|
| ಭಾರತದ ಬೇಡಿಕೆಗೆ ಜರ್ದಾರಿ ನಿರಾಕರಣೆ |
| ಇಸ್ಲಾಮಾಬಾದ್, ಬುಧವಾರ, 3 ಡಿಸೆಂಬರ್ 2008 ( 13:25 IST ) | |
20 ಮಂದಿ ತಲೆತಪ್ಪಿಸಿಕೊಂಡಿರುವ ಭಯೋತ್ಪಾದಕರನ್ನು ಹಸ್ತಾಂತರಿಸಬೇಕೆಂಬ ಭಾರತದ ಬೇಡಿಕೆಯನ್ನು ಪಾಕಿಸ್ತಾನದ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ಬುಧವಾರ ತಿರಸ್ಕರಿಸಿದ್ದಾರೆ. ತಮ್ಮ ರಾಷ್ಟ್ರವು ಮುಂಬೈನಲ್ಲಿ ನಡೆದ ಮಾರಕ ಭಯೋತ್ಪಾದನೆ ದಾಳಿಗಳಲ್ಲಿ ಭಾಗಿಯಾಗಿದೆಯೆಂಬ ಭಾರತದ ಆರೋಪವನ್ನು ಕೂಡ ಅವರು ನಿರಾಕರಿಸಿದ್ದಾರೆ.
ಅಮೆರಿಕದ ಟೆಲಿವಿಷನ್ ಜಾಲ ಸಿಎನ್‌ಎನ್‌ಗೆ ನೀಡಿದ ಸಂದರ್ಶನದಲ್ಲಿ ದಾಳಿಯಲ್ಲಿ ಭಾಗಿಯಾದ ಭಯೋತ್ಪಾದಕನೊಬ್ಬ ಪಾಕಿಸ್ತಾನಕ್ಕೆ ಸೇರಿದವನು ಎಂಬ ಭಾರತದ ವಾದವನ್ನು ಜರ್ದಾರಿ ಪ್ರಶ್ನಿಸಿದರು. ಅವನು ಖಂಡಿತವಾಗಿ ಪಾಕಿಸ್ತಾನಿ ಎನ್ನುವುದಕ್ಕೆ ಯಾವುದೇ ಸ್ಪಷ್ಟ ಸಾಕ್ಷ್ಯವಿಲ್ಲ ಎಂದು ಜರ್ದಾರಿ ಹೇಳಿದರು.
ಪಾಕಿಸ್ತಾನ ಈ ಆರೋಪದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಅವರು ಯಾವುದೇ ರಾಷ್ಟ್ರದ ಬೆಂಬಲವಿಲ್ಲದ ವ್ಯಕ್ತಿಗಳು ಎಂದು ಹೇಳಿ, ಕಳೆದ ಎರಡು ದಿನಗಳಿಂದ ಕರಾಚಿಯಲ್ಲಿ ಸಹ ಭಯೋತ್ಪಾದನೆಗೆ 40-45 ಜನರು ಬಲಿಯಾಗಿದ್ದಾರೆಂದು ಜರ್ದಾರಿ ತಿಳಿಸಿದರು.
ನಮಗೆ ಸಾಕ್ಷ್ಯಾಧಾರ ನೀಡಿದರೆ ಅವುಗಳನ್ನು ಖಂಡಿತವಾಗಿ ಪರಿಶೀಲನೆ ಮಾಡುವುದಾಗಿ ಅವರು ಹೇಳಿದರು. ಈ ಕ್ಷಣದಲ್ಲಿ ಕೆಲವು ವ್ಯಕ್ತಿಗಳನ್ನು ಮಾತ್ರ ಹೆಸರಿಸಲಾಗಿದ್ದು, ಯಾವುದೇ ಸಾಕ್ಷ್ಯ, ತನಿಖೆ ವರದಿಯನ್ನು ನೀಡಿಲ್ಲ ಎಂದು ಅವರು ನುಡಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ |
| |
|
|
|
|
|
|
|