ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ತಮಿಳರ ಹಿತರಕ್ಷಣೆಗೆ ಅಮೆರಿಕ ಕರೆ
ವಾಷಿಂಗ್ಟನ್, ಮಂಗಳವಾರ, 19 ಮೇ 2009   ( 12:13 IST )
ತಮಿಳು ವ್ಯಾಘ್ರ ಬಂಡುಕೋರರ ವಿರುದ್ಧ ಕೊಲಂಬೊ ಜಯ ಘೋಷಿಸಿದ ಬಳಿಕ, ತನ್ನ ಭೂತಕಾಲದ ಪುಟಗಳನ್ನು ತಿರುವಿಹಾಕಿ, ಎಲ್ಲ ಪೌರರ ಹಕ್ಕುಗಳ ರಕ್ಷಣೆ ಮಾಡುವ ರಾಜಕೀಯ ವ್ಯವಸ್ಥೆ ಸೃಷ್ಟಿಗೆ ತಮಿಳರನ್ನು ತೊಡಗಿಸಿಕೊಳ್ಳುವಂತೆ ಅಮೆರಿಕ ಶ್ರೀಲಂಕಾಗೆ ಕರೆನೀಡಿದೆ. ಪ್ರಜಾಪ್ರಭುತ್ವ, ಸಹನೆ ಮತ್ತು ಮಾನವಹಕ್ಕುಗಳಿಗೆ ಗೌರವಿಸುವ ಆಶಯವುಳ್ಳ ಶ್ರೀಲಂಕಾವನ್ನು ನಿರ್ಮಿಸಲು ಇದೊಂದು ಸದವಕಾಶ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಐಯಾನ್ ಕೆಲ್ಲಿ ವರದಿಗಾರರಿಗೆ ಸೋಮವಾರ ತಿಳಿಸಿದರು.

ವಿಪುಲ ಮಾನವ ಜೀವನಷ್ಟ ಮತ್ತು ಅಮಾಯಕ ನಾಗರಿಕರ ಹತ್ಯೆ ಮುಕ್ತಾಯವಾಗಿದ್ದು ನಿಟ್ಟುಸಿರುಬಿಡುವಂತಾಗಿದೆ ಎಂದು ಹೋರಾಟದ ಅಂತ್ಯವನ್ನು ಸ್ವಾಗತಿಸಿದ ಕೆಲ್ಲಿ ಹೇಳಿದರು. ಸುಮಾರು 280,000 ಜನರು ಉತ್ತರಭಾಗದಿಂದ ಸಂತ್ರಸ್ತರಾಗಿದ್ದು, ಅವರು ಮನೆಗಳಿಗೆ ಹಿಂತಿರುಗುವುದನ್ನು ತ್ವರೆಗೊಳಿಸುವುದಕ್ಕೆ ಸರ್ಕಾರ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು.

ಎಲ್‌ಟಿಟಿಇ ವಿರುದ್ಧ ನಿರ್ಣಾಯಕ ಮಿಲಿಟರಿ ಜಯ ಸಾಧಿಸಿದ ಕೊಲಂಬೊಗೆ ಅಮೆರಿಕ ಅಭಿನಂದನೆ ಸಲ್ಲಿಸಿಲ್ಲವೇಕೆಂಬ ಪ್ರಶ್ನೆಗೆ, ಶ್ರೀಲಂಕಾದ ಸಂತ್ರಸ್ತ ಜನರ ತುರ್ತುಅಗತ್ಯಗಳನ್ನು ನಿಭಾಯಿಸಲು ಅಮೆರಿಕ ಗಮನವಹಿಸಿದೆ ಎಂದು ಕೆಲ್ಲಿ ಹೇಳಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಪ್ರಭಾಕರನ್ ಗತಿ ಏನಾಯಿತು: ದೃಢಪಡಿಸದ ರಾಜಪಕ್ಷೆ
ಹಮೀದ್ ಕರ್ಜೈ ಸೋದರ ಹತ್ಯೆಗೆ ವಿಫಲ ಯತ್ನ
ಪ್ರಭಾಕರನ್ ಇನ್ನೂ ಜೀವಂತ: ಎಲ್‌ಟಿಟಿಇ ವೆಬ್‌ಸೈಟ್
ತಾಲಿಬಾನ್ ಸೋಲಿಸಿ ಶಾಂತಿ ಸ್ಥಾಪನೆ: ಗಿಲಾನಿ ವಿಶ್ವಾಸ
ಹಂದಿ ಜ್ವರಕ್ಕೆ ನ್ಯೂಯಾರ್ಕ್ ಶಿಕ್ಷಕ ಬಲಿ
ಬರ್ಮಾ ನಾಯಕಿ ಸೂಕಿ ವಿಚಾರಣೆ ಆರಂಭ
ಗ್ರಹ ಗತಿ
ದೈನಿಕ - ವಿವಾದಗಳಿಗೆ ಚಾಲನೆ, ಪಿತೃ ನೆರವಿನಿಂದ ಆರ್ಥಿಕ ಸಂಕಷ್ಟ ನಿವಾರಣೆಗೊಂಡು ನೂತನ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಕುಟುಂಬ ಮತ್ತು ಕಚೇರಿ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದೀರಿ. ಆದರೂ ಈಗ ಏನು ಬೇಕಾದರೂ ಮಾಡು ಎಂದು ಸ್ವತಂತ್ರವಾಗಿ ನಿಮ್ಮನ್ನು ಬಿಟ್ಟದ್ದು ನಿಮಗೆ ಖುಷಿಯಾಗುತ್ತದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಹಣ ಬಲದಿಂದ ಬಿಜೆಪಿಗೆ ಜಯ : ಮಲ್ಲಿಕಾರ್ಜುನ ಖರ್ಗೆ
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ...
ಕೇಂದ್ರ ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಕೆ.ಎಚ್.ಮುನಿಯಪ್ಪ
ದಾಖಲೆ ಪ್ರಮಾಣದಲ್ಲಿ ಮರು ಮೌಲ್ಯಮಾಪನ ಅರ್ಜಿ
ಮನರಂಜನೆ
ಚಿತ್ರ ಸುದ್ದಿ - ಪ್ರತಿ ಬಾರಿ ದೆಹಲಿಯಲ್ಲಿ ನಡೆಯುವ ಹ್ಯಾಬಿಟ್ಯಾಟ್ ಚಲನಚಿತ್ರೋತ್ಸವದಲ್ಲಿ ಬಿ ಸುರೇಶ್ ಹಾಗೂ ಶೈಲಜ ನಿರ್ಮಿಸಿ, ಅಭಯಸಿಂಹ ನಿರ್ದೇಶನ ಮಾಡಿರುವ 'ಗುಬ್ಬಚ್ಚಿಗಳು' ಚಿತ್ರ ಪ್ರದರ್ಶಗೊಳ್ಳಲಿದೆ. ಚಿತ್ರ ಬೆಂಗಳೂರಿನಲ್ಲಿ
ಮುಂದೆ ಓದಿ|ಮತ್ತಷ್ಟು...