ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಶಂಕಿತರ ತನಿಖೆಗೆ ಪಾಕಿಸ್ತಾನ ಅವಕಾಶ ಸಂಭವ
ಇಸ್ಲಾಮಾಬಾದ್, ಭಾನುವಾರ, 4 ಜನವರಿ 2009   ( 13:07 IST )
ಮುಂಬೈ ದಾಳಿಕೋರರು ಮಾರಕ ದಾಳಿಗಳಲ್ಲಿ ಭಾಗಿಯಾದ ಬಗ್ಗೆ ಸಾಕಷ್ಟು ಸಾಕ್ಷ್ಯಾಧಾರ ಒದಗಿಸಿದ ಬಳಿಕ ಶಂಕಿತರ ತನಿಖೆಗೆ ಭಾರತೀಯ ತನಿಖೆದಾರರಿಗೆ ಪಾಕಿಸ್ತಾನ ಅವಕಾಶ ಕಲ್ಪಿಸಬಹುದು. ಆದರೆ ಅವರನ್ನು ಭಾರತದ ವಶಕ್ಕೆ ಹಸ್ತಾಂತರಿಸುವುದಿಲ್ಲ ಎಂದು ಭಾನುವಾರ ಇಸ್ಲಾಮಾಬಾದ್‌ನಲ್ಲಿ ಮಾಧ್ಯಮದ ವರದಿಯೊಂದು ತಿಳಿಸಿದೆ. ಮುಂಬೈ ಕಗ್ಗೊಲೆಯಲ್ಲಿ ಪ್ರಮುಖ ಪಾತ್ರವಹಿಸಿದ ಆರೋಪದ ಮೇಲೆ ಈಗ ಬಂಧಿತರಾಗಿರುವ ಜನರನ್ನು ತನಿಖೆ ಮಾಡಲು ಮಾತ್ರ ಪಾಕಿಸ್ತಾನ ಅನುಮತಿ ನೀಡಬಹುದೆಂದು ಹೇಳಲಾಗಿದೆ.

ಆದಾಗ್ಯೂ, ಅವರನ್ನು ಭಾರತಕ್ಕೆ ಒಪ್ಪಿಸುವ ಸಂಭವವಿಲ್ಲ ಎಂದು ಹೆಸರುಹೇಳಲು ಬಯಸದ ಪಾಕಿಸ್ತಾನ ಅಧಿಕಾರಿ ತಿಳಿಸಿದ್ದಾಗಿ ನೇಷನ್ ಸುದ್ದಿಪತ್ರಿಕೆ ವರದಿ ಮಾಡಿದೆ. ಮುಂಬೈ ದಾಳಿಗಳಿಗೆ ಸಂಬಂಧಿಸಿದಂತೆ ಲಷ್ಕರೆ ತೊಯ್ಬಾ ಕಾರ್ಯಾಚರಣೆ ಕಮಾಂಡರ್ ಜಾಕಿಯುರ್ ರೆಹಮಾನ್ ಲಖ್ವಿ ಮತ್ತು ಸಂಪರ್ಕ ತಜ್ಞ ಜರಾರ್ ಶಾ ಈಗ ಪಾಕ್‌ನಲ್ಲಿ ಬಂಧಿತರಾದ ಉಗ್ರಗಾಮಿಗಳಾಗಿದ್ದಾರೆ.

ಅವರನ್ನು ಭಾರತದ ವಶಕ್ಕೆ ಒಪ್ಪಿಸಬೇಕೆಂಬ ಪುನಾರವರ್ತಿತ ಬೇಡಿಕೆಗಳನ್ನು ಪಾಕ್ ತಳ್ಳಿಹಾಕಿದೆ. ಆರೋಪ-ಪ್ರತ್ಯಾರೋಪಗಳಲ್ಲಿ ನಿರತವಾಗುವ ಬದಲಿಗೆ ಭಾರತ ಲಖ್ವಿ, ಶಾ ಅಥವಾ ಬೇರಾವುದೇ ವ್ಯಕ್ತಿ ಮುಂಬೈ ದಾಳಿಯಲ್ಲಿ ಭಾಗಿಯಾದ ಬಗ್ಗೆ ಸೂಕ್ತ ಸಾಕ್ಷ್ಯಾಧಾರವನ್ನು ಭಾರತ ನೀಡಬೇಕು ಎಂದು ಪಾಕಿಸ್ತಾನ ಅಧಿಕಾರಿ ತಿಳಿಸಿದರು. ಹಾಗೆ ನೀಡಿದರೆ ಮಾತ್ರ ಪಾಕಿಸ್ತಾನದ ನೆಲದಲ್ಲಿ ಅವರ ತನಿಖೆಗೆ ಭಾರತದ ತನಿಖೆದಾರರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಅವರು ನುಡಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ವಾಷಿಂಗ್ಟನ್ನಿಗೆ ಒಬಾಮಾ ಕುಟುಂಬ ಆಗಮನ
ಮುಲ್ಲತಿವುನಲ್ಲಿ ಪ್ರಭಾಕರನ್ ಅಡಗುತಾಣ ಶಂಕೆ
ಆಫ್ಘನ್‌ಗೆ ಸರಬರಾಜು ಮಾರ್ಗ ಪಾಕ್ ಪುನಾರಂಭ
ಕಿಲ್ಲಿನೋಚಿ ಕೈವಶ ಬಳಿಕ ಮುಲ್ಲತೀವು ಮೇಲೆ ಲಂಕಾ ದಾಳಿ
ಆತ್ಮಾಹುತಿ ಬಾಂಬರ್ ಸ್ಫೋಟಕ್ಕೆ 23 ಬಲಿ
ಸೊಮಾಲಿ ಕಡಲ್ಗಳ್ಳರ ದಾಳಿ ಪ್ರಯತ್ನ ವಿಫಲ
ಗ್ರಹ ಗತಿ
ದೈನಿಕ - ಶುಭ ವಾರ್ತೆ ಇಂದು ನಿಮ್ಮ ಪಾಲಿಗಿದೆ. ಪ್ರೀತಿ ಪಾತ್ರರಾದವರೊಡನೆ ಇದ್ದ ಭಿನ್ನಾಭಿಪ್ರಾಯಗಳು ಕೊನೆಗೊಳ್ಳುವುದು. ವ್ಯವಹಾರದಲ್ಲಿ ಲಾಭವಾಗಲಿದೆ. ಪ್ರಯಾಣ ಅವಶ್ಯಕ. ನೆಂಟರ ಆಗಮನವಾಗಲಿದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಸಿದ್ದರಾಮಯ್ಯ ವಿರುದ್ಧ ಖರ್ಗೆ ಪರೋಕ್ಷ ವಾಗ್ದಾಳಿ
ಉಪ ಚುನಾವಣೆಯಲ್ಲಿನ ಸೋಲಿನ ಪರಾಮರ್ಶೆ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್, ಇದೀಗ ಮಾಜಿ ಉಪಮುಖ್ಯಮಂತ್ರಿ ....
2009 ಕನ್ನಡ ಅನುಷ್ಠಾನ ವರ್ಷವಾಗಿ ಆಚರಣೆ
ಡಾ.ಅಜಯ್‌ಕುಮಾರ್ ಸಿಂಗ್ ನೂತನ ಡಿಜಿಪಿ
ಮನರಂಜನೆ
ಚಿತ್ರ ಸುದ್ದಿ - ಆನೇಕಲ್ ಬಾಲರಾಜ್ ನಿರ್ಮಾಣದಲ್ಲಿ ಅವರ ಪುತ್ರ ಸಂತೋಷ್ ನಟಿಸಿರುವ 'ಕೆಂಪ' ಚಿತ್ರ ಮುಂದಿನ ವಾರ ತೆರೆಕಾಣುತ್ತಿದೆ. ಸೆನ್ಸಾರ್ ಆಗಿ 5 ತಿಂಗಳಾದರೂ ಚಿತ್ರಮಂದಿರ ಸಿಗದ ಕಾರಣ ಚಿತ್ರ
ಮುಂದೆ ಓದಿ|ಮತ್ತಷ್ಟು...