ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಪಾಕ್ ಸೇನೆ ಉಗ್ರರನ್ನು ಸದೆಬಡೆಯಲಿ:ನ್ಯಾಟೋ
ಬ್ರುಸೆಲ್ಸ್, ಮಂಗಳವಾರ, 2 ಡಿಸೆಂಬರ್ 2008   ( 13:56 IST )
ಮುಂಬೈಯಲ್ಲಿ ನಡೆದ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಭಾರತದ ವಿರುದ್ಧ ಉದ್ರಿಕ್ತ ವಾತಾವರಣ ನಿರ್ಮಾಣ ಮಾಡುವುದನ್ನು ಬಿಟ್ಟು ಬುಡಕಟ್ಟು ಪ್ರದೇಶಗಳಲ್ಲಿರುವ ಉಗ್ರರ ವಿರುದ್ಧ ಕಾರ್ಯಾಚರಣೆಯನ್ನು ಪಾಕಿಸ್ತಾನ ಮುಂದುವರಿಸಲಿ ಎಂದು ಪಾಕ್‌ಗೆ ನ್ಯಾಟೋ ಪಡೆಗಳು ಸಲಹೆ ನೀಡಿವೆ.

ಪಾಕಿಸ್ತಾನ ಬುಡಕಟ್ಟು ಪ್ರದೇಶಗಳಲ್ಲಿರುವ ಉಗ್ರರ ವಿರುದ್ಧ ಕಾರ್ಯಾಚರಣೆಯನ್ನು ಮುಂದುವರಿಸಿದಲ್ಲಿ ಮುಂಬೈಯಂತಹ ಘಟನೆಗಳು ಮರುಕಳಿಸುವುದಿಲ್ಲ ಎಂದು ನ್ಯಾಟೋ ವಕ್ತಾರ ಜೇಮ್ಸ್ ಅಪ್ಪಾತುರೈ ಹೇಳಿದ್ದಾರೆ.

ಅಫಘಾನ್ ಗಡಿಯಲ್ಲಿರುವ ಪಾಕ್ ಸೇನೆಯನ್ನು ಭಾರತ ಗಡಿಗೆ ಸಾಗಿಸುವ ಸರಕಾರದ ಪ್ರಯತ್ನವನ್ನು ಟೀಕಿಸಿದ ಜೇಮ್ಸ್, ಇಂತಹ ಕ್ರಮಗಳಿಂದಾಗಿ ಉಗ್ರರಿಗೆ ಮತ್ತಷ್ಟು ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂದು ಕಿಡಿಕಾರಿದ್ದಾರೆ.

ಬ್ರುಸೆಲ್ಸ್‌ನಲ್ಲಿ 26 ವಿದೇಶಾಂಗ ಸಚಿವರ ಸಭೆ ಮುಂದಿರುವಂತೆ ನ್ಯಾಟೋ ಪಡೆಗಳ ವಕ್ತಾರರಾದ ಜೇಮ್ಸ್ ಮಾತನಾಡಿ , ಪಾಕಿಸ್ತಾನ ಸರಕಾರ ಉತ್ತರ ಭಾಗದಲ್ಲಿ ಉಗ್ರರ ವಿರುದ್ಧ ಹೋರಾಡಲು ಸಶಕ್ತ ಎಂದು ತೋರಿಸಿಕೊಟ್ಟಿದೆ. ಅದನ್ನು ದೇಶದ ಇತರ ಭಾಗಗಳಲ್ಲಿ ಕೂಡಾ ಉಗ್ರರ ವಿರುದ್ಧ ಸೇನಾಕಾರ್ಯಾಚರಣೆಯನ್ನು ಮುಂದುವರಿಸುವಂತೆ ಪಾಕ್ ಸರಕಾರಕ್ಕೆ ಕೋರಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಪ್ರಜಾಪ್ರಭುತ್ವ ಬಲವರ್ಧನೆಗೆ ಮುಷರಫ್ ಒತ್ತಾಯ
ಭಾರತ ಪುರಾವೆ ಒದಗಿಸಿದಲ್ಲಿ ಕಠಿಣ ಕ್ರಮ: ಖುರೇಶಿ
ಉಗ್ರರ ದಾಳಿಯಲ್ಲಿ ಪಾಕ್ ಕೈವಾಡವಿಲ್ಲ-ಆಸಿಫ್
ಅರಬ್‌ದೇಶಗಳೊಂದಿಗೆ ಪರಮಾಣು ಘಟಕ:ಇರಾನ್
ನೈಜೆರಿಯಾ ಕೋಮಗಲಭೆಗೆ 400 ಮಂದಿ ಸಾವು
ತನಿಖೆಗೆ ಸಂಪೂರ್ಣ ಸಹಕಾರ;ಮಲೇಷಿಯಾ
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಆಳ್ವಾಸ್ ನುಡಿಸಿರಿಗೆ ವೈಭವದ ಚಾಲನೆ
ಐದನೇ ವರ್ಷದ ಆಳ್ವಾಸ್ ನುಡಿಸಿ ಕಾರ್ಯಕ್ರಮವು ಶುಕ್ರವಾರ ಬೆಳಿಗ್ಗೆ ಕನ್ನಡದ ಸಾಂಸ್ಕೃತಿಕ, ಜಾನಪದ ಕಲಾ....
ಸಂಸ್ಕೃತಿ ಅರಗಿಸಿಕೊಳ್ಳಲು ಕನ್ನಡ ಮನಸ್ಸಿನ ಪ್ರಯತ್ನ: ಕಣವಿ
ನುಡಿಸಿಮುಖ್ಯಾಂಶಗಳು
ಮನರಂಜನೆ
ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ
ಮುಂದೆ ಓದಿ|ಮತ್ತಷ್ಟು...