|
| ಭಯೋತ್ಪಾದಕನ ವಿರುದ್ಧ ಕ್ರಮಕ್ಕೆ ಅಮೆರಿಕಕ್ಕೆ ಅಧಿಕಾರ |
| ವಾಷಿಂಗ್ಟನ್, ಗುರುವಾರ, 4 ಡಿಸೆಂಬರ್ 2008 ( 13:05 IST ) | |
ಮುಂಬೈನಲ್ಲಿ ನಡೆದ ಮಾರಕ ದಾಳಿಯಲ್ಲಿ 6 ಅಮೆರಿಕನ್ನರು ಹತರಾಗಿರುವ ಹಿನ್ನೆಲೆಯಲ್ಲಿ, ಸೆರೆಸಿಕ್ಕಿರುವ ಭಯೋತ್ಪಾದಕನ ಮೇಲೆ ಕ್ರಮ ಜರುಗಿಸಲು ಅಮೆರಿಕಕ್ಕೆ ಅಧಿಕಾರವಿದೆ ಎಂದು ಅಮೆರಿಕದ ಅಟಾರ್ನಿ ಜನರಲ್ ಮೈಕೆಲ್ ಮಕಾಸೆ ತಿಳಿಸಿದ್ದು, ಆದರೆ ಹಾಗೆ ಯೋಜನೆ ಇರುವ ಬಗ್ಗೆ ತಿಳಿಸಲಿಲ್ಲ.
ಅಮೆರಿಕದ ಅಧ್ಯಕ್ಷರ ಬದಲಾವಣೆ ಅವಧಿಯಲ್ಲಿ ಭಯೋತ್ಪಾದನೆ ದಾಳಿಗೆ ಅಮೆರಿಕ ಸುಲಭಬೇಧ್ಯವಾಗಿದೆ ಎಂಬ ಮಾತನ್ನು ತಾವು ನಂಬುವುದಿಲ್ಲ ಎಂದು ಮಕಾಸೆ ಹೇಳಿದರು. ದಾಳಿಗೆ ಸರಿಯಾದ ಕ್ಷಣ ಎಂದು ಮನವರಿಕೆಯಾದ ಬಳಿಕವೇ ಭಯೋತ್ಪಾದಕರು ದಾಳಿ ನಡೆಸುತ್ತಾರೆಯೇ ಹೊರತು ರಾಜಕೀಯ ವೇಳಾಪಟ್ಟಿಯ ಪ್ರಕಾರ ದಾಳಿ ಮಾಡುವುದಿಲ್ಲ ಎಂದು ಅವರು ನುಡಿದರು.
ಅಮೆರಿಕಕ್ಕೆ ಸುರಕ್ಷಿತವಾಗಿಡುವ ಎಲ್ಲ ರೀತಿಯ ಕಣ್ಗಾವಲು ತಂತ್ರಗಳಿವೆ ಎಂದು ಮಕಾಸೆ ಹೇಳಿದರು. ತಮ್ಮ ಉತ್ತರಾಧಿಕಾರಿಯಾಗಲಿರುವ ಎರಿಕ್ ಹೋಲ್ಡರ್ ಜತೆ ತಾವು ಇನ್ನೂ ಮಾತನಾಡಿಲ್ಲ ಎಂದು ಅಟಾರ್ನಿ ಜನರಲ್ ಹೇಳಿದ್ದು, ಪ್ರಸಕ್ತ ನ್ಯಾಯಾಂಗ ಇಲಾಖೆ ಅಧಿಕಾರಿಗಳು ಒಬಾಮಾ ಪರಿವರ್ತನೆ ತಂಡದ ಜತೆ ಕೆಲಸ ಮಾಡುತ್ತಿದ್ದಾರೆಂದು ಹೇಳಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮಿತ್ರರು ಸಹಕರಿಸಲಿದ್ದಾರೆ |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ |
| |
|
|
|
|
|
|
|