|
| ಪಾಕಿಸ್ತಾನ ಘರ್ಷಣೆಗಳಲ್ಲಿ 36 ಉಗ್ರರು, 6 ಯೋಧರ ಸಾವು |
| ಇಸ್ಲಾಮಾಬಾದ್, ಗುರುವಾರ, 11 ಸೆಪ್ಟೆಂಬರ್ 2008 ( 11:38 IST ) | |
ವಾಯವ್ಯ ಪಾಕಿಸ್ತಾನದಲ್ಲಿ ಸಂಭವಿಸಿದ ಪ್ರತ್ಯೇಕ ಎರಡು ಘರ್ಷಣೆಗಳಲ್ಲಿ ಕನಿಷ್ಠ 36 ಉಗ್ರಗಾಮಿಗಳು ಮತ್ತು 6 ಯೋಧರು ಸತ್ತಿದ್ದಾರೆಂದು ಸೇನೆಯ ವಕ್ತಾರ ತಿಳಿಸಿದರು. ರಾಷ್ಟ್ರದ ಕಾನೂನುರಹಿತ ಬುಡಕಟ್ಟು ಪ್ರದೇಶ ಬಜೌರ್ ಜಿಲ್ಲೆಯ ರಷ್ಕಾಯ್ ಪ್ರದೇಶದಲ್ಲಿ ಸೇನೆ ಮತ್ತು ತಾಲಿಬಾನ್ ಉಗ್ರರ ನಡುವೆ ಮೊದಲ ಕದನ ನಡೆದಿದೆ.
ಹೆಲಿಕಾಪ್ಟರ್ ಗನ್‌ಶಿಪ್, ಟ್ಯಾಂಕ್‌ಗಳು ಮತ್ತು ಫಿರಂಗಿಗಳು ತಾಲಿಬಾನ್ ಕಮಾಂಡ್ ಮತ್ತು ನಿಯಂತ್ರಣ ವ್ಯವಸ್ಥೆಯನ್ನು ಹತೋಟಿಗೆ ತೆಗೆದುಕೊಳ್ಳಲು ಪ್ರಮುಖ ಕಾರ್ಯಾಚರಣೆ ನಡೆಸಿತು. ನಾವು ಬಂಡುಕೋರರ ಪ್ರದೇಶವನ್ನು ಮುಕ್ತಗೊಳಿಸಿದ್ದು, ಅದರ ಮೇಲೆ ಸಂಪೂರ್ಣ ನಿಯಂತ್ರಣವಿದೆ ಎಂದು ಸೇನೆವಕ್ತಾರ ಮೇಜರ್ ಮುರಾದ್ ಖಾನ್ ಡಿಪಿಎಗೆ ತಿಳಿಸಿದರು.
ಕನಿಷ್ಠ 25 ಉಗ್ರಗಾಮಿಗಳು ಸತ್ತಿದ್ದು, ಅನೇಕ ಮಂದಿ ಗಾಯಗೊಂಡಿದ್ದಾರೆ ಮತ್ತು 25ಕ್ಕೂ ಹೆಚ್ಚು ಮಂದಿ ಸೆರೆಸಿಕ್ಕಿದ್ದಾರೆ ಎಂದು ಅವರು ಹೇಳಿದರು. ಕಾರ್ಯಾಚರಣೆಯಲ್ಲಿ ಮದ್ದುಗುಂಡುಗಳು ಮತ್ತು ಸುಧಾರಿತ ಸ್ಫೋಟಕ ಉಪಕರಣಗಳ ಭಾರೀ ಸಂಗ್ರಹವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ನುಡಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ ವರ್ಗದ ಜನರು ಇಂದು ದಿಢೀರ್ ಲಾಭ ಗಳಿಸುವ ಸಾಧ್ಯತೆ ಇದೆ. ನೀವಿಂದು ಮಾನಸಿಕವಾಗಿ ನಿರಾಳರಾಗಿರುತ್ತೀರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಚಿತ್ರರಂಗ ಪ್ರವೇಶಿಸಿದ ಮೇಲೆ ತಾನೇ ಚಿತ್ರರಂಗಕ್ಕೆ ನಾಯಕಿ ಅನ್ನುವವರೇ ಜಾಸ್ತಿ. ಇದೀಗ ಅಂತದ್ದೊಂದು ಸುದ್ದಿ ಸ್ಯಾಂಡಲ್ವುಡ್‌ನಿಂದ ಬಂದಿದೆ. ಇಂತಿ ನಿನ್ನ ಪ್ರೀತಿಯ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಾಯಕಿ ನಟಿ ಸೋನು ಈಗ 'ಗುಲಾಮ'ನಿಗೆ ನಾಯಕಿ. ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಎಲ್ಲರೂ |
| |
|
|
|
|
|
|
|