ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಅಫೀಮು ಕಾರ್ಖಾನೆಗಳ ದಾಳಿಗೆ ನ್ಯಾಟೊಗೆ ಅನುಮತಿ
ಕಾಬೂಲ್, ಶನಿವಾರ, 11 ಅಕ್ಟೋಬರ್ 2008   ( 12:57 IST )
ಆಫ್ಘಾನಿಸ್ತಾನದಲ್ಲಿ ಅಫೀಮು ಕಾರ್ಖಾನೆಗಳ ಮೇಲೆ ದಾಳಿ ನಡೆಸಲು ನ್ಯಾಟೊ ತನ್ನ ಪಡೆಗಳಿಗೆ ಮೊದಲ ಬಾರಿಗೆ ಅನುಮತಿ ನೀಡಿದೆ. ತಾಲಿಬಾನಿಗಳಿಗೆ ಆರ್ಥಿಕ ಸಹಾಯ ನೀಡುವ ಸಲುವಾಗಿ ಮಾದಕದ್ರವ್ಯ ಬಳಸುವ ಸೌಲಭ್ಯಗಳ ಮೇಲೆ ಪಡೆಗಳು ಆಫ್ಘನ್ ಪಡೆಗಳ ಜತೆ ಕಾರ್ಯಾಚರಣೆಗೆ ಇಳಿಯಲಿವೆ ಎಂದು ಮೈತ್ರಿಕೂಟದ ವಕ್ತಾರ ಜೇಮ್ಸ್ ಅಪ್ಪಥುರೈ ತಿಳಿಸಿದರು.

ಮಾದಕವಸ್ತು ಕಾರ್ಖಾನೆಗಳ ವಿರುದ್ಧ ಹೋರಾಟಕ್ಕೆ ಇದುವರೆಗೆ ಆಫ್ಘನ್ ಪಡೆಗಳು ಮುನ್ನಡೆ ವಹಿಸಿದ್ದವು. ಆದರೆ ಅಮೆರಿಕ ಅಫೀಮು ವ್ಯಾಪಾರದ ವಿರುದ್ಧ ಆಕ್ರಮಣಕಾರಿ ತಂತ್ರಗಳನ್ನು ಬಳಸಲು ಬಯಸಿದೆ. ಬುಡಾಫೆಸ್ಟ್‌ನಲ್ಲಿ ನಡೆದ ಸಭೆಯಲ್ಲಿ ನ್ಯಾಟೊ ರಕ್ಷಣಾ ಸಚಿವರು ಈ ಕುರಿತು ಒಪ್ಪಂದ ಮಾಡಿಕೊಂಡಿದ್ದಾರೆ.

ಮಾದಕವಸ್ತು ನಿಗ್ರಹಕ್ಕೆ ಸಂಬಂಧಿಸಿದಂತೆ ತಾಲಿಬಾನಿಗಳಿಗೆ ಬೆಂಬಲ ನೀಡುವ ಮಾದಕವಸ್ತು ಕೇಂದ್ರಗಳ ವಿರುದ್ಧ ಆಫ್ಘನ್ನರ ಜತೆ ನ್ಯಾಟೊದ ಅಂತಾರಾಷ್ಟ್ರೀಯ ಭದ್ರತೆ ಮತ್ತು ಸಹಾಯಕ ಪಡೆ(ಇಸಾಫ್) ಕಾರ್ಯನಿರ್ವಹಿಸುತ್ತದೆಂದು ನ್ಯಾಟೊ ವಕ್ತಾರ ಜೇಮ್ಸ್ ಅಪ್ಪಥುರೈ ಹೇಳಿದರು.

ಇಸಾಫ್ ಮತ್ತು ಅಮೆರಿಕ ನೇತೃತ್ವದ ಪಡೆಗಳು ಇದುವರೆಗೆ ಅಫೀಮು ಕಾರ್ಖಾನೆಗಳು ಮತ್ತು ವಿತರಣೆ ಜಾಲಗಳ ಮೇಲೆ ದಾಳಿ ಮಾಡುವ ಬದಲಿಗೆ ಪಾಪಿ ಗಿಡಗಳ ನಿರ್ಮ‌ೂಲನೆಗೆ ಗಮನ ಕೇಂದ್ರೀಕರಿಸಿದ್ದವು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಆತ್ಮಾಹುತಿ ಕಾರ್ ಬಾಂಬ್ ಸ್ಫೋಟಕ್ಕೆ 27 ಬಲಿ
ಕಾರ್ ಬಾಂಬ್ ಸ್ಫೋಟಿಸಿ 12 ಜನರ ಸಾವು
ಶೋಭರಾಜ್ ವಿವಾಹ ಕೇವಲ ವದಂತಿ
ಡಯಾನ, ಸಾರಾ ಪಾಲಿನ್ ಸೋದರಸಂಬಂಧಿಗಳು
ಫಿನ್‌ಲ್ಯಾಂಡ್ ಮಾಜಿ ಅಧ್ಯಕ್ಷ ಅಹ್ತಿಸಾರಿಗೆ ನೊಬೆಲ್ ಪ್ರಶಸ್ತಿ
ತಾಲಿಬಾನ್ ನೆಲೆಗಳ ಮೇಲೆ ದಾಳಿಗೆ 21 ಉಗ್ರರು ಹತ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ವಿಧಾನಸಭೆ ವಿಸರ್ಜಿಸಲಿ:ಧರಂ ಸವಾಲು
ಸಂಘ ಪರಿವಾರದ ಅಜಂಡಾದಂತೆ ಕಾರ್ಯ ನಿರ್ವಹಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯ‌ೂರಪ್ಪ ಅವರಿಗೆ....
ಸಮಾಜವಾದಿ-ಕಾಂಗ್ರೆಸ್ ಮೈತ್ರಿ: ಬಂಗಾರಪ್ಪ ಸ್ಪಷ್ಟನೆ
ಕೆಪಿಸಿಸಿ ಪುನರ್ ರಚನೆ: ಅಧ್ಯಕ್ಷರಿಗೆ ಸವಾಲು
ಮನರಂಜನೆ
ಚಿತ್ರ ಸುದ್ದಿ - ನವೀನ್ ಕೃಷ್ಣ ಈಗ ಫುಲ್ ಖುಷ್. ಅವರ ಸಂಸ್ಥೆಯಿಂದ ತಯಾರಾದ ಧಿಮಾಕು ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ನವೀನ್ ತಮ್ಮ ಸಂಸ್ಥೆಯಿಂದ ಮತ್ತೊಂದು ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಸ್ನೇಹಿತರೊಂದಿಗೆ ಕುಳಿತು ಚಿತ್ರಕಥೆ ರಚಿಸುತ್ತಿದ್ದಾರೆ
ಮುಂದೆ ಓದಿ|ಮತ್ತಷ್ಟು...