|
| ಎನ್‌ಎಸ್‌ಜಿ ವಿರುದ್ಧ ಆರೋಪ ಸಲ್ಲದು: ಇಸ್ರೇಲ್ |
| ಜೆರುಸಲೇಂ, ಬುಧವಾರ, 3 ಡಿಸೆಂಬರ್ 2008 ( 13:00 IST ) | |
ಭಾರತದ ಕಮಾಂಡೊಗಳು ಪ್ರಮಾದವಶಾತ್ ನಾರಿಮನ್ ಹೌಸ್ ಕಾರ್ಯಾಚರಣೆ ಸಂದರ್ಭದಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚು ಯೆಹೂದಿ ಒತ್ತೆಯಾಳುಗಳನ್ನು ಕೊಂದಿರಬಹುದು ಎಂಬ ಇಸ್ರೇಲಿ ರಕ್ಷಣಾ ತಂಡದ ಆರೋಪವನ್ನು ಬೇಜವಾಬ್ದಾರಿ ಹೇಳಿಕೆ ಎಂದು ಇಸ್ರೇಲ್ ಸರ್ಕಾರ ಮಂಗಳವಾರ ಟೀಕಿಸಿದೆ. ಈ ಪ್ರತಿಕ್ರಿಯೆಯಿಂದಾಗಿ ದ್ವಿಪಕ್ಷೀಯ ಬಾಂಧವ್ಯಕ್ಕೆ ಗಣನೀಯ ಹಾನಿ ಉಂಟಾಗಬಹುದು ಎಂದು ಅದು ಹೇಳಿದೆ. ಮಾರಕ ದಾಳಿಗಳು ಸಂಭವಿಸಿದ ಬಳಿಕ ರಕ್ಷಣಾ ಕಾರ್ಯಾಚರಣೆಗೆ ಸ್ವಯಂಪ್ರೇರಣೆಯಿಂದ ತೆರಳಿದ್ದ 6 ಸದಸ್ಯರ ಜಾಕಾ ಸ್ವಯಂಸೇವಾ ತಂಡದ ಬಗ್ಗೆ ಮಾತನಾಡಿದ ಹಿರಿಯ ವಿದೇಶಾಂಗ ಸಚಿವಾಲಯದ ಅಧಿಕಾರಿಯೊಬ್ಬರು ಅವರು ಎಲ್ಲ ರೀತಿಯ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆಂದು ನುಡಿದರು.ಪತ್ರಕರ್ತರಿಗೆ ಎಲ್ಲ ತರದ ಕಥೆಗಳನ್ನು ಅವರು ಮಾರುತ್ತಿದ್ದು, ಅದರಿಂದ ಮನ್ನಣೆ ಗಳಿಸುತ್ತಿದ್ದಾರೆಂದು ಅಧಿಕಾರಿ ಜೆರುಸಲೇಂ ಪೋಸ್ಟ್‌ಗೆ ತಿಳಿಸಿದರು.
ನಾರಿಮನ್ ಹೌಸ್‌ನ ಒಂದು ಅಥವಾ ಅದಕ್ಕಿಂತ ಹೆಚ್ಚು ಒತ್ತೆಯಾಳುಗಳನ್ನು ಎನ್‌ಸಿಜಿ ಕಮಾಂಡೊಗಳು ಕೊಂದಿರಬಹುದು. ಭಯೋತ್ಪಾದಕರು ಎಲ್ಲಾ ಒತ್ತೆಯಾಳುಗಳನ್ನು ಕೊಂದಿದ್ದಾರೆಂದು ತಾವು ಭಾವಿಸುವುದಿಲ್ಲ' ಎಂದು ಜಾಕಾ ತಂಡದ ಮುಖ್ಯಸ್ಥ ಹೈಮ್ ವೈಂಗಾರ್ಟನ್ ತಿಳಿಸಿದ್ದರು.
ಇದೊಂದು ಬೇಜವಾಬ್ದಾರಿ ಹೇಳಿಕೆಯಾಗಿದ್ದು, ಗಂಭೀರ ಪರಿಣಾಮ ಬೀರಬಹುದು ಎಂದು ಹೇಳಿದ ಅಧಿಕಾರಿ, ಜಾಕಾ ತಂಡದ ಹಸ್ತಕ್ಷೇಪದಿಂದ ಭಾರತ-ಇಸ್ರೇಲ್ ಸಂಬಂಧಕ್ಕೆ ಧಕ್ಕೆಯಾಗಬಹುದು ಎಂದು ನುಡಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ |
| |
|
|
|
|
|
|
|