|
| ಬಸ್ ಟ್ರಕ್ಕಿಗೆ ಡಿಕ್ಕಿ : 11 ಮಕ್ಕಳು ಸೇರಿದಂತೆ 20 ಸಾವು |
| ಇಸ್ಲಾಮಾಬಾದ್, ಶನಿವಾರ, 11 ಅಕ್ಟೋಬರ್ 2008 ( 13:21 IST ) | |
ಪಾಕಿಸ್ತಾನದ ಪೂರ್ವ ಪಂಜಾಬ್ ಪ್ರಾಂತ್ಯದಲ್ಲಿ ಬಸ್ಸೊಂದು ಟ್ರಕ್ಕಿಗೆ ಡಿಕ್ಕಿ ಹೊಡೆದು 11 ಮಕ್ಕಳು ಸೇರಿದಂತೆ ಕನಿಷ್ಠ 20 ಜನರು ಶುಕ್ರವಾರ ಸತ್ತಿದ್ದಾರೆ. ಮುಂಜಾನೆ ಸಂಭವಿಸಿದ ಈ ದುರಂತದಲ್ಲಿ ಗಾಯಗೊಂಡವರಲ್ಲಿ ಅನೇಕ ಮಂದಿ ಮಕ್ಕಳೂ ಸೇರಿದ್ದಾರೆ.
ಲೋಧ್ರಾನ್ ಬಳಿ ಈ ಅಪಘಾತ ಸಂಭವಿಸಿದೆ.ಬಸ್ ಅತ್ಯಂತ ವೇಗವಾಗಿ ತೆರಳುತ್ತಿದ್ದಾಗ ಚಾಲಕ ಬಸ್ಸಿನ ಮೇಲೆ ನಿಯಂತ್ರಣ ಕಳೆದುಕೊಂಡ ಎಂದು ಲೋಧ್ರಾನ್ ಮುಖ್ಯ ಆಸ್ಪತ್ರೆಯಲ್ಲಿ ಗಾಯಗೊಂಡವರು ಕೆಲವರು ವರದಿಗಾರರಿಗೆ ತಿಳಿಸಿದರು.ಶಾಲೆಗೆ ತೆರಳುತ್ತಿದ್ದ ಮಕ್ಕಳು ಸೇರಿದಂತೆ ಸುಮಾರು 100 ಜನರು ಬಸ್ಸಿನಲ್ಲಿದ್ದು, ಬಸ್ ಸಂಪೂರ್ಣ ನಜ್ಜುಗುಜ್ಜಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಗಾಯಗೊಂಡವರಲ್ಲಿ ಅನೇಕ ಮಂದಿ ಗಂಭೀರ ಸ್ಥಿತಿಯಲ್ಲಿದ್ದು ಸತ್ತವರ ಸಂಖ್ಯೆ ಇನ್ನೂ ಏರಬಹುದೆಂದು ನಿರೀಕ್ಷಿಸಲಾಗಿದೆ. ಪಾಕಿಸ್ತಾನದಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ, ವೇಗದ ಚಾಲನೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಳಪೆ ರಸ್ತೆಗಳಿಂದ ಬಹುತೇಕ ರಸ್ತೆ ಅಪಘಾತಗಳು ಸಂಭವಿಸುತ್ತಿವೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ನವೀನ್ ಕೃಷ್ಣ ಈಗ ಫುಲ್ ಖುಷ್. ಅವರ ಸಂಸ್ಥೆಯಿಂದ ತಯಾರಾದ ಧಿಮಾಕು ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ನವೀನ್ ತಮ್ಮ ಸಂಸ್ಥೆಯಿಂದ ಮತ್ತೊಂದು ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಸ್ನೇಹಿತರೊಂದಿಗೆ ಕುಳಿತು ಚಿತ್ರಕಥೆ ರಚಿಸುತ್ತಿದ್ದಾರೆ |
| |
|
|
|
|
|
|
|