|
| ತನಿಖೆಗೆ ಸಂಪೂರ್ಣ ಸಹಕಾರ;ಮಲೇಷಿಯಾ |
| ಕೌಲಾಲುಂಪುರ್, ಸೋಮವಾರ, 1 ಡಿಸೆಂಬರ್ 2008 ( 16:10 IST ) | |
ಮುಂಬೈ ತಾಜ್ ಮೇಲೆ ದಾಳಿ ನಡೆಸಿದ ಉಗ್ರರು, ಮುಂಬೈನಲ್ಲಿ ಮನೆ ಬಾಡಿಗೆಯನ್ನು ಪಡೆಯಲು ಮಲೇಷಿಯಾದ ಗುರುತಿನ ಪತ್ರಗಳನ್ನು ಬಳಸಿದ್ದಾರೆ ಎನ್ನುವ ಆರೋಪಗಳ ಹಿನ್ನೆಲೆಯಲ್ಲಿ ಭಾರತಕ್ಕೆ ಸೂಕ್ತ ಸಹಕಾರ ನೀಡಲಾಗುವುದು ಎಂದು ಪೊಲೀಸ್ ಮುಖ್ಯಸ್ಥರು ಭರವಸೆ ನೀಡಿದ್ದಾರೆ.
ಉಗ್ರರು ಹೊಂದಿದ ಗುರುತಿನ ಪತ್ರಗಳ ಕುರಿತಂತೆ ಭಾರತ ಇಲ್ಲಿಯವರೆಗೆ ಸಂಪೂರ್ಣ ಮಾಹಿತಿ ನೀಡಿಲ್ಲವೆಂದು ಮಲೇಷಿಯಾದ ಪೊಲೀಸ್ ಮಹಾನಿರ್ದೇಶಕ ಮುಸಾ ಹುಸೇನ್ ಹೇಳಿದ್ದಾರೆ.
ಉಗ್ರನ ಹತ್ತಿರವಿದ್ದ ವಿಳಾಸದ ಬಗ್ಗೆ ಖಂಡಿತವಾಗಿ ಪರಿಶೀಲಿಸಲಾಗುವುದು. ಉಗ್ರನ ಬಳಿಯಿದ್ದ ಮಲೇಷಿಯಾದ ಕ್ರೆಡಿಟ್ ಕಾರ್ಡ್‌ಗಳ ಕುರಿತಂತೆ ಸೂಕ್ತ ತನಿಖೆ ನಡೆಸಲಾಗುವುದು ಎಂದು ಅಶ್ವಾಸನೆ ನೀಡಿದ್ದಾರೆ.
ರಾಷ್ಟ್ರೀಯ ಭದ್ರತಾ ಪಡೆಗಳು ಉಗ್ರರನ್ನು ಹತ್ಯೆಗೈದ ಸ್ಥಳದಲ್ಲಿ ಮಲೇಷಿಯಾದ ಕ್ರೆಡಿಟ್ ಕಾರ್ಡ್‌ಗಳು ಪತ್ತೆಯಾಗಿದ್ದವು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ |
| |
|
|
|
|
|
|
|