|
| ಭಾರತದ ಪಡೆಗಳಿಂದ ಅಪಕ್ವ ಕ್ರಮ: ಇಸ್ರೇಲಿ ತಜ್ಞರು |
| ಮುಂಬೈ, ಶನಿವಾರ, 29 ನವೆಂಬರ್ 2008 ( 11:28 IST ) | |
ಮುಂಬೈನಲ್ಲಿ ಭಯೋತ್ಪಾದಕರು ಸ್ವಾಧೀನಪಡಿಸಿಕೊಂಡ ಹೊಟೆಲ್ ಆವರಣಕ್ಕೆ ಮುತ್ತಿಗೆ ಹಾಕುವಲ್ಲಿ ಭಾರತದ ಭದ್ರತಾ ಪಡೆಗಳು ಅಪಕ್ವತೆಯನ್ನು ಪ್ರದರ್ಶಿಸಿವೆ ಎಂದು ಇಸ್ರೇಲಿ ಭದ್ರತಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಒತ್ತೆಯಾಳು ಸಮಸ್ಯೆಯನ್ನು ನಿಭಾಯಿಸಿದ ರೀತಿಯ ಬಗ್ಗೆ ಟೀಕಿಸಿದ ತಜ್ಞರು, ಭದ್ರತಾ ಪಡೆ ಮೊದಲು ಆ ಪ್ರದೇಶವನ್ನು ಮುಕ್ತಗೊಳಿಸಿ, ಭಯೋತ್ಪಾದಕರ ಬಗ್ಗೆ ಗುಪ್ತಚರ ವರದಿಗಳನ್ನು ಸಂಗ್ರಹಿಸಿದ ಬಳಿಕ ಕಾರ್ಯಾಚರಣೆ ಆರಂಭಿಸಬೇಕಿತ್ತು ಎಂದು ಮಾಧ್ಯಮ ವರದಿ ತಿಳಿಸಿದೆ.ಒತ್ತೆಯಾಳು ಪರಿಸ್ಥಿತಿಗಳಲ್ಲಿ, ಪಡೆಗಳು ಮಾಡಬೇಕಾದ ಮೊದಲ ಕೆಲಸವೆಂದರೆ, ಆ ಪ್ರದೇಶದಲ್ಲಿ ಸೇರಿ ಬೇಹುಗಾರಿಕೆ ವರದಿಗಳನ್ನು ಸಂಗ್ರಹಿಸುವುದು ಎಂದು ಇಸ್ರೇಲ್ ಮಾಜಿ ಅಧಿಕಾರಿಯೊಬ್ಬರು ತಿಳಿಸಿದರು.
ಈ ಪ್ರಕರಣದಲ್ಲಿ ಪಡೆಗಳು ಸ್ಥಳಕ್ಕೆ ಧಾವಿಸಿ ಆ ಪ್ರದೇಶವನ್ನು ಮೊದಲು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳದೇ ಹಠಾತ್ತಾಗಿ ಗುಂಡಿನ ದಾಳಿ ನಡೆಸಿದಂತೆ ಕಾಣುತ್ತದೆ ಎಂದು ಅವರು ನುಡಿದರು.ಇಸ್ರೇಲ್ ಭಾರತಕ್ಕೆ ಕಮಾಂಡೊ ಘಟಕ ಕಳಿಸಲು ಯೋಜಿಸಿಲ್ಲ. ಆದರೆ ಯಾವುದೇ ನೆರವು ನೀಡುವ ಪ್ರಸ್ತಾಪ ಮಾಡಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಹೊಸ ಚಿತ್ರ - ಜನುಮನದ ಗೆಳತಿ ಚಿತ್ರ ಹೆಸರಿಗೆ ತಕ್ಕಂತೆ ಇರುವ ಚಿತ್ರ. ಇದರಲ್ಲಿ ನನ್ನ ಪಾತ್ರ ಖಂಡಿತಾ ನಿಮಗೆ ಇಷ್ಟವಾಗುತ್ತದೆ. ಈ ಚಿತ್ರ ನೋಡಿದ ಮೇಲೆ ಪತ್ರಕರ್ತರಾರೂ ನನ್ನನ್ನು ಬಯ್ಯುವುದಿಲ್ಲ ಎಂದು ನಕ್ಕರು ಶ್ರೀನಗರ |
| |
|
|
|
|
|
|
|