ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಪ್ರಭಾಕರನ್ ಹಸ್ತಾಂತರ ಇನ್ನೂ ನಿರ್ಧಾರವಿಲ್ಲ
ಕೊಲಂಬೊ, 5 ಜನವರಿ 2009   ( 14:08 IST )
ತಮಿಳು ವ್ಯಾಘ್ರಗಳ ವರಿಷ್ಠ ವೇಲುಪಿಳ್ಳೈ ಪ್ರಭಾಕರನ್ ಜೀವಂತವಾಗಿ ಸೆರೆಸಿಕ್ಕಿದರೆ ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲವೆಂದು ಶ್ರೀಲಂಕಾ ತಿಳಿಸಿದೆ.ಮುಲ್ಲೈತಿವುನ ಅರಣ್ಯಜಿಲ್ಲೆಯಲ್ಲಿ ಬಂಡುಕೋರರ ಕಟ್ಟಕಡೆಯ ನೆಲೆಗಳನ್ನು ಸೇನಾಪಡೆಗಳು ಸಮೀಪಿಸುತ್ತಿದ್ದು, ಪ್ರಭಾಕರನ್ ಪತ್ತೆಗೆ ಜಾಲಾಡುತ್ತಿವೆ.

ಪ್ರಭಾಕರನ್ ಹಸ್ತಾಂತರಕ್ಕೆ ಅಧಿಕೃತ ಮನವಿಯನ್ನು ಭಾರತ ಮಾಡಿದರೆ ಶ್ರೀಲಂಕಾ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಲಿದೆ ಎಂದು ರಕ್ಷಣಾವಕ್ತಾರ ಸಚಿವ ಕೆಹೆಲಿಯ ರಾಂಬುಕ್‌ವೆಲ್ಲಾ ತಿಳಿಸಿದ್ದಾರೆ. ಆದರೆ ತನ್ನ ನೆರೆಯ ರಾಷ್ಟ್ರಗಳ ಅಂತಾರಾಷ್ಟ್ರೀಯ ಮತ್ತು ರಾಜತಾಂತ್ರಿಕ ಬಾಂಧವ್ಯಕ್ಕೆ ಅನುಗುಣವಾಗಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಪ್ರಭಾಕರನ್ ಭವಿಷ್ಯವು ಜಿನೀವಾ ಸಮಾವೇಶ ಮುಂತಾದ ಅಂತಾರಾಷ್ಟ್ರೀಯ ಸಮಾವೇಶಕ್ಕೆ ಮತ್ತು ಇತರೆ ರಾಷ್ಟ್ರಗಳ ಜತೆ ನಮ್ಮ ರಾಜತಾಂತ್ರಿಕ ಬಾಂಧವ್ಯದ ಮೇಲೆ ಆಧಾರಿತವಾಗಿದೆ.

ಇದೊಂದು ರಾಜತಾಂತ್ರಿಕ ವಿಷಯವಾಗಿದ್ದು ಆ ದಾರಿಯಲ್ಲೇ ನಿಭಾಯಿಸಲಾಗುವುದು ಎಂದು ರಾಂಬುಕ್‌ವೆಲ್ಲಾ ತಿಳಿಸಿದರು.ರಾಜೀವ್ ಗಾಂಧಿ ಹಂತಕ ಪ್ರಭಾಕರನ್ ಜೀವಂತವಾಗಿ ಸೆರೆಸಿಕ್ಕಿದರೆ ಭಾರತಕ್ಕೆ ಹಸ್ತಾಂತರಿಸಬೇಕೆಂದು ಕಾಂಗ್ರೆಸ್ ಪಕ್ಷದ ವಕ್ತಾರ ವೀರಪ್ಪ ಮೊಯ್ಲಿ ಒತ್ತಾಯಿಸಿದ ಮಾರನೆಯ ದಿನವೇ ಶ್ರೀಲಂಕಾ ಪ್ರತಿಕ್ರಿಯೆ ಹೊರಬಿದ್ದಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಮುಲ್ಲೈತಿವು ಸ್ವಾಧೀನಕ್ಕೆ ಮುನ್ನುಗ್ಗುತ್ತಿರುವ ಲಂಕಾ ಪಡೆ
ಲೂವಿಸಿಯಾನ ಹೆಲಿಕಾಪ್ಟರ್ ಅಪಘಾತಕ್ಕೆ 7 ಬಲಿ
2 ಸ್ಫೋಟಗಳಲ್ಲಿ ಐವರು ಪೊಲೀಸರ ದುರ್ಮರಣ
ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಭೂದಾಳಿ
ಶಂಕಿತರ ತನಿಖೆಗೆ ಪಾಕಿಸ್ತಾನ ಅವಕಾಶ ಸಂಭವ
ವಾಷಿಂಗ್ಟನ್ನಿಗೆ ಒಬಾಮಾ ಕುಟುಂಬ ಆಗಮನ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಸೋಲಿನ ಹೊಣೆ ನನಗಿರಲಿ: ಡಿಕೆಶಿ
ಉಪಚುನಾವಣೆಯಲ್ಲಿ ಪಕ್ಷದ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಶಕ್ತಿಮೀರಿ ಕೆಲಸ ಮಾಡಿದ್ದರೂ ...
ತಾಕತ್ತಿದ್ದರೆ ಮಾನನಷ್ಟ ಹೂಡಲು ಗೌಡರ ಸವಾಲು
ಎನ್ಎಸ್ ಜಿ ಘಟಕ ಸ್ಥಾಪನೆಗೆ ಮುಖ್ಯಮಂತ್ರಿ ಒತ್ತಾಯ
ಮನರಂಜನೆ
ಚಿತ್ರ ಸುದ್ದಿ - ದರ್ಶನ್ ನಾಯಕರಾಗಿರುವ ಅಭಯ್ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾಳೆ. ಆಕೆ ಆರತಿ ಠಾಕೂರ್. ದೂರದ ಮುಂಬಯಿಯ ಮಾಡೆಲ್ ಮಿಸ್ ಇಂಡಿಯಾ-2008 ವಿಜೇತೆ. ಈಕೆಯ ಎತ್ತರ ದರ್ಶನ್‌ಗೆ ಹೊಂದಿಕೆಯಾಗುವುದರಿಂದ
ಮುಂದೆ ಓದಿ|ಮತ್ತಷ್ಟು...