ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಮುಲ್ಲತಿವುನಲ್ಲಿ ಪ್ರಭಾಕರನ್ ಅಡಗುತಾಣ ಶಂಕೆ
ಕೊಲಂಬೊ, ಶನಿವಾರ, 3 ಜನವರಿ 2009   ( 15:42 IST )
ಬಂಡುಕೋರರ ರಾಜಕೀಯ ಕೇಂದ್ರ ಕಿಲ್ಲಿನೋಚಿಯ ಪತನದ ಬಳಿಕ ಭಾರೀ ಪೆಟ್ಟು ತಿಂದಿರುವ ಎಲ್‌ಟಿಟಿಇ ವರಿಷ್ಠ ವಿ.ಪ್ರಭಾಕರನ್, ಎಲ್‌ಟಿಟಿಇ ಭದ್ರಕೋಟೆ ಮುಲ್ಲತೀವುನಲ್ಲಿ ಅಡಗಿರಬಹುದು ಎಂದು ಶ್ರೀಲಂಕಾ ಸೇನಾಮುಖಂಡ ಸರತ್ ಫೋನ್‌ಸೆಕಾ ತಿಳಿಸಿದ್ದಾರೆ. ಎಲ್‌ಟಿಟಿಇ ನಾಯಕನ ಶಂಕಿತ ಅಡಗುತಾಣದ ಸುತ್ತಲಿನ ಪ್ರದೇಶದಕ್ಕೆ ಶ್ರೀಲಂಕಾ ಸೇನೆ ದಾಳಿ ಮಾಡಿದ್ದು, ಪ್ರಭಾಕರನ್ ಮುಲ್ಲತೀವು ಕರಾವಳಿ ನಗರದಲ್ಲಿ ಅಡಗಿರಬಹುದೆಂದು ಶಂಕಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ದ್ವೀಪದ ಜರ್ಜರಿತ ಉತ್ತರದಲ್ಲಿ 40 ಕಿಮೀ ವ್ಯಾಪ್ತಿಯೊಳಗೆ ಎಲ್‌ಟಿಟಿಇ ಸೀಮಿತಗೊಂಡಿದೆ ಎಂದು ಸೇನಾಮುಖ್ಯಸ್ಥರು ತಿಳಿಸಿದ್ದಾರೆ. ಬಂಕರ್‌ನಲ್ಲಿ ಸಜೀವವಾಗಿ ಅಡಗಿರುವನೆಂದು ನಂಬಲಾದ ಪ್ರಭಾಕರನ್ ಅವರನ್ನು ಹಿಡಿಯುವುದು ಸೇನೆಯ ಗುರಿಯಾಗಿದೆ ಎಂದು ಫೋಯೆನ್‌ಸೆಂಕಾ ಈ ಮುಂಚೆ ತಿಳಿಸಿದ್ದರು.

ಶ್ರೀಲಂಕಾದ ಸೇನಾ ಮುಖ್ಯಸ್ಥರು 2006ರಲ್ಲಿ ಎಲ್‌ಟಿಟಿಇ ಆತ್ಮಾಹುತಿ ದಾಳಿಯಿಂದ ಪಾರಾಗಿದ್ದು, ಗಂಭೀರವಾದ ಗಾಯಗಳನ್ನು ಹೊಂದಿದ ಬಳಿಕ ವಿದೇಶದಲ್ಲಿ ಚಿಕಿತ್ಸೆ ಪಡೆದಿದ್ದರು.

ಸುದ್ದಿಪತ್ರಿಕೆಯೊಂದರ ವರದಿ ಪ್ರಕಾರ, ಪ್ರಭಾಕರನ್ ನೆಲದಡಿ 30 ಅಡಿ ಆಳದಲ್ಲಿರುವ ಹವಾನಿಯಂತ್ರಿತ ಬಂಕರ್ ಸಂಕೀರ್ಣದಲ್ಲಿ ಅಡಗಿದ್ದು, ಗುರುತು ಪತ್ತೆಯಾಗದಿರಲು ರಾತ್ರಿ ಸಮಯದಲ್ಲಿ ಮಾತ್ರ ಬಂಕರ್ ಹೊರಗೆ ಬರುತ್ತಾನೆಂದು ಹೇಳಲಾಗಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಆಫ್ಘನ್‌ಗೆ ಸರಬರಾಜು ಮಾರ್ಗ ಪಾಕ್ ಪುನಾರಂಭ
ಕಿಲ್ಲಿನೋಚಿ ಕೈವಶ ಬಳಿಕ ಮುಲ್ಲತೀವು ಮೇಲೆ ಲಂಕಾ ದಾಳಿ
ಆತ್ಮಾಹುತಿ ಬಾಂಬರ್ ಸ್ಫೋಟಕ್ಕೆ 23 ಬಲಿ
ಸೊಮಾಲಿ ಕಡಲ್ಗಳ್ಳರ ದಾಳಿ ಪ್ರಯತ್ನ ವಿಫಲ
ಹಿಂದೂ ಅರ್ಚಕರನ್ನು ಬದಲಿಸಲು ಪಶುಪತಿನಾಥಕ್ಕೆ ಮುತ್ತಿಗೆ
ಕಿಲ್ಲಿನೋಚಿ ಶ್ರೀಲಂಕಾ ಸೇನೆಯ ಕೈವಶ
ಗ್ರಹ ಗತಿ
ದೈನಿಕ - ಶುಭ ವಾರ್ತೆ ಇಂದು ನಿಮ್ಮ ಪಾಲಿಗಿದೆ. ಪ್ರೀತಿ ಪಾತ್ರರಾದವರೊಡನೆ ಇದ್ದ ಭಿನ್ನಾಭಿಪ್ರಾಯಗಳು ಕೊನೆಗೊಳ್ಳುವುದು. ವ್ಯವಹಾರದಲ್ಲಿ ಲಾಭವಾಗಲಿದೆ. ಪ್ರಯಾಣ ಅವಶ್ಯಕ. ನೆಂಟರ ಆಗಮನವಾಗಲಿದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಸಿದ್ದರಾಮಯ್ಯ ವಿರುದ್ಧ ಖರ್ಗೆ ಪರೋಕ್ಷ ವಾಗ್ದಾಳಿ
ಉಪ ಚುನಾವಣೆಯಲ್ಲಿನ ಸೋಲಿನ ಪರಾಮರ್ಶೆ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್, ಇದೀಗ ಮಾಜಿ ಉಪಮುಖ್ಯಮಂತ್ರಿ ....
2009 ಕನ್ನಡ ಅನುಷ್ಠಾನ ವರ್ಷವಾಗಿ ಆಚರಣೆ
ಡಾ.ಅಜಯ್‌ಕುಮಾರ್ ಸಿಂಗ್ ನೂತನ ಡಿಜಿಪಿ
ಮನರಂಜನೆ
ಚಿತ್ರ ಸುದ್ದಿ - ಆನೇಕಲ್ ಬಾಲರಾಜ್ ನಿರ್ಮಾಣದಲ್ಲಿ ಅವರ ಪುತ್ರ ಸಂತೋಷ್ ನಟಿಸಿರುವ 'ಕೆಂಪ' ಚಿತ್ರ ಮುಂದಿನ ವಾರ ತೆರೆಕಾಣುತ್ತಿದೆ. ಸೆನ್ಸಾರ್ ಆಗಿ 5 ತಿಂಗಳಾದರೂ ಚಿತ್ರಮಂದಿರ ಸಿಗದ ಕಾರಣ ಚಿತ್ರ
ಮುಂದೆ ಓದಿ|ಮತ್ತಷ್ಟು...