|
| ಆಸ್ಟ್ರಿಯದ ಹೈಡರ್ ಕಾರು ಅಪಘಾತದಲ್ಲಿ ನಿಧನ |
| ಕ್ಯಾರಿಂಥಿಯ, ಶನಿವಾರ, 11 ಅಕ್ಟೋಬರ್ 2008 ( 14:06 IST ) | |
ಆಸ್ಟ್ರಿಯದ ತೀವ್ರ ಸಂಪ್ರದಾಯವಾದಿ ರಾಜಕಾರಣಿ ಜೋಯ್ ಹೈಡರ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆಂದು ಪೊಲೀಸ್ ವರದಿಗಳು ತಿಳಿಸಿವೆ. ಹೈಡರ್ ಕ್ಯಾರಿಂಥಿಯ ಬಳಿ ಅವರ ರಾಜಕೀಯ ಭದ್ರಕೋಟೆಯಾದ ಕ್ಲಾಗೆನ್‌ಫರ್ಟ್ ಬಳಿ ಮೃತಪಟ್ಟಿದ್ದಾರೆ.
ಅವರು ಒಂಟಿಯಾಗಿ ಕಾರನ್ನು ಚಲಾಯಿಸುತ್ತಿದ್ದಾಗ ಅಪಘಾತವಾಗಿ ತಲೆಗೆ ಮತ್ತು ಎದೆಗೆ ಗಾಯಗಳಾಯಿತೆಂದು ಪೊಲೀಸರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಆಸ್ಟ್ರಿಯ ಫ್ರೀಡಂ ಪಕ್ಷದ 58 ವರ್ಷದ ಮಾಜಿ ನಾಯಕರಾಗಿದ್ದ ಅವರು, ವಲಸೆ ಮತ್ತು ಯುರೋಪಿಯನ್ ನೀತಿಗಳಿಗೆ ವಿರೋಧಿ ಎಂದು ಹೆಸರಾಗಿದ್ದರು.
ಅಪಘಾತವನ್ನು ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ತನಿಖೆದಾರರು ಕ್ಲಾಗೆನ್‌ಫರ್ಟ್‌ನಲ್ಲಿ ತಿಳಿಸಿದ್ದಾರೆ. ಹೈಡರ್ ತಮ್ಮ ತಾಯಿಯ 90 ನೇ ವರ್ಷದ ಹುಟ್ಟುಹಬ್ಬ ಆಚರಣೆಯಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆಯೆಂದು ಹೇಳಲಾಗಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ನವೀನ್ ಕೃಷ್ಣ ಈಗ ಫುಲ್ ಖುಷ್. ಅವರ ಸಂಸ್ಥೆಯಿಂದ ತಯಾರಾದ ಧಿಮಾಕು ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ನವೀನ್ ತಮ್ಮ ಸಂಸ್ಥೆಯಿಂದ ಮತ್ತೊಂದು ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಸ್ನೇಹಿತರೊಂದಿಗೆ ಕುಳಿತು ಚಿತ್ರಕಥೆ ರಚಿಸುತ್ತಿದ್ದಾರೆ |
| |
|
|
|
|
|
|
|