ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಜಿಂಬಾಬ್ವೆಯಲ್ಲಿ ಆರ್ಥಿಕ ಮುಗ್ಗಟ್ಟು: ಕಾಲರಾಕ್ಕೆ 560 ಬಲಿ
ಹರಾರೆ, ಗುರುವಾರ, 4 ಡಿಸೆಂಬರ್ 2008   ( 13:43 IST )
ಜಿಂಬಾಬ್ವೆಯಲ್ಲಿ ಮಾರಣಾಂತಿಕ ಕಾಲರಾ 560 ಜೀವಗಳನ್ನು ಬಲಿತೆಗೆದುಕೊಂಡಿದ್ದು, ನೆರವು ನೀಡುವಂತೆ ಸರ್ಕಾರ ದಾನಿಗಳಿಗೆ ಮನವಿ ಮಾಡಿಕೊಂಡಿದೆ. ಆರೋಗ್ಯ ಕ್ಷೇತ್ರದಲ್ಲಿ ಸಂಪನ್ಮೂಲಗಳ ತೀವ್ರ ಕೊರತೆಯಿದೆ ಎಂದು ಆರೋಗ್ಯ ಸಚಿವ ಡೇವಿಡ್ ಪೆರಿರೆನ್ಯತ್ವ ತಿಳಿಸಿದ್ದಾಗಿ ಸುದ್ದಿಪತ್ರಿಕೆಯೊಂದು ವರದಿ ಮಾಡಿದೆ. 'ನಮ್ಮ ಆಸ್ಪತ್ರೆಗಳು ಅಕ್ಷರಶಃ ಕಾರ್ಯನಿರ್ವಹಿಸುತ್ತಿಲ್ಲ.

ನಮ್ಮ ಸಿಬ್ಬಂದಿಯ ಸ್ಥೈರ್ಯ ಕುಂದಿದ್ದು, ಅವರು ಕೆಲಸಕ್ಕೆ ಬರುವಂತೆ ಖಾತರಿಗೆ ಮತ್ತು ನಮ್ಮ ಆರೋಗ್ಯ ವ್ಯವಸ್ಥೆಯ ಪುನಶ್ಚೇತನಕ್ಕೆ ನಿಮ್ಮ ಬೆಂಬಲ ಅಗತ್ಯವಾಗಿದೆ' ಎಂದು ಅವರು ನುಡಿದರು.ಮಾರಣಾಂತಿಕ ಕಾಲರಾ ಹರಡುವಿಕೆಯಿಂದ ಸುಮಾರು 565 ಮಂದಿ ಬಲಿಯಾಗಿದ್ದಾರೆಂದು ವಿಶ್ವಸಂಸ್ಥೆ ಮಾನವೀಯ ನೆರವು ಕಚೇರಿ ಅಂದಾಜು ಮಾಡಿದ್ದು, ಹರಾರೆಯಲ್ಲಿ ತೀವ್ರ ಹಾನಿ ಉಂಟಾಗಿರುವುದಾಗಿ ತಿಳಿಸಿದೆ.

ಜಿಂಬಾಬ್ವೆಗೆ ಕಾಲರಾ ನಿರ್ಮ‌ೂಲನೆಗೆ ವೈದ್ಯಕೀಯ ಉಪಕರಣ ಮತ್ತು ಔಷಧಿಗಳು, ಆಹಾರ ಮತ್ತು ಮಕ್ಕಳಿಗೆ ಪೂರಕ ಆಹಾರ ಉಣಿಸುವ ಕಾರ್ಯಕ್ರಮಗಳ ಅಗತ್ಯವಿದೆ.
ಸಹಜ ಪರಿಸ್ಥಿತಿಯಲ್ಲಿ ಈ ಕಾಯಿಲೆ ನಿವಾರಣೆ ಮತ್ತು ವಾಸಿ ಮಾಡಬಹುದಾಗಿದ್ದು, ಜಿಂಬಾಬ್ವೆಯ ಆರೋಗ್ಯ ಕ್ಷೇತ್ರವು ಅಗತ್ಯಸಂಪನ್ಮೂಲಗಳಿಗೆ ಸಾಕಷ್ಟು ಹಣದ ಕೊರತೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಕುಸಿತದ ಅಂಚಿನಲ್ಲಿದ್ದು, ವೈದ್ಯರು ಮತ್ತು ಶುಶ್ರೂಷಕಿಯರು ವೇತನಕ್ಕಾಗಿ ಮುಷ್ಕರದ ಹಾದಿ ಹಿಡಿದಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಜಪಾನ್‌ನಲ್ಲಿ 6.1 ತೀವ್ರತೆಯ ಭೂಕಂಪ
ಭಯೋತ್ಪಾದಕನ ವಿರುದ್ಧ ಕ್ರಮಕ್ಕೆ ಅಮೆರಿಕಕ್ಕೆ ಅಧಿಕಾರ
ಉಗ್ರರಿಗೆ ಐಎಸ್‌ಐ ತರಬೇತಿ: ಅಮೆರಿಕ ಗುಪ್ತಚರ ಮಾಹಿತಿ
ಸೊಮಾಲಿ ಕಡಲ್ಗಳ್ಳರಿಂದ ಯೆಮೆನ್ ಹಡಗು ಬಂಧಮುಕ್ತ
ಜಂಟಿ ತನಿಖಾ ವ್ಯವಸ್ಥೆ ರಚನೆಗೆ ಪಾಕ್ ಪ್ರಸ್ತಾಪ
ಭಾರತದ ಬೇಡಿಕೆಗೆ ಜರ್ದಾರಿ ನಿರಾಕರಣೆ
ಗ್ರಹ ಗತಿ
ದೈನಿಕ - ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮಿತ್ರರು ಸಹಕರಿಸಲಿದ್ದಾರೆ
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಎಡಪಕ್ಷಗಳ ಜೊತೆಗೂಡಿ ಹೋರಾಟಕ್ಕೆ ಜೆಡಿಎಸ್ ಸಜ್ಜು
ರಾಜ್ಯದ ಎಂಟು ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ತೀರ್ಮಾನಿಸಿದೆ.
ಎನ್ಎಸ್‌ಜಿ ಪಡೆ ನೀಡುವಂತೆ ಕೇಂದ್ರಕ್ಕೆ ಸಿಎಂ ಮನವಿ
ಬೆಂಗಳೂರು ದಾಳಿಗೆ ಕೌಂಟ್ ಡೌನ್
ಮನರಂಜನೆ
ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ
ಮುಂದೆ ಓದಿ|ಮತ್ತಷ್ಟು...