|
| ಭಯೋತ್ಪಾದನೆ ಕ್ಯಾನ್ಸರ್ ನಿರ್ಮೂಲನೆಗೆ ಜರ್ದಾರಿ ಪ್ರತಿಜ್ಞೆ |
| ಇಸ್ಲಾಮಾಬಾದ್, 10 ಅಕ್ಟೋಬರ್ 2008 ( 12:42 IST ) | |
ಪಾಕಿಸ್ತಾನದ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ಗುರುವಾರ ಸಮಾಜದಿಂದ ಭಯೋತ್ಪಾದನೆಯ ಕ್ಯಾನ್ಸರ್ ಮೂಲೋತ್ಪಾಟನೆ ಮಾಡುವುದಾಗಿ ಪ್ರತಿಜ್ಞೆ ಮಾಡಿದರು. ಪಾಕಿಸ್ತಾನದ ರಾಜಧಾನಿ ಮತ್ತು ಪ್ರಕ್ಷುಬ್ಧ ವಾಯವ್ಯ ಮುಂಚೂಣಿ ಪ್ರಾಂತ್ಯದಲ್ಲಿ ಉಗ್ರಗಾಮಿಗಳು ದಾಳಿ ನಡೆಸಿ 16 ಜನರನ್ನು ಹತ್ಯೆ ಮಾಡಿದ ಕೆಲವೇ ಗಂಟೆಗಳಲ್ಲಿ ಜರ್ದಾರಿ ಪ್ರತಿಜ್ಞೆ ಹೊರಬಿದ್ದಿದೆ. ನಾವು ಭಯೋತ್ಪಾದಕರಿಗೆ ಭಯಪಡುವುದಿಲ್ಲ.
ಸಮಾಜದಿಂದ ಈ ಕ್ಯಾನ್ಸರ್ ನಿರ್ಮೂಲನೆಗೆ ಸರ್ಕಾರ, ಜನತೆ ಮತ್ತು ತಾವೆಲ್ಲರೂ ದೃಢಸಂಕಲ್ಪ ಮಾಡಿದ್ದೇವೆ ಎಂದು ಬೇನಜೀರ್ ಆದಾಯ ಬೆಂಬಲ ಕಾರ್ಯಕ್ರಮದ ಫಲಾನುಭವಿಗಳಿಗೆ ಚೆಕ್ ವಿತರಣೆ ಮಾಡುವ ಸಮಾರಂಭದಲ್ಲಿ ಮಾತನಾಡುತ್ತಾ ಅವರು ಹೇಳಿದರು.
ರಾಷ್ಟ್ರಗಳು ಆಗಾಗ್ಗೆ ಬಿಕ್ಕಟ್ಟುಗಳನ್ನು ಎದುರಿಸುತ್ತವೆ. ಆದರೆ ಸದೃಢ ರಾಷ್ಟ್ರಗಳು ಇವನ್ನು ದಿಟ್ಟತನದಿಂದ ಮತ್ತು ಧೈರ್ಯದಿಂದ ಎದುರಿಸುತ್ತವೆ. ಈ ಸವಾಲುಗಳನ್ನು ಎದುರಿಸಲು ಪ್ರಸಕ್ತ ಸರ್ಕಾರಕ್ಕೆ ಪೂರ್ಣ ಸಾಮರ್ಥ್ಯವಿದೆಯೆಂದು ಜನತೆ ನಂಬಬೇಕು ಎಂದು ಅವರು ನುಡಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ವೃತ್ತಿ ವಿಷಯಗಳು ಮತ್ತು ಹೊಸ ಅವಕಾಶಗಳಿಗೆ ನಿಮ್ಮ ಮುಂದೆ ಸರಿಯಾದ ಹಾದಿ ಇದೆ. ವಾಚಾಳಿಯು ಹೇಳುವ ಮಾತನ್ನು ನಂಬಬೇಡಿ. ನಿಮ್ಮ ಕಡೆಗಿರುವ ಮೀನ ರಾಶಿ ಸಂಬಂಧದಲ್ಲಿ ನಿಮ್ಮ ಪ್ರಯತ್ನಕ್ಕೆ ಬೆಂಬಲ ಸಿಗುತ್ತದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಕೊನೆಗೂ ಮೋಹನ್ ಆಸೆ ಈಡೇರಿದೆ. ನಟರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡರು ಅವರಿಗೆ ಕಥೆ, ಸಂಭಾಷಣೆ ಬರೆಯುವುದರಲ್ಲಿ ಆಸಕ್ತಿ ಇತ್ತು. ಅದಕ್ಕಾಗಿ ಕೆಲವು ಚಿತ್ರಗಳಿಗೆ ಸಂಭಾಷಣೆ ಕೂಡಾ ಬರೆದಿದ್ದರು. ಆದರೆ ಅವೆಲ್ಲದರ ಜೊತೆಗೆ ಯಾವುದಾದರೊಂದು ಚಿತ್ರ ನಿರ್ದೇಶನ |
| |
|
|
|
|
|
|
|