|
| ಉಗ್ರರಿಗೆ ಐಎಸ್‌ಐ ತರಬೇತಿ: ಅಮೆರಿಕ ಗುಪ್ತಚರ ಮಾಹಿತಿ |
| ವಾಷಿಂಗ್ಟನ್, ಗುರುವಾರ, 4 ಡಿಸೆಂಬರ್ 2008 ( 12:21 IST ) | |
ಮುಂಬೈನಲ್ಲಿ ಭಯೋತ್ಪಾದನೆ ನಡೆಸಿದ ದಾಳಿಕೋರರಿಗೆ ಪಾಕಿಸ್ತಾನ ಸೇನೆಯ ಮಾಜಿ ಅಧಿಕಾರಿಗಳು ಮತ್ತು ಪ್ರಭಾವಶಾಲಿ ಐಎಸ್‌ಐ ತರಬೇತಿ ನೀಡುವಲ್ಲಿ ಸಹಾಯ ಮಾಡಿರುವುದಾಗಿ ಅಮೆರಿಕದ ಗುಪ್ತಚರ ಇಲಾಖೆಗಳು ತೀರ್ಮಾನಿಸಿವೆ ಎಂದು ಮಾಜಿ ರಕ್ಷಣಾ ಇಲಾಖೆಯ ಅಧಿಕಾರಿ ಹೇಳಿದ್ದಾರೆ.
ತಮ್ಮ ಗುರುತು ಹೇಳಲು ಬಯಸದ ಅಧಿಕಾರಿ, ಭಯೋತ್ಪಾದಕರು ಮತ್ತು ಪಾಕಿಸ್ತಾನ ಸರ್ಕಾರದ ನಡುವೆ ಯಾವುದೇ ನಿರ್ದಿಷ್ಟ ಸಖ್ಯಗಳು ಬಹಿರಂಗವಾಗಿಲ್ಲ ಎಂದು ಹೇಳಿದರು.ಮುಂಬೈ ನಗರವನ್ನು ತಲ್ಲಣಗೊಳಿಸಿದ ಭಯೋತ್ಪಾದಕರಿಗೆ ಪಾಕ್ ಆಶ್ರಯ ನೀಡಿದೆಯೆಂಬ ಅಮೆರಿಕ ಬೆಂಬಲಿತ ಭಾರತದ ಆರೋಪಗಳನ್ನು ಪಾಕಿಸ್ತಾನ ಇಲ್ಲಿಯವರೆಗೆ ನಿರಾಕರಿಸುತ್ತಾ ಬಂದಿದ್ದು ಭಯೋತ್ಪಾದಕರು ಯಾವುದೇ ರಾಷ್ಟ್ರದ ಬೆಂಬಲವಿಲ್ಲದ ವ್ಯಕ್ತಿಗಳು ಎಂದು ಹೇಳಿದ್ದರು.
ಮುಂಬೈ ದಾಳಿಕೋರರು ಮತ್ತು ತರಬೇತಿದಾರರು ಪಾಕಿಸ್ತಾನದಿಂದ ಆಗಮಿಸಿರುವುದನ್ನು ಸಂಕೇತಿಸುವ ದೃಢ ಸಾಕ್ಷ್ಯಾಧಾರ ಮತ್ತು ಗುಪ್ತಚರ ಮಾಹಿತಿ ತನ್ನ ಬಳಿ ಇರುವುದಾಗಿ ಭಾರತ ಹೇಳಿರುವ ಸಂದರ್ಭದಲ್ಲೇ ರಕ್ಷಣಾ ಇಲಾಖೆಯ ಮಾಜಿ ಅಧಿಕಾರಿಯ ಹೇಳಿಕೆ ಹೊರಬಿದ್ದಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡ ಪೂರ್ಣಗೊಳ್ಳಲಿವೆ ಮಿತ್ರರು ಸಹಕರಿಸಲಿದ್ದಾರೆ |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ |
| |
|
|
|
|
|
|
|