ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
"ಸತ್ತ ಮನುಷ್ಯ ಎದ್ದುಬಂದಾಗ"
ದುಬೈ, ಶನಿವಾರ, 11 ಅಕ್ಟೋಬರ್ 2008   ( 17:52 IST )
ಕಟ್ಟಡ ನಿರ್ಮಾಣ ಕಂಪೆನಿಯಲ್ಲಿ ಕೆಲಸ ಮಾಡುವ 33 ವರ್ಷ ಪ್ರಾಯದ ವಿಜಯ್‌ಕುಮಾರ್ ತನ್ನ ಸಾವಿನ ಸುದ್ದಿಯನ್ನು ಪತ್ರಿಕೆಯಲ್ಲಿ ಓದಿ ಆಶ್ಚರ್ಯಚಕಿತನಾದ. ತಾನು ಸತ್ತಿರುವ ಸುದ್ದಿ ಮೊದಲಿಗೆ ತಿಳಿಸಿದ್ದು ಅವನ ಜತೆವಾಸಿಗಳು. ಅವನ ಸಾವಿಗಾಗಿ ವಿಷಾದ ಸೂಚಿಸಲಾಗಿದೆ ಮತ್ತು ಸುದ್ದಿಪತ್ರಿಕೆಗಳಲ್ಲಿ ಅವನ ಸಾವಿನ ಸುದ್ದಿ ಬಂದಿರುವುದನ್ನು ಕೇಳಿ ಚಕಿತಗೊಂಡ.

"ತನಗೆ ನಗುವುದೋ, ಅಳುವುದೋ ಗೊತ್ತಾಗಲಿಲ್ಲ. ಆದರೆ ನಾನು ಮೊದಲು ಮಾಡಿದ ಕೆಲಸವೇನೆಂದರೆ ಊರಿನಲ್ಲಿರುವ ಮನೆಗೆ ಸುದ್ದಿ ಮುಟ್ಟಿಸಿ ತಾನು ಬದುಕಿದ್ದೇನೆಂದು ಹೇಳಿದ್ದಾಗಿ" ವಿಜಯಕುಮಾರ್ ತಿಳಿಸಿದ್ದಾರೆ. ಕುಮಾರ್ ಅವರು ಅಗೆಯುವ ಯಂತ್ರದ ಲೋಡರ್‌ನೊಳಗೆ ಪ್ರವೇಶಿಸಲು ಯತ್ನಿಸಿದಾಗ ಬೃಹತ್ ಡ್ರಿಲ್ಲಿಂಗ್ ಯಂತ್ರವು ಬಡಿದು ಮನಾಮದ ಟುಬ್ಲಿ ಬಳಿ ಸಾವಪ್ಪಿದ್ದಾರೆಂದು ಸುದ್ದಿಪತ್ರಿಕೆಗಳಲ್ಲಿ ವರದಿಯಾಗಿತ್ತು.

ಆದರೆ ವಾಸ್ತವವಾಗಿ ಸತ್ತಿದ್ದು 31 ವರ್ಷ ವಯಸ್ಸಿನ ಭಾರತೀಯ ಮ್ಯಾಥೀವ್ ಸೆಬಾಸ್ಟಿಯನ್. ಕುಮಾರ್ ರಜೆಯಲ್ಲಿದ್ದರಿಂದ ಅವನ ಕೆಲಸವನ್ನು ಸೆಬಾಸ್ಟಿಯನ್ ವಹಿಸಿಕೊಂಡಿದ್ದರು. ಕುಮಾರ್ ರಜೆ ಸೆ.30ರಿಂದ ಆರಂಭವಾಗಿದ್ದು, ಅವರು ಪಂಜಾಬ್ ಹೋಷಿಯಾರ್‌ಪುರದ ತಮ್ಮ ಮನೆಗೆ ತೆರಳಲು ಸಿದ್ಧತೆ ನಡೆಸಿದ್ದರು. ಆದರೆ ಕಂಪೆನಿಯ ದಾಖಲೆಗಳಲ್ಲಿ ಸೆಬಾಸ್ಟಿಯನ್ ಅವರಿಗೆ ಕುಮಾರ್ ಕೆಲಸ ವಹಿಸಿದ್ದು ನಮ‌ೂದಾಗಿರಲಿಲ್ಲ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಪಾಲಿನ್ ವಿರುದ್ಧ ಅಧಿಕಾರ ದುರ್ಬಳಕೆ ಆರೋಪ
ಆಸ್ಟ್ರಿಯದ ಹೈಡರ್ ಕಾರು ಅಪಘಾತದಲ್ಲಿ ನಿಧನ
ಬಸ್ ಟ್ರಕ್ಕಿಗೆ ಡಿಕ್ಕಿ : 11 ಮಕ್ಕಳು ಸೇರಿದಂತೆ 20 ಸಾವು
ಅಫೀಮು ಕಾರ್ಖಾನೆಗಳ ದಾಳಿಗೆ ನ್ಯಾಟೊಗೆ ಅನುಮತಿ
ಆತ್ಮಾಹುತಿ ಕಾರ್ ಬಾಂಬ್ ಸ್ಫೋಟಕ್ಕೆ 27 ಬಲಿ
ಕಾರ್ ಬಾಂಬ್ ಸ್ಫೋಟಿಸಿ 12 ಜನರ ಸಾವು
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ವಿಧಾನಸಭೆ ವಿಸರ್ಜಿಸಲಿ:ಧರಂ ಸವಾಲು
ಸಂಘ ಪರಿವಾರದ ಅಜಂಡಾದಂತೆ ಕಾರ್ಯ ನಿರ್ವಹಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯ‌ೂರಪ್ಪ ಅವರಿಗೆ....
ಸಮಾಜವಾದಿ-ಕಾಂಗ್ರೆಸ್ ಮೈತ್ರಿ: ಬಂಗಾರಪ್ಪ ಸ್ಪಷ್ಟನೆ
ಕೆಪಿಸಿಸಿ ಪುನರ್ ರಚನೆ: ಅಧ್ಯಕ್ಷರಿಗೆ ಸವಾಲು
ಮನರಂಜನೆ
ಚಿತ್ರ ಸುದ್ದಿ - ನವೀನ್ ಕೃಷ್ಣ ಈಗ ಫುಲ್ ಖುಷ್. ಅವರ ಸಂಸ್ಥೆಯಿಂದ ತಯಾರಾದ ಧಿಮಾಕು ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ನವೀನ್ ತಮ್ಮ ಸಂಸ್ಥೆಯಿಂದ ಮತ್ತೊಂದು ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಸ್ನೇಹಿತರೊಂದಿಗೆ ಕುಳಿತು ಚಿತ್ರಕಥೆ ರಚಿಸುತ್ತಿದ್ದಾರೆ
ಮುಂದೆ ಓದಿ|ಮತ್ತಷ್ಟು...