|
| ಬ್ರಿಟನ್ ಪಡೆಗಳಿಗೆ ಇರಾಕ್ ತ್ಯಜಿಸಲು ಸೂಚನೆ |
| ಲಂಡನ್, ಸೋಮವಾರ, 13 ಅಕ್ಟೋಬರ್ 2008 ( 13:50 IST ) | |
ಬ್ರಿಟನ್ ಸಮರಪಡೆಗಳು ರಾಷ್ಟ್ರದ ದಕ್ಷಿಣಭಾಗವನ್ನು ತ್ಯಜಿಸಲು ಈಗ ಸಕಾಲ ಎಂದು ಇರಾಕಿನ ಪ್ರಧಾನಮಂತ್ರಿ ನೂರಿ ಅಲ್-ಮಾಲಿಕಿ ಸೋಮವಾರ ತಿಳಿಸಿದ್ದು, ಬ್ರಿಟನ್ ಪಡೆಗಳು ಭದ್ರತೆ ಮತ್ತು ನಿಯಂತ್ರಣ ಕಾಯ್ದುಕೊಳ್ಳಲು ನಮಗಿನ್ನು ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಇರಾಕಿ ಪಡೆಗಳಿಗೆ ತರಬೇತಿ ಮತ್ತು ಕೆಲವು ತಾಂತ್ರಿಕ ವಿಷಯಗಳಿಗಾಗಿ ಅವರು ನಮಗೆ ಬೇಕಾಗಬಹುದು, ಆದರೆ ಈಗ ವ್ಯವಹಾರ ಸಂಬಂಧಕ್ಕೆ ಮಾತ್ರ ನಾವು ಮಹತ್ವ ನೀಡುವುದಾಗಿ ಅವರು ನುಡಿದರು.ಇರಾಕಿನ ಕ್ಷೇತ್ರವು ಆರ್ಥಿಕ ವಿನಿಮಯ ಮತ್ತು ವಿಜ್ಞಾನ ಮತ್ತು ಶಿಕ್ಷಣದಲ್ಲಿ ಸಕಾರಾತ್ಮಕ ಸಹಕಾರದ ಸಲುವಾಗಿ ಬ್ರಿಟನ್ ಕಂಪೆನಿಗಳಿಗೆ ಮತ್ತು ಬ್ರಿಟನ್ ಸ್ನೇಹಕ್ಕಾಗಿ ಮುಕ್ತವಾಗಿದೆ.
ಬ್ರಿಟನ್ ಸದ್ದಾಂ ಹುಸೇನ್ ಅವರನ್ನು ಪದಚ್ಯುತಗೊಳಿಸಿದ ಇರಾಕ್ ಮೇಲಿನ ಆಕ್ರಮಣದಲ್ಲಿ ಅಮೆರಿಕ ಅಧ್ಯಕ್ಷ ಬುಷ್ ಅವರ ಪ್ರಮುಖ ಮಿತ್ರಪಕ್ಷವಾಗಿ ಕಾರ್ಯನಿರ್ವಹಿಸಿತ್ತು.ಬ್ರಿಟನ್ನಿನ ಪಡೆಗಳು ಇರಾಕಿ ಸೇನೆ ಮತ್ತು ನೌಕಾದಳದ ತರಬೇತಿಗೆ ನೆರವಾಗಿತ್ತು. ಬಾಗ್ದಾದ್‌ನಲ್ಲಿ ನೆಲೆಹೊಂದಿದ್ದ ವಿಶೇಷಪಡೆಗಳು ಅಲ್ ಕೈದಾ ಮತ್ತಿತರ ಉಗ್ರಗಾಮಿಗಳ ಮೇಲೆ ದಾಳಿಗೆ ಬಳಸಿಕೊಳ್ಳಲಾಗಿತ್ತು. ಪ್ರಸಕ್ತ ಇರಾಕ್‌ನಲ್ಲಿ 4100 ಪಡೆಗಳಿವೆ ಎಂದು ಬ್ರಿಟನ್ ತಿಳಿಸಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ನವೀನ್ ಕೃಷ್ಣ ಈಗ ಫುಲ್ ಖುಷ್. ಅವರ ಸಂಸ್ಥೆಯಿಂದ ತಯಾರಾದ ಧಿಮಾಕು ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ನವೀನ್ ತಮ್ಮ ಸಂಸ್ಥೆಯಿಂದ ಮತ್ತೊಂದು ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಸ್ನೇಹಿತರೊಂದಿಗೆ ಕುಳಿತು ಚಿತ್ರಕಥೆ ರಚಿಸುತ್ತಿದ್ದಾರೆ |
| |
|
|
|
|
|
|
|