ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಆತ್ಮಾಹುತಿ ಕಾರ್ ಬಾಂಬ್ ಸ್ಫೋಟಕ್ಕೆ 27 ಬಲಿ
ಇಸ್ಲಾಮಾಬಾದ್, ಶನಿವಾರ, 11 ಅಕ್ಟೋಬರ್ 2008   ( 12:37 IST )
ಆಫ್ಘಾನಿಸ್ತಾನ ಗಡಿಯ ಬಳಿಯ ಪಾಕಿಸ್ತಾನ ಪ್ರಕ್ಷುಬ್ಧ ಪ್ರದೇಶವಾದ ಒರ್ಕಜಾಯಿ ಬುಡಕಟ್ಟು ಹಿರಿಯರ ಸಭೆಯಲ್ಲಿ ಆತ್ಮಾಹುತಿ ಕಾರ್ ಬಾಂಬ್ ಸ್ಫೋಟಿಸಿ 27 ಜನರು ಸತ್ತಿದ್ದಾರೆ. ಈ ಘಟನೆಯಲ್ಲಿ 81 ಜನರು ಗಾಯಗೊಂಡಿದ್ದು, ಅವರಲ್ಲಿ ಅನೇಕ ಮಂದಿಗೆ ಗಂಭೀರ ಗಾಯಗಳಾಗಿವೆ.ತಾಲಿಬಾನಿಗಳನ್ನು ಆ ಪ್ರದೇಶದಿಂದ ಹೊರದೂಡಲು ಸೈನ್ಯವೊಂದನ್ನು ರಚಿಸುವ ಕುರಿತಂತೆ ಹೊರಾಂಗಣ ಸಭೆಯಲ್ಲಿ 600 ಜನರು ಕಲೆತಿದ್ದಾಗ ಬಾಂಬರ್ ಸ್ಫೋಟಿಸಿದ.

ಇತ್ತೀಚಿನ ವಾರಗಳಲ್ಲಿ ತಾಲಿಬಾನ್ ವಿರುದ್ಧ ಹೋರಾಟಕ್ಕೆ ಬುಡಕಟ್ಟು ಜನರು ವಾಯವ್ಯ ಪ್ರದೇಶಗಳಲ್ಲಿ ಶಸ್ತ್ರಾಸ್ತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಪೇಶಾವರದ ವಾಯವ್ಯ ನಗರ ಒರ್ಕಜೈ ಇತ್ತೀಚಿನ ತಿಂಗಳುಗಳಲ್ಲಿ ಶಾಂತವಾಗಿತ್ತು. ಆದರೆ ವಾಯವ್ಯದ ಇತರೆ ಪ್ರದೇಶಗಳಾದ ಬಾಜೌರ್ ಮತ್ತು ಸ್ವಾಟ್‌ನಲ್ಲಿ ಪಾಕಿಸ್ತಾನಿ ಪಡೆಗಳು ಸುಸ್ಥಿರ ಮಿಲಿಟರಿ ಕಾರ್ಯಾಚರಣೆಗಳನ್ನು ನಡೆಸಿದೆ.

ಆತ್ಮಾಹುತಿ ಬಾಂಬರ್ ತನ್ನ ಕಾರನ್ನು ನೆರೆದಿದ್ದ ಜನರ ಬಳಿ ಹರಿಸಿ ಸ್ಫೋಟಿಸಿಕೊಂಡ ಎಂದು ಶುಕ್ರವಾರದ ಸಭೆಯಲ್ಲಿ ಪಾಲ್ಗೊಂಡಿದ್ದ ಜನರು ಹೇಳಿದ್ದಾರೆ. ಉಗ್ರಗಾಮಿಗಳ ವಿರುದ್ಧ ಕ್ರಮಕ್ಕೆ ನಾವು ಯೋಜನೆ ರೂಪಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಸಭೆಯ ಮಧ್ಯೆ ವ್ಯಕ್ತಿಯೊಬ್ಬ ಕಾರನ್ನು ಬಿಟ್ಟು ಬಳಿಕ ಅದನ್ನು ಸ್ಫೋಟಿಸಿದ ಎಂದು ಬುಡಕಟ್ಟು ಹಿರಿಯ ವ್ಯಕ್ತಿಯೊಬ್ಬರು ತಿಳಿಸಿದರು.

ನಾವು ತಾಲಿಬಾನಿಗಳನ್ನು ಈ ಪ್ರದೇಶದಿಂದ ಓಡಿಸುವುದಕ್ಕಾಗಿ ಲಷ್ಕರ್(ಬುಡಕಟ್ಟು ಸೇನೆ)ಯ ಸಿದ್ಧತೆಯಲ್ಲಿ ನಿರತರಾಗಿದ್ದಾಗ ಈ ದಾಳಿ ನಡೆಯಿತು ಎಂದು ಮಂಡಳಿಯ ಸದಸ್ಯರೊಬ್ಬರು ಹೇಳಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಕಾರ್ ಬಾಂಬ್ ಸ್ಫೋಟಿಸಿ 12 ಜನರ ಸಾವು
ಶೋಭರಾಜ್ ವಿವಾಹ ಕೇವಲ ವದಂತಿ
ಡಯಾನ, ಸಾರಾ ಪಾಲಿನ್ ಸೋದರಸಂಬಂಧಿಗಳು
ಫಿನ್‌ಲ್ಯಾಂಡ್ ಮಾಜಿ ಅಧ್ಯಕ್ಷ ಅಹ್ತಿಸಾರಿಗೆ ನೊಬೆಲ್ ಪ್ರಶಸ್ತಿ
ತಾಲಿಬಾನ್ ನೆಲೆಗಳ ಮೇಲೆ ದಾಳಿಗೆ 21 ಉಗ್ರರು ಹತ
ಭಯೋತ್ಪಾದನೆ ಕ್ಯಾನ್ಸರ್ ನಿರ್ಮ‌ೂಲನೆಗೆ ಜರ್ದಾರಿ ಪ್ರತಿಜ್ಞೆ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ವಿಧಾನಸಭೆ ವಿಸರ್ಜಿಸಲಿ:ಧರಂ ಸವಾಲು
ಸಂಘ ಪರಿವಾರದ ಅಜಂಡಾದಂತೆ ಕಾರ್ಯ ನಿರ್ವಹಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯ‌ೂರಪ್ಪ ಅವರಿಗೆ....
ಸಮಾಜವಾದಿ-ಕಾಂಗ್ರೆಸ್ ಮೈತ್ರಿ: ಬಂಗಾರಪ್ಪ ಸ್ಪಷ್ಟನೆ
ಕೆಪಿಸಿಸಿ ಪುನರ್ ರಚನೆ: ಅಧ್ಯಕ್ಷರಿಗೆ ಸವಾಲು
ಮನರಂಜನೆ
ಚಿತ್ರ ಸುದ್ದಿ - ನವೀನ್ ಕೃಷ್ಣ ಈಗ ಫುಲ್ ಖುಷ್. ಅವರ ಸಂಸ್ಥೆಯಿಂದ ತಯಾರಾದ ಧಿಮಾಕು ಚಿತ್ರಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ನವೀನ್ ತಮ್ಮ ಸಂಸ್ಥೆಯಿಂದ ಮತ್ತೊಂದು ಚಿತ್ರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಸ್ನೇಹಿತರೊಂದಿಗೆ ಕುಳಿತು ಚಿತ್ರಕಥೆ ರಚಿಸುತ್ತಿದ್ದಾರೆ
ಮುಂದೆ ಓದಿ|ಮತ್ತಷ್ಟು...