ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಲಾಹೋರ್ ದಾಳಿ ಪಾಕ್‌ಗೆ ಅವಮಾನ: ಮುಷರ್ರಫ್
ಇಸ್ಲಾಮಾಬಾದ್, ಶುಕ್ರವಾರ, 6 ಮಾರ್ಚ್ 2009   ( 19:59 IST )
ಲಾಹೋರ್‌ನಲ್ಲಿ ಶ್ರೀಲಂಕಾ ತಂಡದ ಮೇಲೆ ನಡೆದಿರುವ ಭಯೋತ್ಪಾದನಾ ದಾಳಿ ಇಡೀ ಪಾಕಿಸ್ತಾನಕ್ಕೆ ಅವಮಾನ ಎಂದು ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಪ್ ಕಿಡಿಕಾರಿದ್ದಾರೆ.

ಪಾಕಿಸ್ತಾನದ ನೆಲದಲ್ಲಿ ಮತ್ತೊಮ್ಮೆ ಉಗ್ರರು ನಡೆಸಿರುವ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಅವರು, ಪಾಕ್‌ನ ಕ್ರಿಕೆಟ್ ಮತ್ತು ಕ್ರೀಡೆಗೆ ತುಂಬಾ ಕೆಟ್ಟದ್ದಾಗಿ ಪರಿಣಮಿಸಲಿದೆ ಎಂದು ನವದೆಹಲಿಗೆ ಆಗಮಿಸುವ ಮುನ್ನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ಶ್ರೀಲಂಕಾ ಕ್ರಿಕೆಟ್ ಆಟಗಾರರ ಮೇಲೆ ಶಸ್ತ್ರ ಸಜ್ಜಿತ 12ಮಂದಿ ಉಗ್ರರು ದಾಳಿ ನಡೆಸಿದ ಮೂರು ದಿನಗಳ ಬಳಿಕ ಮುಷರ್ರಫ್ ಈ ಪ್ರತಿಕ್ರಿಯೆ ನೀಡಿದ್ದಾರೆ.

ಈ ದಾಳಿ ಖಂಡನೀಯ ಎಂದು ಪುನರುಚ್ಚರಿಸಿರುವ ಅವರು, ಇಡೀ ಪಾಕಿಸ್ತಾನಕ್ಕೆ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು. ಭಯೋತ್ಪಾದಕರನ್ನು ಬಗ್ಗು ಬಡಿಯುವ ಇಚ್ಚೆ ಸರಕಾರಕ್ಕೆ ಇಲ್ಲ ಎಂದು ಆಡಳಿತಾರೂಢ ಪಿಪಿಪಿ ವಿರುದ್ಧ ಹರಿಹಾಯ್ದಿದ್ದಾರೆ.

ಶ್ರೀಲಂಕಾ ತಂಡದ ಮೇಲೆ ಉಗ್ರರು ದಾಳಿ ನಡೆಸಿದ ಸಂದರ್ಭದಲ್ಲಿ ಪಾಕ್ ಭದ್ರತಾ ಪಡೆಗಳು ಮೂಕಪ್ರೇಕ್ಷಕವಾಗಿದ್ದವು ಎಂದು ಗುರುವಾರ ಮುಷ್ ಗಂಭೀರವಾಗಿ ಆರೋಪಿಸಿದ್ದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಲಾಹೋರ್ ದಾಳಿ ಹಿಂದೆ ಲಷ್ಕರ್ ಕೈವಾಡ: ಡಾನ್
ಮುಸ್ಲಿಮೇತರರು ಅಲ್ಲಾ ಶಬ್ದವನ್ನು ಉಪಯೋಗಿಸುವಂತಿಲ್ಲ
ಲಾಹೋರ್ ದಾಳಿ ಹಿಂದೆ ಭಾರತದ ಕೈವಾಡವಿಲ್ಲ: ಪಾಕ್
ಪಾಕಿಸ್ತಾನ ವಶಕ್ಕೆ ಉಗ್ರರ ಸಿದ್ದತೆ
ಗಾಂಧಿ ವಸ್ತುಗಳ ಹರಾಜು ರದ್ದಿಗೆ ಒಟಿಸ್ ಸಮ್ಮತಿ ?
ದಾಳಿ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು
ಗ್ರಹ ಗತಿ
ದೈನಿಕ - ಕೃಷಿಕರಿಗೆ ನೂತನ ಆಲೋಚನೆಗಳು ಎದುರಾಗುತ್ತವೆ. ಮನೆಯಲ್ಲಿ ಶುಭಕಾರ್ಯಗಳು ನಡೆಯುತ್ತವೆ.ವ್ಯಾಪಾರಿಗಳಿಗೆ ಉತ್ತಮ ಧನಲಾಭ.ಸ್ತ್ರೀಯರಿಂದ ದೂರವಿರಿ. ಇಲ್ಲವಾದಲ್ಲಿ ಹಾನಿ ಸಂಭವ. ವಿದ್ಯಾರ್ಥಿಗಳು ಪ್ರೇಮ ಪ್ರಣಯದಿಂದ ದೂರವಿರುವುದು ಉಚಿತ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ತೇಜಸ್ವಿನಿ ವರ್ತನೆಯಿಂದ ಟಿಕೆಟ್ ತಪ್ಪಿತು: ಡಿಕೆಶಿ
ಸಂಸದೆ ತೇಜಸ್ವಿನಿ ಗೌಡ ತಾವಾಗಿಯೇ ಟಿಕೆಟ್ ತಪ್ಪಿಸಿಕೊಂಡಿದ್ದಾರೆಯೇ ವಿನಃ ಅವರಿಗೆ ಟಿಕೆಟ್ ....
ಪ್ರಧಾನಿಯಾಗುವ ಅರ್ಹತೆ ಆಡ್ವಾಣಿಗಿಲ್ಲ: ದೇಶಪಾಂಡೆ
ಬಿಜೆಪಿ ಮಡಿಲಿಗೆ ಸೇರಲಿರುವ ನಿರ್ಮಲಾ ವೆಂಕಟೇಶ್
ಮನರಂಜನೆ
ಚಿತ್ರ ಸುದ್ದಿ - ಹಾಡೊಂದರ ಸಾಲನ್ನೇ ಟೈಟಲ್ಲಾಗಿಸಿ ಬರುತ್ತಿರುವ ಚಿತ್ರ 'ಈ ಸಂಜೆ'. ಚಿತ್ರದ ಹೆಚ್ಚಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದ್ದು, ಡಬ್ಬಿಂಗ್ ಕಾರ್ಯವನ್ನು ಮುಗಿಸಿ ಈಗ ಹಿನ್ನೆಲೆ ಸಂಗೀತ ಕಾರ್ಯಕ್ಕೆ ಸಿದ್ಧತೆ
ಮುಂದೆ ಓದಿ|ಮತ್ತಷ್ಟು...