|
| ಕಿಲ್ಲಿನೋಚಿ ಕೈವಶ ಬಳಿಕ ಮುಲ್ಲತೀವು ಮೇಲೆ ಲಂಕಾ ದಾಳಿ |
| ಕೊಲಂಬೊ, ಶನಿವಾರ, 3 ಜನವರಿ 2009 ( 12:52 IST ) | |
ಎಲ್‌ಟಿಟಿಇ ಉಗ್ರರ ರಾಜಕೀಯ ರಾಜಧಾನಿ ಕಿಲ್ಲಿನೋಚಿಯನ್ನು ಶ್ರೀಲಂಕಾದ ಭೂಸೇನೆ ವಶಕ್ಕೆ ತೆಗೆದುಕೊಂಡ ಬಳಿಕ ಉತ್ತರದಲ್ಲಿರುವ ತಮಿಳು ವ್ಯಾಘ್ರಗಳ ನೆಲೆಗಳ ಮೇಲೆ ಶನಿವಾರ ಶ್ರೀಲಂಕಾ ಹೆಲಿಕಾಪ್ಟರ್‌ಗಳು ಬಾಂಬ್ ದಾಳಿ ನಡೆಸಿದವು. ಶ್ರೀಲಂಕಾದ ರಕ್ಷಣಾ ಸಚಿವಾಲಯದ ಪ್ರಕಾರ, ಪಡೆಗಳು ಈಗ ಅರಣ್ಯಜಿಲ್ಲೆ ಮುಲ್ಲತೀವು ಮೇಲೆ ಗುರಿಯಿರಿಸಿದ್ದು, ಮುಲ್ಲತೀವುನಲ್ಲಿ ಎಲ್‌ಟಿಟಿಇ ತನ್ನ ಮುಖ್ಯ ಮಿಲಿಟರಿ ಸೌಲಭ್ಯಗಳನ್ನು ಹೊಂದಿದೆಯೆಂದು ನಂಬಲಾಗಿದೆ.
ಸುಮಾರು 75,000 ಜನರನ್ನು ಬಲಿತೆಗೆದುಕೊಂಡ 25 ವರ್ಷಗಳ ಪ್ರತ್ಯೇಕತಾವಾದಿ ಯುದ್ಧಕ್ಕೆ ತೆರೆಎಳೆಯಲು ಬಂಡುಕೋರರ ಪ್ರಾಬಲ್ಯದ ಆಳಪ್ರದೇಶದೊಳಕ್ಕೆ ಶ್ರೀಲಂಕಾಪಡೆಗಳ ಮುನ್ನಡೆಯೆಂದು ಇದನ್ನು ಹೇಳಲಾಗಿದೆ. ಎಂಐ-24 ಹೆಲಿಕಾಪ್ಟರ್‌ಗಳು ಕಾಲ್ದಳಗಳ ಬೆಂಬಲದೊಂದಿಗೆ ಮುಲ್ಲತೀವು ಪಶ್ಚಿಮಕ್ಕಿರುವ ಬಂಡುಕೋರರ ನೆಲೆಗಳ ಮೇಲೆ ದಾಳಿ ಮಾಡಿದವು ಎಂದು ಮಿಲಿಟರಿ ಮೂಲ ತಿಳಿಸಿದೆ.
ಇದು ಎಲ್‌ಟಟಿಇಗೆ ಪ್ರಮುಖ ಸೋಲಾಗಿದ್ದು, ಕಿಲ್ಲಿನೋಚಿ ಪತನದಿಂದ ಮುಲ್ಲತೀವು ಪ್ರದೇಶವೊಂದರಲ್ಲಿ ಮಾತ್ರ ಎಲ್‌ಟಿಟಿಇ ಪ್ರಾಬಲ್ಯವಿರುತ್ತದೆ ಎಂದು ರಕ್ಷಣಾ ವಿಶ್ಲೇಷಕ ಇಕ್ಬಾಲ್ ಅಥಾಸ್ ಹೇಳಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಶುಭ ವಾರ್ತೆ ಇಂದು ನಿಮ್ಮ ಪಾಲಿಗಿದೆ. ಪ್ರೀತಿ ಪಾತ್ರರಾದವರೊಡನೆ ಇದ್ದ ಭಿನ್ನಾಭಿಪ್ರಾಯಗಳು ಕೊನೆಗೊಳ್ಳುವುದು. ವ್ಯವಹಾರದಲ್ಲಿ ಲಾಭವಾಗಲಿದೆ. ಪ್ರಯಾಣ ಅವಶ್ಯಕ. ನೆಂಟರ ಆಗಮನವಾಗಲಿದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಆನೇಕಲ್ ಬಾಲರಾಜ್ ನಿರ್ಮಾಣದಲ್ಲಿ ಅವರ ಪುತ್ರ ಸಂತೋಷ್ ನಟಿಸಿರುವ 'ಕೆಂಪ' ಚಿತ್ರ ಮುಂದಿನ ವಾರ ತೆರೆಕಾಣುತ್ತಿದೆ. ಸೆನ್ಸಾರ್ ಆಗಿ 5 ತಿಂಗಳಾದರೂ ಚಿತ್ರಮಂದಿರ ಸಿಗದ ಕಾರಣ ಚಿತ್ರ |
| |
|
|
|
|
|
|
|