|
| ನಿಹಿತಾ ಬಿಸ್ವಾಸ್ ಜತೆ ಶೋಭರಾಜ್ ವಿವಾಹಬಂಧ |
| ಕಠ್ಮಂಡು, ಶುಕ್ರವಾರ, 10 ಅಕ್ಟೋಬರ್ 2008 ( 12:34 IST ) | |
ನೇಪಾಳದಲ್ಲಿ ಬುಧವಾರ ಹಿಂದೂಗಳ ದೊಡ್ಡ ಉತ್ಸವ ದಾಶೈನ್ ಆಚರಣೆ ಪರಾಕಾಷ್ಠೆಯಲ್ಲಿ ಮುಳುಗಿರುವ ನಡುವೆ, ಕುಖ್ಯಾತ ಕ್ರಿಮಿನಲ್ ಚಾರ್ಲ್ಸ್ ಶೋಭರಾಜ್ 20 ವರ್ಷ ವಯಸ್ಸಿನ ನೇಪಾಳದ ಪ್ರಿಯತಮೆ ನಿಹಿತಾ ಬಿಸ್ವಾಸ್‌ಗೆ ತಾಳಿಕಟ್ಟುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿರಿಸಿ ಸಂಭ್ರಮಿಸಿದರು.ಇದೊಂದು ಸರಳ ಮತ್ತು ಸಾಂಪ್ರದಾಯಿಕ ನೇಪಾಳಿ ವಿವಾಹವಾಗಿತ್ತು ಎಂದು ತಮ್ಮ ತಾಯಿ ಶಕುಂತಲಾ ತಾಪಾ ಜತೆ ಕಠ್ಮಂಡು ಕೇಂದ್ರೀಯ ಕಾರಾಗೃಹದಲ್ಲಿ ಹಾಜರಿದ್ದ ನಿಹಿತಾ ಹಿರಿಯ ಸೋದರ ವಿಜಯ್ ತಿಳಿಸಿದರು.
ಶೋಭರಾಜ್ ಅವರ ಫ್ರೆಂಚ್ ವಕೀಲರಿಗೆ ದುಬಾಷಿಯಾಗಿ ಸೇವೆ ಸಲ್ಲಿಸಲು ಹೈಸ್ಕೂಲು ವಿದ್ಯಾರ್ಥಿಯಾಗಿದ್ದ ನಿಹಿತಾ ಜೈಲಿಗೆ ಭೇಟಿ ಕೊಟ್ಟಿದ್ದಾಗ ಅವರಿಬ್ಬರಲ್ಲಿ ಪ್ರೇಮಾಂಕುರವಾಗಿತ್ತು. ಇದೊಂದು ಪ್ರಥಮ ನೋಟದ ಪ್ರೇಮಾಂಕುರ ಎಂದು ಶೋಭರಾಜ್ ವರ್ಣಿಸಿದ್ದರು. ಇದಕ್ಕೆ ಮುಂಚೆ ಶೋಭರಾಜ್ ಬಿಡುಗಡೆಯ ಬಳಿಕವೇ ಅವರಿಬ್ಬರು ಮದುವೆಯಾಗಲು ತೀರ್ಮಾನಿಸಿದ್ದರು. ಆದರೆ ಶೋಭರಾಜ್ ವಿಚಾರಣೆಗೆ ಸ್ವಲ್ಪ ಮುಂಚೆ ಅವರು ಮನಸ್ಸು ಬದಲಾಯಿಸಿದರು.
ಆದಾಗ್ಯೂ ಇತರೆ ವಿಧಿವಿಧಾನಗಳನ್ನು ಅವರು ಪೂರೈಸಬೇಕು ಎಂದು ವಿಜಯ್ ಹೇಳಿದರು.ಅರ್ಚಕನ ಅನುಪಸ್ಥಿತಿಯಲ್ಲಿ ಮದುವೆಯು ನೇಪಾಳದಲ್ಲಿ ಮಾನ್ಯತೆ ಪಡೆದಿಲ್ಲ. ಫ್ರೆಂಚ್ ಪೌರರಾಗಿರುವ ಶೋಭರಾಜ್ ಪ್ಯಾರಿಸ್‌ನಲ್ಲಿ ಪುನಃ ಮದುವೆಯಾಗಬೇಕಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ವೃತ್ತಿ ವಿಷಯಗಳು ಮತ್ತು ಹೊಸ ಅವಕಾಶಗಳಿಗೆ ನಿಮ್ಮ ಮುಂದೆ ಸರಿಯಾದ ಹಾದಿ ಇದೆ. ವಾಚಾಳಿಯು ಹೇಳುವ ಮಾತನ್ನು ನಂಬಬೇಡಿ. ನಿಮ್ಮ ಕಡೆಗಿರುವ ಮೀನ ರಾಶಿ ಸಂಬಂಧದಲ್ಲಿ ನಿಮ್ಮ ಪ್ರಯತ್ನಕ್ಕೆ ಬೆಂಬಲ ಸಿಗುತ್ತದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಕೊನೆಗೂ ಮೋಹನ್ ಆಸೆ ಈಡೇರಿದೆ. ನಟರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡರು ಅವರಿಗೆ ಕಥೆ, ಸಂಭಾಷಣೆ ಬರೆಯುವುದರಲ್ಲಿ ಆಸಕ್ತಿ ಇತ್ತು. ಅದಕ್ಕಾಗಿ ಕೆಲವು ಚಿತ್ರಗಳಿಗೆ ಸಂಭಾಷಣೆ ಕೂಡಾ ಬರೆದಿದ್ದರು. ಆದರೆ ಅವೆಲ್ಲದರ ಜೊತೆಗೆ ಯಾವುದಾದರೊಂದು ಚಿತ್ರ ನಿರ್ದೇಶನ |
| |
|
|
|
|
|
|
|