ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಮಾದಕವಸ್ತು ಚಟಕ್ಕೆ 30 ಸಾವಿರ ಬಲಿ
ಮಾಸ್ಕೋ, ಗುರುವಾರ, 4 ಡಿಸೆಂಬರ್ 2008   ( 18:43 IST )
ರಷ್ಯಾದಲ್ಲಿ ವರ್ಷಕ್ಕೆ 30ಸಾವಿರ ಜನರು ಮಾದಕವಸ್ತು ಚಟಕ್ಕೆ ಬಲಿಯಾಗುತ್ತಿದ್ದು, ಈ ಅಂಕಿ-ಅಂಶ ಯುರೋಪಿನ ಒಟ್ಟು ಲೆಕ್ಕಾಚಾರದ ಎಂಟು ಪಟ್ಟು ಅಧಿಕವಾಗಿದೆಯೆಂದು ರಷ್ಯಾದ ಮಾದಕವಸ್ತು ನಿಗ್ರಹ ಸಂಸ್ಥೆ ತಿಳಿಸಿದೆ.

1991ರಲ್ಲಿ ಸೋವಿಯತ್ ಒಕ್ಕೂಟದ ಪತನದ ನಂತರ ರಷ್ಯಾದಲ್ಲಿ ಮಾದಕವಸ್ತು ದುಶ್ಚಟಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ವೇಗವಾಗಿ ಏರುತ್ತಿದ್ದು, ಇದು ಯುರೋಪ್ ಒಕ್ಕೂಟಗಳಿಗಿಂತ ಎಂಟು ಪಟ್ಟು ಜಾಸ್ತಿಯಾಗಿದೆಯೆಂದು ರಷ್ಯಾದ ಡ್ರಗ್ಸ್ ಫೆಡರೆಷನ್‌ನ ನಿಯಂತ್ರಣ ಘಟಕ(ಎಫ್‌ಎಸ್‌ಕೆಎನ್)ದ ಅಂಕಿ-ಅಂಶ ತಿಳಿಸುತ್ತದೆ.

ರಷ್ಯಾದಲ್ಲಿ ಡ್ರಗ್ಸ್ ಚಟದಲ್ಲಿ ವರ್ಷಕ್ಕೆ ಬಲಿಯಾಗುತ್ತಿರುವ 30,000 ಮಂದಿಯಲ್ಲಿ ಹೆಚ್ಚಿನ ಸಂಖ್ಯೆಯವರು ಹದಿಹರೆಯದವರಾಗಿದ್ದಾರೆಂದು ಎಫ್‌ಎಸ್‌ಕೆಎನ್‌ನ ನಿರ್ದೇಶಕರಾದ ವಿಕ್ಟರ್ ಇವನೊವ್ ತಿಳಿಸಿದರು.

ರಷ್ಯಾದಲ್ಲಿ 2006ರಲ್ಲಿ ದುಶ್ಚಟಕ್ಕೆ ಒಳಗಾದವರ ಸಂಖ್ಯೆ 70ಸಾವಿರ, ಅದು 2007ರಲ್ಲಿ 78,000ಕ್ಕೆ ಹೆಚ್ಚಳಗೊಂಡಿತ್ತು. ಅಫ್ಘಾನಿಸ್ಥಾನದಿಂದ ಆಮದಾಗುವ ಹೆರಾಯಿನ್‌ ಎಂಬ ಮಾದಕ ದ್ರವ್ಯಕ್ಕೆ ರಷ್ಯಾದ 90 ಶೇಕಡಾ ಜನರು ಬಲಿಯಾಗುತ್ತಿರುವುದಾಗಿ ಅವರು ತಿಳಿಸಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಭಯೋತ್ಪಾದನೆ ಕುರಿತು ಕಠಿಣ ನಿಲುವಿಗೆ ರೈಸ್ ಒತ್ತಾಯ
ಜಿಂಬಾಬ್ವೆಯಲ್ಲಿ ಆರ್ಥಿಕ ಮುಗ್ಗಟ್ಟು: ಕಾಲರಾಕ್ಕೆ 560 ಬಲಿ
ಜಪಾನ್‌ನಲ್ಲಿ 6.1 ತೀವ್ರತೆಯ ಭೂಕಂಪ
ಭಯೋತ್ಪಾದಕನ ವಿರುದ್ಧ ಕ್ರಮಕ್ಕೆ ಅಮೆರಿಕಕ್ಕೆ ಅಧಿಕಾರ
ಉಗ್ರರಿಗೆ ಐಎಸ್‌ಐ ತರಬೇತಿ: ಅಮೆರಿಕ ಗುಪ್ತಚರ ಮಾಹಿತಿ
ಸೊಮಾಲಿ ಕಡಲ್ಗಳ್ಳರಿಂದ ಯೆಮೆನ್ ಹಡಗು ಬಂಧಮುಕ್ತ
ಗ್ರಹ ಗತಿ
ದೈನಿಕ - ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮಿತ್ರರು ಸಹಕರಿಸಲಿದ್ದಾರೆ
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಎಡಪಕ್ಷಗಳ ಜೊತೆಗೂಡಿ ಹೋರಾಟಕ್ಕೆ ಜೆಡಿಎಸ್ ಸಜ್ಜು
ರಾಜ್ಯದ ಎಂಟು ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ತೀರ್ಮಾನಿಸಿದೆ.
ಎನ್ಎಸ್‌ಜಿ ಪಡೆ ನೀಡುವಂತೆ ಕೇಂದ್ರಕ್ಕೆ ಸಿಎಂ ಮನವಿ
ಬೆಂಗಳೂರು ದಾಳಿಗೆ ಕೌಂಟ್ ಡೌನ್
ಮನರಂಜನೆ
ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ
ಮುಂದೆ ಓದಿ|ಮತ್ತಷ್ಟು...