|
| ಭಯೋತ್ಪಾದನೆ ಕುರಿತು ಕಠಿಣ ನಿಲುವಿಗೆ ರೈಸ್ ಒತ್ತಾಯ |
| ಇಸ್ಲಾಮಾಬಾದ್, ಗುರುವಾರ, 4 ಡಿಸೆಂಬರ್ 2008 ( 14:07 IST ) | |
ಮುಂಬೈನಲ್ಲಿ ಭಯೋತ್ಪಾದಕ ದಾಳಿಗಳ ಹಿನ್ನೆಲೆಯಲ್ಲಿ ಭಯೋತ್ಪಾದನೆ ಕುರಿತು ಕಠಿಣನಿಲುವನ್ನು ತಾಳುವಂತೆ ಪಾಕ್‌ಗೆ ಒತ್ತಾಯಿಸುವ ಸಲುವಾಗಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಕಂಡೊಲೀಜಾ ರೈಸ್ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದಾರೆ.
ತೀವ್ರವಾದ ಮತ್ತು ಭಯೋತ್ಪಾದನೆ ಬೆದರಿಕೆ ವಿರುದ್ಧ ಕಠಿಣ ಮತ್ತು ಗಡಸು ನಿಲುವನ್ನು ಹೊಂದಬೇಕು ಎನ್ನುವ ಬಗ್ಗೆ ತಾವು ಪಾಕ್‌ನಲ್ಲಿ ಚರ್ಚಿಸುವುದಾಗಿ ರೈಸ್ ಹೇಳಿದರು.ಪಾಕಿಸ್ತಾನವು ಭಯೋತ್ಪಾದನೆ ವಿರುದ್ಧ ಸೂಕ್ತ ಪ್ರತಿಕ್ರಿಯೆ ನೀಡಬೇಕು. ಅದು ದೃಢ ಮತ್ತು ಪರಿಣಾಮಕಾರಿ ಆಗಿರಬೇಕು ಎಂದು ಅವರು ನುಡಿದರು. ಪಾಕ್ ಸೇನಾಪಡೆ ಮುಖ್ಯಸ್ಥ ಜನರಲ್ ಅಸ್ಫಾಖ್ ಕಯಾನಿಯನ್ನು ಮೊದಲಿಗೆ ರಾವಲ್ಪಿಂಡಿಯಲ್ಲಿ ರೈಸ್ ಭೇಟಿ ಮಾಡಲಿದ್ದಾರೆ.
ಬಳಿಕ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಮತ್ತು ಪ್ರಧಾನ ಮಂತ್ರಿ ಯುಸುಫ್ ರಾಜಾ ಗಿಲಾನಿ ಜತೆ ವಿಚಾರವಿನಿಮಯ ನಡೆಸಲಿದ್ದಾರೆ.'ನವದೆಹಲಿ ಮತ್ತು ಪಾಕ್ ನಡುವೆ ತಾವು ಸಂಧಾನಕಾರರಾಗಿ ಕೆಲಸ ಮಾಡುತ್ತಿಲ್ಲ. ಭಯೋತ್ಪಾದನೆ ಬೆದರಿಕೆ ನಿಭಾಯಿಸುವುದು ಪಾಕಿಸ್ತಾನ ನಾಯಕತ್ವದ ಜವಾಬ್ದಾರಿ' ಎಂದು ಅವರು ನುಡಿದರು. ತಾವು ಪಾಕಿಸ್ತಾನದ ಪ್ರತಿಕ್ರಿಯೆ ಸಲುವಾಗಿ ಅಲ್ಲಿಗೆ ತೆರಳುತ್ತಿದ್ದೇನೆಯೇ ಹೊರತು ಸಂದೇಶಗಳನ್ನು ಒಯ್ಯುವುದಕ್ಕಲ್ಲ ಎಂದು ಅವರು ನುಡಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮಿತ್ರರು ಸಹಕರಿಸಲಿದ್ದಾರೆ |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ |
| |
|
|
|
|
|
|
|