ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಜಂಟಿ ತನಿಖಾ ವ್ಯವಸ್ಥೆ ರಚನೆಗೆ ಪಾಕ್ ಪ್ರಸ್ತಾಪ
ಇಸ್ಲಾಮಾಬಾದ್, ಬುಧವಾರ, 3 ಡಿಸೆಂಬರ್ 2008   ( 16:56 IST )
ಅಮೆರಿಕದ ಒತ್ತಡಕ್ಕೆ ಮಣಿದಿರುವ ಪಾಕಿಸ್ತಾನವು ಮುಂಬೈ ಭಯೋತ್ಪಾದನೆ ದಾಳಿಗಳನ್ನು ಕುರಿತ ತನಿಖೆಗೆ ಜಂಟಿ ತನಿಖಾ ವ್ಯವಸ್ಥೆಯನ್ನು ಸ್ಥಾಪಿಸುವ ಪ್ರಸ್ತಾಪವನ್ನು ಮಾಡಿದೆ. ಎಲ್‌ಇಟಿ ಮುಖ್ಯಸ್ಥ ಹಫೀಜ್ ಮೊಹಮದ್ ಮತ್ತಿತರ ಉಗ್ರರ ಹಸ್ತಾಂತರಕ್ಕೆ ಭಾರತ ಮಂಡಿಸಿರುವ ಬೇಡಿಕೆಗೆ ಸೂಕ್ತ ಪ್ರತಿಕ್ರಿಯೆ ನೀಡುವುದಾಗಿಯ‍ೂ ಪಾಕಿಸ್ತಾನ ತಿಳಿಸಿದೆ. ಮುಂಬೈ ಭಯೋತ್ಪಾದನೆ ತನಿಖೆಗೆ ಭಾರತಕ್ಕೆ ಸಂಪೂರ್ಣ ಸಹಕಾರ ನೀಡುವಂತೆ ಬುಷ್ ಆಡಳಿತವು ಸೂಚಿಸಿದ ಬೆನ್ನ ಹಿಂದೆಯೇ ಇಸ್ಲಾಮಾಬಾದ್ ಮೇಲಿನ ಪ್ರಸ್ತಾಪ ಮಾಡಿದೆ.

ಮುಂಬೈ ದಾಳಿಯ ಸೂತ್ರಧಾರರನ್ನು ಪತ್ತೆಹಚ್ಚಲು ಪ್ರತಿಯೊಂದು ರೀತಿಯಲ್ಲಿ ಸಹಾಯಹಸ್ತ ನೀಡಲು ಪಾಕಿಸ್ತಾನ ಸಿದ್ಧವಿದೆ ಎಂದು ವಿದೇಶಾಂಗ ಸಚಿವ ಶಾ ಮಹಮ‌ೂದ್ ಖುರೇಷಿ ತಿಳಿಸಿದರು.ನವದೆಹಲಿಗೆ ಬುಧವಾರ ಆಗಮಿಸಿದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಕಂಡೊಲೀಜಾ ರೈಸ್ ನಾವು ಪಾಕಿಸ್ತಾನದಿಂದ ಸಂಪೂರ್ಣ ಪಾರದರ್ಶಕ ಮತ್ತು ಸಹಕಾರವನ್ನು ನಿರೀಕ್ಷಿಸಿರುವುದಾಗಿ ಲಂಡನ್‌ನಲ್ಲಿ ತಿಳಿಸಿದ್ದರು.

ಸುಮಾರು 20 ಭಯೋತ್ಪಾದಕರನ್ನು ಹಸ್ತಾಂತರಿಸಬೇಕೆಂಬ ಭಾರತದ ಕೋರಿಕೆಗೆ, ಮಾಹಿತಿ ಸಚಿವ ಶೆರಿ ರೆಹಮಾನ್ "ಭಯೋತ್ಪಾದಕ ಪಟ್ಟಿ" ನಮಗೆ ಲಭ್ಯವಾದ ಬಳಿಕ ಅದಕ್ಕೆ ಪ್ರತಿಕ್ರಿಯೆಯನ್ನು ರೂಪಿಸುವುದಾಗಿ ಅವರು ನುಡಿದರು.ಭಾರತದ ಪಟ್ಟಿಯಲ್ಲಿ ಲಷ್ಕರೆ ತಯ್ಯಬಾ ಮುಖ್ಯಸ್ಥ ಹಫೀಜ್ ಮೊಹಮದ್ ಮತ್ತು ಜೈಷೆ ಮೊಹಮದ್ ಮುಖ್ಯಸ್ಥ ಮಸೂದ್ ಅಝರ್ ಅಲ್ಲದೇ ದಾವೂದ್ ಇಬ್ರಾಹಿಂ ನೆಲೆ ಸ್ಥಾಪಿಸಿಕೊಂಡಿದ್ದು, ಭಾರತದ ಮೇಲೆ ಭಯೋತ್ಪಾದನೆ ದಾಳಿಗಳಲ್ಲಿ ಶಂಕಿತರಾಗಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಭಾರತದ ಬೇಡಿಕೆಗೆ ಜರ್ದಾರಿ ನಿರಾಕರಣೆ
ಪ್ರಧಾನಿಯನ್ನು ಪದಚ್ಯುತಗೊಳಿಸಿದ ಬ್ಯಾಂಕಾಕ್ ಕೋರ್ಟ್
ಕಡಲ್ಗಳ್ಳರಿಂದ ಪಾರಾದ ಅಮೆರಿಕದ ಹಡಗು
ಎನ್‌ಎಸ್‌ಜಿ ವಿರುದ್ಧ ಆರೋಪ ಸಲ್ಲದು: ಇಸ್ರೇಲ್
ಮುಂಬೈ ದಾಳಿಗೆ ಲಷ್ಕರೆ ತಯ್ಯಬಾ ಕಾರಣ: ಮೆಕೊನೆಲ್
ಒಬಾಮಾ ತಂಡದೊಂದಿಗೆ ಕಾರ್ಯನಿರ್ವಹಣೆ:ಚೀನಾ
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಆಳ್ವಾಸ್ ನುಡಿಸಿರಿಗೆ ವೈಭವದ ಚಾಲನೆ
ಐದನೇ ವರ್ಷದ ಆಳ್ವಾಸ್ ನುಡಿಸಿ ಕಾರ್ಯಕ್ರಮವು ಶುಕ್ರವಾರ ಬೆಳಿಗ್ಗೆ ಕನ್ನಡದ ಸಾಂಸ್ಕೃತಿಕ, ಜಾನಪದ ಕಲಾ....
ಸಂಸ್ಕೃತಿ ಅರಗಿಸಿಕೊಳ್ಳಲು ಕನ್ನಡ ಮನಸ್ಸಿನ ಪ್ರಯತ್ನ: ಕಣವಿ
ನುಡಿಸಿಮುಖ್ಯಾಂಶಗಳು
ಮನರಂಜನೆ
ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ
ಮುಂದೆ ಓದಿ|ಮತ್ತಷ್ಟು...