ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಹಿಂದೂ ಅರ್ಚಕರನ್ನು ಬದಲಿಸಲು ಪಶುಪತಿನಾಥಕ್ಕೆ ಮುತ್ತಿಗೆ
ಕಾಠ್ಮಂಡು, 2 ಜನವರಿ 2009   ( 19:15 IST )
ನೇಪಾಳದ ಪವಿತ್ರ ದೇವಸ್ಥಾನ ಪಶುಪತಿನಾಥದಲ್ಲಿ ಕಳೆದ 300 ವರ್ಷಗಳಿಂದ ಪೂಜೆ ಮಾಡುತ್ತಿದ್ದ ಹಿಂದೂ ಅರ್ಚಕರನ್ನು ಬದಲಿಸಿ ನೂತನವಾಗಿ ಅರ್ಚಕರನ್ನು ನೇಮಿಸಲು ಮಾವೋವಾದಿಗಳು ಗುರುವಾರ ಸಂಜೆ ದೇವಸ್ಥಾನಕ್ಕೆ ಮುತ್ತಿಗೆ ಹಾಕಿದ ಘಟನೆ ನಡೆದಿದೆ. ಈ ಕ್ರಮದ ವಿರುದ್ಧ ಹಿಂದೂ ಸಂಸ್ಥೆಗಳು ಮತ್ತು ದೇವಸ್ಥಾನದ ಆಸುಪಾಸಿನಲ್ಲಿ ವಾಸಿಸುವ ಜನರು ಪ್ರತಿಭಟನೆ ವ್ಯಕ್ತಪಡಿಸಿದರು.

ಅರ್ಚಕರನ್ನು ಬದಲಿಸುವ ಕ್ರಮವು ಪ್ರಬಲ ಪ್ರತಿಪಕ್ಷ ನೇಪಾಳಿ ಕಾಂಗ್ರೆಸ್‌ನಿಂದ ಕೂಡ ವಿರೋಧ ವ್ಯಕ್ತವಾಗಿದೆ. ಆದರೆ ಸುಪ್ರೀಂಕೋರ್ಟ್ ನಿರ್ಬಂಧವನ್ನು ಧಿಕ್ಕರಿಸಿ ಮತ್ತು ಹಿಂದು ಸಂಘಟನೆಗಳ ಪ್ರತಿರೋಧದ ನಡುವೆಯ‌ೂ ಮಾವೋವಾದಿಗಳು ತಾವು ನೇಮಿಸಿದ ಅರ್ಚಕರನ್ನು ಪ್ರತಿಷ್ಠಾಪಿಸಲು ಮುನ್ನುಗ್ಗಿದರು.ಪ್ರತಿಭಟನೆಕಾರರ ವಿರುದ್ಧ ಕಠಿಣವಾಗಿ ವರ್ತಿಸಲು ಮಾವೋವಾದಿಗಳು ಪೊಲೀಸರನ್ನು ಕೂಡ ನಿಯೋಜಿಸಿದ್ದರು.

ನೂರಕ್ಕೂ ಹೆಚ್ಚು ಮಾವೋವಾದಿಗಳು ಮತ್ತು ಯುವ ಕಮ್ಯುನಿಸ್ಟ್ ಲೀಗ್ ಕಾರ್ಯಕರ್ತರು ಪಶುಪತಿನಾಥದ ಮುಖ್ಯ ದೇವಸ್ಥಾನದ ಬೀಗ ಒಡೆದು ನೂತನವಾಗಿ ತಾವು ನೇಮಿಸಿದ ಅರ್ಚಕ ವಿಷ್ಣು ಪ್ರಸಾದ್ ದಲಾಲ್‌ನನ್ನು ಮುಖ್ಯ ಅರ್ಚಕರ ಸ್ಥಾನದಲ್ಲಿ ಕೂರಿಸಿದರೆಂದು ಪಶುಪತಿ ಪ್ರದೇಶಾಭಿವೃದ್ಧಿ ಟ್ರಸ್ಟ್‌ನ ಮಾಜಿ ಸದಸ್ಯ ನರೋತ್ತಮ ವೈದ್ಯ ತಿಳಿಸಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಕಿಲ್ಲಿನೋಚಿ ಶ್ರೀಲಂಕಾ ಸೇನೆಯ ಕೈವಶ
ಈಜಿಪ್ಟಿನ ಸರಕುಸಾಗಣೆ ಹಡಗು ಅಪಹರಣ
ಉಗ್ರರಿಗೆ ಹೆಣ್ಣು ಮಕ್ಕಳನ್ನು ವಿವಾಹಮಾಡಿ: ತಾಲಿಬಾನ್
ಕಿಲ್ಲಿನೋಚಿ ಸ್ವಾಧೀನದ ನಿರೀಕ್ಷೆಯಲ್ಲಿ ಶ್ರೀಲಂಕಾಪಡೆ
ಅಮೆರಿಕದ ಬೆದರಿಕೆ ಕುರಿತು ರಾಲ್ ಕ್ಯಾಸ್ಟ್ರೊ ಎಚ್ಚರಿಕೆ
ನ್ಯಾಟೋ ಕ್ಷಿಪಣಿ ದಾಳಿ ಐವರ ಸಾವು
ಗ್ರಹ ಗತಿ
ದೈನಿಕ - ಶುಭ ವಾರ್ತೆ ಇಂದು ನಿಮ್ಮ ಪಾಲಿಗಿದೆ. ಪ್ರೀತಿ ಪಾತ್ರರಾದವರೊಡನೆ ಇದ್ದ ಭಿನ್ನಾಭಿಪ್ರಾಯಗಳು ಕೊನೆಗೊಳ್ಳುವುದು. ವ್ಯವಹಾರದಲ್ಲಿ ಲಾಭವಾಗಲಿದೆ. ಪ್ರಯಾಣ ಅವಶ್ಯಕ. ನೆಂಟರ ಆಗಮನವಾಗಲಿದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಸಿದ್ದರಾಮಯ್ಯ ವಿರುದ್ಧ ಖರ್ಗೆ ಪರೋಕ್ಷ ವಾಗ್ದಾಳಿ
ಉಪ ಚುನಾವಣೆಯಲ್ಲಿನ ಸೋಲಿನ ಪರಾಮರ್ಶೆ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್, ಇದೀಗ ಮಾಜಿ ಉಪಮುಖ್ಯಮಂತ್ರಿ ....
2009 ಕನ್ನಡ ಅನುಷ್ಠಾನ ವರ್ಷವಾಗಿ ಆಚರಣೆ
ಡಾ.ಅಜಯ್‌ಕುಮಾರ್ ಸಿಂಗ್ ನೂತನ ಡಿಜಿಪಿ
ಮನರಂಜನೆ
ಚಿತ್ರ ಸುದ್ದಿ - ಆನೇಕಲ್ ಬಾಲರಾಜ್ ನಿರ್ಮಾಣದಲ್ಲಿ ಅವರ ಪುತ್ರ ಸಂತೋಷ್ ನಟಿಸಿರುವ 'ಕೆಂಪ' ಚಿತ್ರ ಮುಂದಿನ ವಾರ ತೆರೆಕಾಣುತ್ತಿದೆ. ಸೆನ್ಸಾರ್ ಆಗಿ 5 ತಿಂಗಳಾದರೂ ಚಿತ್ರಮಂದಿರ ಸಿಗದ ಕಾರಣ ಚಿತ್ರ
ಮುಂದೆ ಓದಿ|ಮತ್ತಷ್ಟು...