳೂರಿನಲ್ಲಿ |
| |
|
|
|
|
|
|