|
| ಮುಲ್ಲೈತಿವು ಸ್ವಾಧೀನಕ್ಕೆ ಮುನ್ನುಗ್ಗುತ್ತಿರುವ ಲಂಕಾ ಪಡೆ |
| ಕೊಲಂಬೊ, 5 ಜನವರಿ 2009 ( 13:17 IST ) | |
ಎಲ್‌ಟಿಟಿಇ 'ರಾಜಧಾನಿ' ಕಿಲ್ಲಿನೋಚಿಯನ್ನು ವಶಕ್ಕೆ ತೆಗೆದುಕೊಂಡ ಬಳಿಕ ಶ್ರೀಲಂಕಾ ಪಡೆಗಳು ಬಂಡುಕೋರರಿಗೆ ಕೊನೆಯಲ್ಲಿ ಉಳಿದಿರುವ ಪ್ರಬಲಕೋಟೆ ಮುಲ್ಲೈತಿವು ಸ್ವಾಧೀನಕ್ಕೆ ಮುನ್ನುಗ್ಗುತ್ತಿದ್ದು, ಮುಲ್ಲೈತಿವು ಮಾರ್ಗದಲ್ಲಿರುವ ಪ್ರಮುಖ ಪಟ್ಟಣವೊಂದಕ್ಕೆ ಪ್ರವೇಶಿಸಿವೆ. ತಮಿಳು ವ್ಯಾಘ್ರಪಡೆಯ ವರಿಷ್ಠ ಪ್ರಭಾಕರನ್ ಮುಲ್ಲೈತಿವುನಲ್ಲಿ ಅಡಗಿದ್ದಾನೆಂದು ಶಂಕಿಸಲಾಗಿದ್ದು, ಅವನನ್ನು ಸೆರೆಹಿಡಿಯುವ ಕಾರ್ಯಾಚರಣೆ ನಡೆದಿದೆ.
ಎಲ್‌ಟಿಟಿಇ ಉಗ್ರರ ಜತೆ ದಿನವಿಡೀ ಗುಂಡಿನ ಚಕಮಕಿ ಬಳಿಕ, ಪಡೆಗಳು ಮಂಕುಲಂ-ಮುಲ್ಲತಿವು ಮುಖ್ಯರಸ್ತೆಯಲ್ಲಿರುವ ವ್ಯೂಹಾತ್ಮಕವಾಗಿ ಮುಖ್ಯವಾದ ಒಡುಸುಡ್ಡಾನ್ ಪಟ್ಟಣವನ್ನು ಪ್ರವೇಶಿಸಿರುವುದಾಗಿ ಮಿಲಿಟರಿ ತಿಳಿಸಿದೆ. ಈ ಸಂಧಿಯು ಮುಲ್ಲೈತಿವುಗೆ ನೇರ ಮಾರ್ಗ ಕಲ್ಪಿಸುವುದರಿಂದ ಎಲ್‌ಟಿಟಿಇ ತನ್ನ ಆಡಳಿತಾತ್ಮಕ ಮತ್ತು ತಾರ್ಕಿಕ ಉದ್ದೇಶಗಳಿಗೆ ಬಳಸುತ್ತಿದೆ.
ಶ್ರೀಲಂಕಾ ವಾಯುಪಡೆಯ ಎಂಐ-24 ಹೆಲಿಕಾಪ್ಟರ್ ಗನ್‌ಶಿಪ್‌ಗಳು ಎಲ್‌ಟಿಟಿಇ ನೆಲೆಯ ಸ್ಥಳಗಳಾದ ಕಿಲ್ಲಿನೋಚಿಯ ಈಶಾನ್ಯ ಮತ್ತು ಪರಂತಾನ್‌ನ ಪೂರ್ವದಲ್ಲಿ ವಾಯುದಾಳಿ ನಡೆಸಿದೆಯೆಂದು ಎಸ್‌ಎಲ್‌ಎಎಫ್ ವಕ್ತಾರ ವಿಂಗ್ ಕಮಾಂಡರ್ ಜಾನಕ ನಯನಕ್ಕರಾ ತಿಳಿಸಿದ್ದಾರೆ. ಪರಂತಾನ್ ಮತ್ತು ಎಲಿಫೆಂಟ್ ಕಣಿವೆಗೆ ಪೂರ್ವದಲ್ಲಿ ಜೆಟ್ ವಿಮಾನಗಳು ಎರಡು ಎಲ್‌ಟಿಟಿಇ ನೆಲೆಗಳ ಮೇಲೆ ಕೂಡ ದಾಳಿನಡೆಸಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ದರ್ಶನ್ ನಾಯಕರಾಗಿರುವ ಅಭಯ್ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾಳೆ. ಆಕೆ ಆರತಿ ಠಾಕೂರ್. ದೂರದ ಮುಂಬಯಿಯ ಮಾಡೆಲ್ ಮಿಸ್ ಇಂಡಿಯಾ-2008 ವಿಜೇತೆ. ಈಕೆಯ ಎತ್ತರ ದರ್ಶನ್‌ಗೆ ಹೊಂದಿಕೆಯಾಗುವುದರಿಂದ |
| |
|
|
|
|
|
|
|