|
| ಲಷ್ಕರೆ ತಯ್ಬಾ ಕೈವಾಡಕ್ಕೆ ಸಾಕ್ಷ್ಯ: ಅಮೆರಿಕ |
| ಇಸ್ಲಾಮಾಬಾದ್, 4 ಡಿಸೆಂಬರ್ 2008 ( 19:14 IST ) | |
ಕಳೆದ ವಾರ ಮುಂಬೈನಲ್ಲಿ ನಡೆದ ಭಯಾನಕ ಭಯೋತ್ಪಾದನೆ ದಾಳಿಗಳಲ್ಲಿ ಲಷ್ಕರೆ ತಯ್ಬಾ ಭಾಗಿಯಾದ ಬಗ್ಗೆ ಸಾಕ್ಷ್ಯಾಧಾರವಿದೆ ಎಂದು ಅಮೆರಿಕ ಪಾಕಿಸ್ತಾನಕ್ಕೆ ತಿಳಿಸಿದ್ದು, ತಯ್ಬಾದ ಮುಖ್ಯಸ್ಥ ಹಫೀಝ್ ಸಯ್ಯೀದ್‌ನನ್ನು ಬಂಧಿಸಬೇಕೆಂದು ಅದು ಆಗ್ರಹಿಸಿದೆ. ವಿದೇಶಾಂಗ ಕಾರ್ಯದರ್ಶಿ ಕಂಡೊಲೀಜಾ ರೈಸ್ ಮತ್ತು ಪಾಕ್ ನಾಯಕತ್ವದ ನಡುವೆ ಮಾತುಕತೆಯಲ್ಲಿ ಈ ವಿಷಯ ಬಹಿರಂಗವಾಗಿದ್ದಾಗಿ ಸಮೀಪವರ್ತಿ ಮೂಲಗಳು ಹೇಳಿವೆ.
ಇಂತಹ ಅಮಾನುಷ ಭಯೋತ್ಪಾದನೆ ಕಾರ್ಯಾಚರಣೆ ಬಗ್ಗೆ ಐಎಸ್‌ಐ ಸೇರಿದಂತೆ ಸೇನೆಯ ಸಶಸ್ತ್ರ ಪಡೆಗಳಿಗೆ ತಿಳಿವಳಿಕೆ ಇಲ್ಲದಿರುವ ಸಂಗತಿ ನಂಬಲಸಾಧ್ಯ ಎಂದೂ ತಿಳಿಸಿದೆ.ಏತನ್ಮಧ್ಯೆ ತಮಗೆ ಐಎಸ್‌ಐ ದಾಳಿಯಲ್ಲಿ ಭಾಗಿಯಾಗಿರುವ ಬಗ್ಗೆ ದೃಢ ಸಾಕ್ಷ್ಯಾಧಾರವಿದೆ ಎಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ. 10 ಭಯೋತ್ಪಾದಕರಿಗೆ ತರಬೇತಿ ನೀಡಿದವರ‌್ಯಾರು ಮತ್ತು ಪಾಕಿಸ್ತಾನದಲ್ಲಿ ಎಲ್ಲಿ ತರಬೇತಿ ನೀಡಲಾಯಿತು ಮುಂತಾದ ಸಾಕ್ಷ್ಯಾಧಾರಗಳನ್ನು ಅಮೆರಿಕದ ಜತೆ ಹಂಚಿಕೊಳ್ಳಲಾಗಿದೆ ಎಂದು ಮೂಲಗಳು ಬಹಿರಂಗಪಡಿಸಿವೆ.
ತನಿಖೆಯಿಂದ ಸಿಕ್ಕಿರುವ ಸಾಕ್ಷ್ಯಾಧಾರದ ಪ್ರಕಾರ ಲಷ್ಕರೆ ತಯ್ಬಾದ ಇಬ್ಬರು ದಾಳಿಯ ಸೂತ್ರಧಾರರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಾಕಿ ಉರ್ ರೆಹ್ಮಾನ್ ಲಕ್ವಿ ಮತ್ತು ಯುಸುಫ್ ಮುಜಾಮಿಲ್ ಪಾಕಿಸ್ತಾನದಲ್ಲಿದ್ದಾರೆಂದು ನಂಬಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಲಖ್ವಿ ತಂಡದ ಕಾರ್ಯಾಚರಣೆ ಮುಖ್ಯಸ್ಥ ಮತ್ತು ಮುಜಾಮಿಲ್ ಕಾಶ್ಮೀರ ಮತ್ತಿತರ ಭಾಗಗಳಲ್ಲಿ ಕಾರ್ಯಾಚರಣೆ ಮುಖ್ಯಸ್ಥ. ಸೆರೆಸಿಕ್ಕಿರುವ ಭಯೋತ್ಪಾದಕ ಅಜ್ಮಲ್ ಅಮಿರ್ ಕಸಬ್ ಪೊಲೀಸರಿಗೆ ಲಖ್ವಿ ತನ್ನನ್ನು ಕಾರ್ಯಾಚರಣೆಗೆ ನೇಮಿಸಿಕೊಂಡನೆಂದು ತಿಳಿಸಿದ್ದಾನೆ. ಭಾರತೀಯ ಹಡಗನ್ನು ಅಪಹರಿಸಿದ ಬಳಿಕ ದುಷ್ಕರ್ಮಿಗಳು ಮುಜಾಮಿಲ್‌ಗೆ ಉಪಗ್ರಹ ಕರೆ ಮಾಡಿದ್ದಾರೆಂದು ಲಖ್ವಿ ಪೊಲೀಸರಿಗೆ ತಿಳಿಸಿದ್ದಾನೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮಿತ್ರರು ಸಹಕರಿಸಲಿದ್ದಾರೆ |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ |
| |
|
|
|
|
|
|
|