ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಅಮೆರಿಕ ಕಾಂಗ್ರೆಸ್‌ನಲ್ಲಿ ಅನುಮೋದನೆ: ರೈಸ್ ಆಶಯ
ವಾಷಿಂಗ್ಟನ್, ಭಾನುವಾರ, 7 ಸೆಪ್ಟೆಂಬರ್ 2008   ( 11:22 IST )
ap
ಭಾರತ ನಿರ್ದಿಷ್ಟ ಸುರಕ್ಷತೆ ಒಪ್ಪಂದಕ್ಕೆ ಎನ್‌ಎಸ್‌ಜಿ ಅನುಮತಿ ಗಳಿಸಲು ಭಾರೀ ಲಾಬಿ ಮಾಡಿದ ಬಳಿಕ ಅದನ್ನು ಅಮೆರಿಕ ಕಾಂಗ್ರೆಸ್ ಮುಂದೆ ಅನುಮೋದನೆ ಪಡೆಯಲು ಅಮೆರಿಕ ಸರ್ಕಾರ ಅಂತಿಮ ಸಿದ್ಧತೆ ನಡೆಸುತ್ತಿದೆ. ಸಂಸತ್ತಿನ ಕಾಲಾವಧಿ ಕೂಡ ಕಡಿಮೆಯಾಗಿದ್ದು, ಮುಖ್ಯವಿಷಯವೇನೆಂದರೆ ಅಂತಾರಾಷ್ಟ್ರೀಯ ಒಪ್ಪಿಗೆ ಸಿಕ್ಕಿರುವುದು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಕಂಡೋಲೀಜಾ ರೈಸ್ ಉತ್ತರ ಆಫ್ರಿಕಾ ರಾಷ್ಟ್ರಗಳಿಗೆ ತಮ್ಮ ಜತೆ ಪ್ರಯಾಣಿಸುತ್ತಿದ್ದ ವರದಿಗಾರರ ಜತೆ ಮಾತನಾಡುತ್ತಾ ತಿಳಿಸಿದರು.

ಅಣ್ವಸ್ತ್ರ ಪ್ರಸರಣ ಚೌಕಟ್ಟಿಗೆ ಇದೊಂದು ಮಹತ್ವದ ಹೆಜ್ಜೆ ಮತ್ತು ಅಮೆರಿಕ-ಭಾರತ ಸಂಬಂಧದಲ್ಲಿ ಬೃಹತ್ ಹೆಜ್ಜೆ ಎಂದು ರೈಸ್ ತಿಳಿಸಿದರು. ಭಾರತವು ತನ್ನ ಅಣ್ವಸ್ತ್ರ ಕಾರ್ಯಕ್ರಮದ ಇಡೀ ಇತಿಹಾಸದಲ್ಲಿ ಪ್ರಸರಣ ನಿಷೇಧ ವಲಯದಿಂದ ಹೊರಗಿತ್ತೆಂಬುದು ರಹಸ್ಯವಲ್ಲ ಎಂದು ಅವರು ನುಡಿದರು.

ಎನ್‌ಎಸ್‌ಜಿ ಒಪ್ಪಿಗೆ ಪಡೆಯುವುದಕ್ಕಾಗಿ ತಾವು ವಿದೇಶಿ ಅಧಿಕಾರಿಗಳಿಗೆ ಅನೇಕ ಕರೆಗಳನ್ನು ಮಾಡಿದ್ದಾಗಿ ರೈಸ್ ಹೇಳಿದರು. ವಿದೇಶಾಂಗ ನೀತಿಯ ಐತಿಹಾಸಿಕ ಸಾಧನೆ ಎಂದು ಭಾರತದ ಜತೆ ಒಪ್ಪಂದವನ್ನು ಬಣ್ಣಿಸಿರುವ ಅಧ್ಯಕ್ಷ ಬುಷ್ ಒಪ್ಪಂದಕ್ಕೆ ಅಪಸ್ವರ ಎತ್ತಿದ ಕೆಲವು ಎನ್‌ಎಸ್‌ಜಿ ಸದಸ್ಯ ರಾಷ್ಟ್ರಗಳ ನಾಯಕರ ಜತೆ ಮಾತನಾಡಿದ್ದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಆತ್ಮಾಹುತಿ ಬಾಂಬರ್ ಸ್ಫೋಟಕ್ಕೆ 30 ಬಲಿ
ಜರ್ದಾರಿಗೆ ದಕ್ಕಿದ ಪಾಕ್ ಅಧ್ಯಕ್ಷ ಹುದ್ದೆ
ಬೆಟಾನ್‌ಕೋರ್ಟ್‌ಗೆ "ವರ್ಷದ ಮಹಿಳೆ" ಪ್ರಶಸ್ತಿ
ಪಾಕ್ ಅಧ್ಯಕ್ಷೀಯ ಚುನಾವಣೆಗೆ ಮತದಾನ
ನೇಪಾಳದಲ್ಲಿ ಸಿಕ್ಕಿಬಿದ್ದ ಮುಂಬೈ ಸ್ಫೋಟದ ಶಂಕಿತರು
ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಇರಾನ್ ದಿಗ್ಬಂಧನ ಬೆದರಿಕೆ
ಗ್ರಹ ಗತಿ
ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ ವರ್ಗದ ಜನರು ಇಂದು ದಿಢೀರ್ ಲಾಭ ಗಳಿಸುವ ಸಾಧ್ಯತೆ ಇದೆ. ನೀವಿಂದು ಮಾನಸಿಕವಾಗಿ ನಿರಾಳರಾಗಿರುತ್ತೀರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಖಜಾನೆಯಲ್ಲಿ ಹಣದ ಕೊರತೆ ಇಲ್ಲ: ಸಿಎಂ
ಬಜೆಟ್ ಅನುಷ್ಠಾನಕ್ಕೆ ಹಣದ ಕೊರತೆ ಇಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯ‌ೂರಪ್ಪ ...
ದಸರಾ ಹಬ್ಬಕ್ಕೆ ಏರ್‌ಶೋ ಪ್ರದರ್ಶನ: ಕರಂದ್ಲಾಜೆ
30 ಲಕ್ಷ ಮೌಲ್ಯದ ನಕಲಿ ಮದ್ಯವಶ
ಮನರಂಜನೆ
ಚಿತ್ರ ಸುದ್ದಿ - ಚಿತ್ರರಂಗ ಪ್ರವೇಶಿಸಿದ ಮೇಲೆ ತಾನೇ ಚಿತ್ರರಂಗಕ್ಕೆ ನಾಯಕಿ ಅನ್ನುವವರೇ ಜಾಸ್ತಿ. ಇದೀಗ ಅಂತದ್ದೊಂದು ಸುದ್ದಿ ಸ್ಯಾಂಡಲ್ವುಡ್‌ನಿಂದ ಬಂದಿದೆ. ಇಂತಿ ನಿನ್ನ ಪ್ರೀತಿಯ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಾಯಕಿ ನಟಿ ಸೋನು ಈಗ 'ಗುಲಾಮ'ನಿಗೆ ನಾಯಕಿ. ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಎಲ್ಲರೂ
ಮುಂದೆ ಓದಿ|ಮತ್ತಷ್ಟು...