ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಗಡಿಯತ್ತ ಪಾಕ್ ಸೇನೆ ಕಳುಹಿಸುವ ಸಾಧ್ಯತೆ: ವರದಿ
ಇಸ್ಲಾಮಾಬಾದ್, ಭಾನುವಾರ, 30 ನವೆಂಬರ್ 2008   ( 11:57 IST )
ಒಂದು ವೇಳೆ ಮುಂಬೈ ಉಗ್ರರ ದಾಳಿ ಹಿನ್ನೆಲೆಯಲ್ಲಿ ಭಾರತ ಜತೆಗಿನ ಸಂಬಂಧ ಹದಗೆಟ್ಟರೆ, ಪಾಕಿಸ್ತಾನ ಕಲಹಪೀಡಿತ ಅಪ್ಘಾನಿಸ್ತಾನ ಜತೆಗಿನ ಗಡಿ ಪ್ರದೇಶದಿಂದ ತನ್ನ ಸುಮಾರು 1,00,000 ಸೇನಾ ಸಿಬ್ಬಂದಿಗಳನ್ನು ಸ್ಥಳಾಂತರಿಸುವ ಸಂಭವವಿದೆ ಎಂಬುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಭಾರತ ಜತೆಗಿನ ಸಂಬಂಧ ಹದಗೆಟ್ಟರೆ ಅಪ್ಘಾನಿಸ್ತಾನ ಗಡಿಯಲ್ಲಿನ ತನ್ನ ಸೇನೆಯನ್ನು ಸ್ಥಳಾಂತರಿಸ ಬೇಕಾಗುವುದಾಗಿ ಪಾಕಿಸ್ತಾನ ನ್ಯಾಟೊ ಮತ್ತು ಅಮೆರಿಕಾ ಕಮಾಂಡ್‌ಗಳಿಗೆ ಸ್ಪಷ್ಟಪಡಿಸಿರುವ ಬಗ್ಗೆ ಪಾಕ್ ಸೇನೆ ಹಾಗೂ ಗುಪ್ತಚರ ಮೂಲಗಳು ಆಯ್ದ ಪತ್ರಕರ್ತರ ಸಮೂಹಕ್ಕೆ ತಿಳಿಸಿದೆ ಎಂದು ಖಾಸಗಿ ವಾಹಿನಿ ಜಿಯೊ ನ್ಯುವ್ಸ್ ವರದಿ ಮಾಡಿದೆ.

ಭಾರತ ಜತೆಗಿನ ತನ್ನ ಗಡಿಯನ್ನು ಕಾಪಾಡುವುದು ಅತ್ಯಂತ ಪ್ರಮುಖವಾಗಿರುವುದರಿಂದ ಅಪ್ಘಾನಿಸ್ತಾನ ಗಡಿ ಸುತ್ತಲಿನ ಉಗ್ರರ ವಿರುದ್ಧದ ಹೋರಾಟದತ್ತ ಹೆಚ್ಚಿನ ಗಮನ ಕೇದ್ರೀಕರಿಸಲು ಪಾಕ್‌ಗೆ ಸಾಧ್ಯವಿಲ್ಲ ಎಂಬುದಾಗಿ ಮೂಲಗಳು ನ್ಯಾಟೊ ಹಾಗೂ ಯುಎಸ್ ಕಮಾಂಡ್‌ಗೆ ಸ್ಪಷ್ಟಪಡಿಸಿದೆ ಎಂದು ಜಿಯೊ ನ್ಯುವ್ಸ್ ಹಿರಿಯ ಪಾಕಿಸ್ತಾನಿ ಪತ್ರಕರ್ತ ಹಮೀದ್ ಮಿರ್ ಉಲ್ಲೇಖವನ್ನು ವರದಿ ಮಾಡಿದೆ.

ಮುಂಬೈ ದಾಳಿಯ ನಂತರ ಭಾರತದ ವಿದೇಶಾಂಗ ಸಚಿವರು ದೂರವಾಣಿ ಮೂಲಕ ಪಾಕಿಸ್ತಾನ ಅಧಿಕಾರಿಗಳ ಜತೆ ಖಾರವಾದ ಶಬ್ದಗಳನ್ನು ಬಳಸಿದ ಕಾರಣ ಐಎಸ್ಐ ಮುಖ್ಯ ಶುಜಾ ಪಾಶಾರನ್ನು ಭಾರತಕ್ಕೆ ಕಳುಹಿಸದಿರುವ ನಿರ್ಧಾರ ಕೈಗೊಳ್ಳಲಾಯಿತು ಎಂಬುದಾಗಿ ಮೂಲಗಳು ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಮುಂಬೈ ದಾಳಿಯ ಹಿಂದೆ ಅಲ್ ಖೈದಾ: ಲಂಡನ್
ಐರೋಪಿಯನ್ನರ ವಾಪಸಾತಿಗೆ ಫ್ರಾನ್ಸ್ ವಿಮಾನ
ಇಬ್ಬರು ಭಯೋತ್ಪಾದಕರು ಬ್ರಿಟನ್ ಪೌರರು: ತನಿಖೆ
ಭಾರತದ ಪಡೆಗಳಿಂದ ಅಪಕ್ವ ಕ್ರಮ: ಇಸ್ರೇಲಿ ತಜ್ಞರು
ಐಎಸ್‌ಐ ಮುಖ್ಯಸ್ಥರ ಭೇಟಿಯಿಲ್ಲ: ಪಾಕಿಸ್ತಾನ ಉಲ್ಟಾ
25 ಭಾರತೀಯ ಸಿಬ್ಬಂದಿಗಳಿದ್ದ ಹಡಗು ಅಪಹರಣ
ಗ್ರಹ ಗತಿ
ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಆಳ್ವಾಸ್ ನುಡಿಸಿರಿಗೆ ವೈಭವದ ಚಾಲನೆ
ಐದನೇ ವರ್ಷದ ಆಳ್ವಾಸ್ ನುಡಿಸಿ ಕಾರ್ಯಕ್ರಮವು ಶುಕ್ರವಾರ ಬೆಳಿಗ್ಗೆ ಕನ್ನಡದ ಸಾಂಸ್ಕೃತಿಕ, ಜಾನಪದ ಕಲಾ....
ಸಂಸ್ಕೃತಿ ಅರಗಿಸಿಕೊಳ್ಳಲು ಕನ್ನಡ ಮನಸ್ಸಿನ ಪ್ರಯತ್ನ: ಕಣವಿ
ನುಡಿಸಿಮುಖ್ಯಾಂಶಗಳು
ಮನರಂಜನೆ
ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ
ಮುಂದೆ ಓದಿ|ಮತ್ತಷ್ಟು...