|
| ಐರೋಪಿಯನ್ನರ ವಾಪಸಾತಿಗೆ ಫ್ರಾನ್ಸ್ ವಿಮಾನ |
| ಪ್ಯಾರಿಸ್, ಶನಿವಾರ, 29 ನವೆಂಬರ್ 2008 ( 12:42 IST ) | |
ಮುಂಬೈನಲ್ಲಿ ಸಂಭವಿಸಿದ ಭಯೋತ್ಪಾದಕ ದಾಳಿಯಲ್ಲಿ ಸಿಕ್ಕಿಬಿದ್ದ 150 ಐರೋಪಿಯನ್ನರ ವಾಪಸಾತಿಗೆ ಶುಕ್ರವಾರ ಫ್ರಾನ್ಸ್ ಶ್ರಮಿಸುತ್ತಿದೆ. ದಾಳಿಯಲ್ಲಿ ಗುರುತಿನ ಪತ್ರಗಳನ್ನು ಕಳೆದುಕೊಂಡವರಿಗೆ ನೆರವು ನೀಡಲು ಕಾನ್ಸುಲರ್ ಸಿಬ್ಬಂದಿ ಮತ್ತು ಮೂವರು ವೈದ್ಯರ ತಂಡವು ಮುಂಬೈಗೆ ವಿಶೇಷ ವಿಮಾನದಲ್ಲಿ ಆಗಮಿಸಿತು.
ವಿಮಾನವು ತನ್ನ ರಾಷ್ಟ್ರೀಯರನ್ನು ವಾಪಸ್ ಕರೆತರಲಿದ್ದು, ಐರೋಪ್ಯ ಸಂಸದರ ತಂಡಕ್ಕೂ ವಿಮಾನದಲ್ಲಿ ಹತ್ತಲು ಸೂಚಿಸಲಾಗಿದೆ. ವಿಮಾನದಲ್ಲಿ 1250 ಜನರಿಗೆ ಆಸನವ್ಯವಸ್ಥೆಯಿದ್ದು, ರೆಡ್ ಕ್ರಾಸ್ ಸಿಬ್ಬಂದಿಯು ಫ್ರಾನ್ಸ್‌ನಲ್ಲಿ ಅದನ್ನು ಬರಮಾಡಿಕೊಳ್ಳಲಿದೆ ಎಂದು ಸಚಿವಾಲಯ ತಿಳಿಸಿದೆ.
ದಾಳಿಯ ಹೃದಯಭಾಗವಾದ ಮೂರು ಹೊಟೆಲ್‌ಗಳಲ್ಲಿ 25 ಫ್ರೆಂಚ್ ಪೌರರು ತಂಗಿದ್ದು, ಅವರ ಬಗ್ಗೆ ಫ್ರಾನ್ಸ್ ಮಾಹಿತಿ ಕಲೆಹಾಕುತ್ತಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಎರಿಕ್ ಚೆವಲಿಯರ್ ತಿಳಿಸಿದರು.
ಒಂದು ಹೊಟೆಲ್‌ನಲ್ಲಿ ಸಿಕ್ಕಿಬಿದ್ದಿದ್ದ 15 ಮಂದಿ ಏರ್ ಫ್ರಾನ್ಸ್ ಸಿಬ್ಬಂದಿ ಮುಕ್ತರಾಗಿದ್ದು, ಅವರಲ್ಲಿ 10 ಜನರು ಸುರಕ್ಷಿತವಾಗಿ ತಲುಪಿದ್ದಾರೆಂದು ಅವರು ನುಡಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ |
| |
|
|
|
|
|
|
|