ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಭಾರತ ಪುರಾವೆ ಒದಗಿಸಿದಲ್ಲಿ ಕಠಿಣ ಕ್ರಮ: ಖುರೇಶಿ
ಇಸ್ಲಾಮಾಬಾದ್, ಸೋಮವಾರ, 1 ಡಿಸೆಂಬರ್ 2008   ( 16:30 IST )
ಮುಂಬೈನಲ್ಲಿ ನಡೆದ ಉಗ್ರರ ದಾಳಿಯ ಕುರಿತಂತೆ ವ್ಯಯಕ್ತಿಕ ಅಥವಾ ಯಾವುದೇ ಉಗ್ರರ ಗುಂಪುಗಳು ಭಾಗಿಯಾಗಿರುವ ಬಗ್ಗೆ ಭಾರತ ಪುರಾವೆಗಳನ್ನು ಒದಗಿಸಿದಲ್ಲಿ ಪಾಕಿಸ್ತಾನ ಗೂಢಾಚಾರ ಸಂಸ್ಥೆ ಸೂಕ್ತ ಕ್ರಮಕೈಗೊಳ್ಳಲಿದೆ ಎಂದು ಪಾಕ್ ಹೇಳಿಕೆ ನೀಡಿದೆ.

ಪಾಕಿಸ್ತಾನ ಭಾರತದೊಂದಿಗೆ ಉತ್ತಮ ಬಾಂಧವ್ಯವನ್ನು ಬಯಸುತ್ತದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಶಿ ಹೇಳಿಕೆ ನೀಡಿದ್ದು, ಪಾಕ್ ಮೂಲದ ಉಗ್ರರು ದಾಳಿ ನಡೆಸಿದ್ದಾರೆ ಎಂದು ಭಾರತ ಪಾಕ್ ವಿರುದ್ಧ ಕಿಡಿಕಾರಿದೆ.

ಮುಂಬೈ ಘಟನೆ ಕುರಿತಂತೆ ತನಿಖೆ ನಡೆಸಲು ಪಾಕಿಸ್ತಾನದ ಐಎಸ್‌ಐ ಸಂಪೂರ್ಣ ಸಹಕಾರ ನೀಡಲಿದ್ದು, ಉಗ್ರರ ದಾಳಿಗೆ ಹಾಗೂ ಪಾಕಿಸ್ತಾನಕ್ಕೆ ಯಾವುದೇ ರೀತಿಯ ಸಂಬಂಧವಿಲ್ಲವಾದ್ದರಿಂದ ನಾಚಿಕೆ ಪಡುವ ಅಥವಾ ಮುಚ್ಚಿಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಖುರೇಶಿ ಟಿ.ವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಪಾಕಿಸ್ತಾನ ಕೂಡಾ ಭಯೋತ್ಪಾದನೆಗೆ ತುತ್ತಾಗಿದ್ದರಿಂದ ಉಭಯ ದೇಶಗಳು ಭಯೋತ್ಪಾದನೆ ನಿರ್ಮೂಲನೆಗಾಗಿ ಜಂಟಿ ಹೋರಾಟ ನಡೆಸುವುದು ಅಗತ್ಯವಾಗಿದೆ.ಉಗ್ರರ ದಾಳಿಯಿಂದಾಗಿ ನಿನ್ನೆ ನಡೆಯಬೇಕಾಗಿದ್ದ ಉಭಯ ದೇಶಗಳ ಶಾಂತಿ ಮಾತುಕತೆ ಒತ್ತಡಕ್ಕೆ ಸಿಲುಕಿತು ಎಂದು ಪಾಕ್ ವಿದೇಶಾಂಗ ಸಚಿವ ಖುರೇಶಿ ಹೇಳಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಉಗ್ರರ ದಾಳಿಯಲ್ಲಿ ಪಾಕ್ ಕೈವಾಡವಿಲ್ಲ-ಆಸಿಫ್
ಅರಬ್‌ದೇಶಗಳೊಂದಿಗೆ ಪರಮಾಣು ಘಟಕ:ಇರಾನ್
ನೈಜೆರಿಯಾ ಕೋಮಗಲಭೆಗೆ 400 ಮಂದಿ ಸಾವು
ತನಿಖೆಗೆ ಸಂಪೂರ್ಣ ಸಹಕಾರ;ಮಲೇಷಿಯಾ
ಉಗ್ರರ ದಾಳಿ:ರೈಸ್ ಭಾರತ ಭೇಟಿ
ಮುಂಬೈ ದಾಳಿ: ಭಾರತಕ್ಕೆ ಪೂರ್ಣ ಬೆಂಬಲ- ಬುಷ್
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಆಳ್ವಾಸ್ ನುಡಿಸಿರಿಗೆ ವೈಭವದ ಚಾಲನೆ
ಐದನೇ ವರ್ಷದ ಆಳ್ವಾಸ್ ನುಡಿಸಿ ಕಾರ್ಯಕ್ರಮವು ಶುಕ್ರವಾರ ಬೆಳಿಗ್ಗೆ ಕನ್ನಡದ ಸಾಂಸ್ಕೃತಿಕ, ಜಾನಪದ ಕಲಾ....
ಸಂಸ್ಕೃತಿ ಅರಗಿಸಿಕೊಳ್ಳಲು ಕನ್ನಡ ಮನಸ್ಸಿನ ಪ್ರಯತ್ನ: ಕಣವಿ
ನುಡಿಸಿಮುಖ್ಯಾಂಶಗಳು
ಮನರಂಜನೆ
ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ
ಮುಂದೆ ಓದಿ|ಮತ್ತಷ್ಟು...