|
| ಮುಂಬೈ ದಾಳಿ: ಭಾರತಕ್ಕೆ ಪೂರ್ಣ ಬೆಂಬಲ- ಬುಷ್ |
| ವಾಷಿಂಗ್ಟನ್, ಭಾನುವಾರ, 30 ನವೆಂಬರ್ 2008 ( 12:48 IST ) | |
ಮುಂಬೈ ಉಗ್ರರ ದಾಳಿಯಿಂದ ಚೇತರಿಸಿಕೊಳ್ಳುತ್ತಿರುವ ಭಾರತ ಪರ ತನ್ನ ಸಂಪೂರ್ಣ ಬೆಂಬಲ ಸೂಚಿಸಿರುವ ಅಮೆರಿಕದ ಅಧ್ಯಕ್ಷ ಜಾರ್ಜ್ ಬುಷ್, ಅಲ್ಲಿನ ಜನರ ಸ್ಫೂರ್ತಿ ಹಾಗೂ ಧೈರ್ಯ ಅವರನ್ನು ಈ ಸತ್ವಪರೀಕ್ಷೆಯಲ್ಲಿ ಗೆಲ್ಲುವಂತೆ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಈ ಭಯೋತ್ಪಾದಕ ದಾಳಿಯನ್ನು ಬದಿಗೊತ್ತಿ ಭಾರತದ ಆರ್ಥಿಕ ರಾಜಧಾನಿ ವಾಣಿಜ್ಯ ಹಾಗೂ ಸೌಹಾರ್ದತೆಯ ಕೇಂದ್ರವಾಗಿ ಮುಂದುವರಿಯಲಿದೆ ಎಂದು ಬುಷ್ ಶ್ವೇತಭವನದಲ್ಲಿ ಹೇಳಿದ್ದಾರೆ.
ಈ ದಾಳಿಯ ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷಿಸಿ, ತನ್ನ ಪ್ರಜಾಪ್ರಭುತ್ವ ಜೀವನ ಶೈಲಿಯನ್ನು ಕಾಪಾಡಿಕೊಳ್ಳುವಲ್ಲಿ ಅಮೆರಿಕ ಭಾರತಕ್ಕೆ ಸಂಪೂರ್ಣ ಬೆಂಬಲ ನೀಡಲಿದೆ ಎಂಬುದಾಗಿ ಅವರು ಭರವಸೆ ನೀಡಿದರು.
ಮುಂಬೈಯಲ್ಲಿನ ಉಗ್ರರ ದಾಳಿ ಹೇಯ ಹಾಗೂ ಬರ್ಬರ ಕೃತ್ಯವಾಗಿದೆ. ಆದರೆ ಭಯೋತ್ಪಾದಕರ ಮಾತು ಅಂತಿಮವಲ್ಲ. ಭಾರತದ ಜನರು ಧೈರ್ಯವಂತ, ಸ್ಫೂರ್ತಿವಂತರಾಗಿದ್ದು, ಅವರು ವೈವಿಧ್ಯಮಯ ಹಾಗೂ ಬಹು ಜನಾಂಗೀಯ ಪ್ರಜಾಪ್ರಭುತ್ವವನ್ನು ನಿರ್ಮಿಸಿದ್ದು, ಈ ಸತ್ವಪರೀಕ್ಷೆಯನ್ನು ಮೆಟ್ಟಿನಿಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಈ ಬರ್ಬರ ದಾಳಿಯಿಂದ ಚೇತರಿಸಿಕೊಳ್ಳುತ್ತಿದ್ದಂತೆಯೇ, ಅವರು ಜಗತ್ತಿನ ಅತ್ಯಂತ ಹಳೆಯ ಪ್ರಜಾಪ್ರಭುತ್ವ ರಾಷ್ಟ್ರ ತಮ್ಮ ಬೆಂಬಲಕ್ಕಿದೆ ಎಂಬುದನ್ನು ಪರಿಗಣಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ |
| |
|
|
|
|
|
|
|