ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಆತ್ಮಾಹುತಿ ಬಾಂಬರ್ ಸ್ಫೋಟಕ್ಕೆ 30 ಬಲಿ
ಇಸ್ಲಾಮಾಬಾದ್, ಭಾನುವಾರ, 7 ಸೆಪ್ಟೆಂಬರ್ 2008   ( 11:02 IST )
ಪೇಶಾವರದ ಹೊರವಲಯದ ವಾಣಿಜ್ಯ ಪ್ರದೇಶದ ಪೊಲೀಸ್ ಚೌಕಿ ಬಳಿ ಸ್ಫೋಟಕ ತುಂಬಿದ ವಾಹನವನ್ನು ಆತ್ಮಾಹುತಿ ಬಾಂಬರ್ ಸ್ಫೋಟಿಸಿದ್ದರಿಂದ 30 ಜನರು ಸತ್ತು 70 ಮಂದಿ ಗಾಯಗೊಂಡ ಘಟನೆ ಶನಿವಾರ ಸಂಭವಿಸಿದೆ. ಶಕ್ತಿಶಾಲಿ ಸ್ಫೋಟವು ಪೇಶಾವರದ ಬಡಾಬೆರ್ ಪ್ರದೇಶದಲ್ಲಿರುವ ಪೊಲೀಸ್ ಚೌಕಿಯನ್ನು ನಾಶಮಾಡಿದೆ ಮತ್ತು ಸಮೀಪದ ಎರಡು ಮಾರುಕಟ್ಟೆಗಳಿಗೆ ಮತ್ತು ಸುಮಾರು 15 ವಾಹನಗಳಿಗೆ ತೀವ್ರ ಹಾನಿಯುಂಟುಮಾಡಿದೆ.

ಸ್ಫೋಟದಲ್ಲಿ ಸುಮಾರು 30 ಜನರು ಸತ್ತಿದ್ದಾರೆಂದು ಪೇಶಾವರ ಪೊಲೀಸ್ ಮುಖ್ಯಸ್ಥ ಮೊಹಮದ್ ಸುಲೇಮಾನ್ ತಿಳಿಸಿದರು. ಸತ್ತವರಲ್ಲಿ 6 ಮಂದಿ ಪೊಲೀಸರು ಮತ್ತು 13 ವರ್ಷವಯಸ್ಸಿನ ಬಾಲಕ ಕೂಡ ಸೇರಿದ್ದಾರೆ.ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಾಂತೀಯ ಶಾಸಕರು ಮತ್ತು ಸಂಸತ್ ಸದಸ್ಯರ ಮತದಾನದಲ್ಲಿ ಪಿಪಿಪಿ ಮುಖ್ಯಸ್ಥ ಅಸೀಫ್ ಅಲಿ ಜರ್ದಾರಿ ಭರ್ಜರಿ ಗೆಲುವು ಗಳಿಸಿದ್ದರಿಂದ ಈ ದಾಳಿಯನ್ನು ನಡೆಸಿದ್ದಾಗಿ ಸ್ಥಳೀಯ ತಾಲಿಬಾನ್ ಹೇಳಿಕೊಂಡಿದೆ.

ಪೊಲೀಸ್ ಚೌಕಿಯ ತಡೆಗೋಡೆಯನ್ನು ಮುರಿದು ಶಸ್ತ್ರಸಜ್ಜಿತ ಸಿಬ್ಬಂದಿ ವಾಹವವೊಂದಕ್ಕೆ ಆತ್ಮಾಹುತಿ ಬಾಂಬರ್ ತನ್ನ ಕಾರನ್ನು ಅಪ್ಪಳಿಸಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ. ಸ್ಫೋಟದಿಂದಾಗಿ ದೇಹಗಳು 50 ಮೀಟರ್ ದೂರದವರೆಗೆ ಚಿಮ್ಮಿತು ಮತ್ತು ದೊಡ್ಡ ಕಂದಕವೊಂದನ್ನು ಸೃಷ್ಟಿಸಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಜರ್ದಾರಿಗೆ ದಕ್ಕಿದ ಪಾಕ್ ಅಧ್ಯಕ್ಷ ಹುದ್ದೆ
ಬೆಟಾನ್‌ಕೋರ್ಟ್‌ಗೆ "ವರ್ಷದ ಮಹಿಳೆ" ಪ್ರಶಸ್ತಿ
ಪಾಕ್ ಅಧ್ಯಕ್ಷೀಯ ಚುನಾವಣೆಗೆ ಮತದಾನ
ನೇಪಾಳದಲ್ಲಿ ಸಿಕ್ಕಿಬಿದ್ದ ಮುಂಬೈ ಸ್ಫೋಟದ ಶಂಕಿತರು
ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಇರಾನ್ ದಿಗ್ಬಂಧನ ಬೆದರಿಕೆ
ಎನ್‌ಎಸ್‌ಜಿ ಕರಡಿನ ಬಗ್ಗೆ ಆಸ್ಟ್ರಿಯ ಅಪಸ್ವರ
ಗ್ರಹ ಗತಿ
ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ ವರ್ಗದ ಜನರು ಇಂದು ದಿಢೀರ್ ಲಾಭ ಗಳಿಸುವ ಸಾಧ್ಯತೆ ಇದೆ. ನೀವಿಂದು ಮಾನಸಿಕವಾಗಿ ನಿರಾಳರಾಗಿರುತ್ತೀರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಖಜಾನೆಯಲ್ಲಿ ಹಣದ ಕೊರತೆ ಇಲ್ಲ: ಸಿಎಂ
ಬಜೆಟ್ ಅನುಷ್ಠಾನಕ್ಕೆ ಹಣದ ಕೊರತೆ ಇಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯ‌ೂರಪ್ಪ ...
ದಸರಾ ಹಬ್ಬಕ್ಕೆ ಏರ್‌ಶೋ ಪ್ರದರ್ಶನ: ಕರಂದ್ಲಾಜೆ
30 ಲಕ್ಷ ಮೌಲ್ಯದ ನಕಲಿ ಮದ್ಯವಶ
ಮನರಂಜನೆ
ಚಿತ್ರ ಸುದ್ದಿ - ಚಿತ್ರರಂಗ ಪ್ರವೇಶಿಸಿದ ಮೇಲೆ ತಾನೇ ಚಿತ್ರರಂಗಕ್ಕೆ ನಾಯಕಿ ಅನ್ನುವವರೇ ಜಾಸ್ತಿ. ಇದೀಗ ಅಂತದ್ದೊಂದು ಸುದ್ದಿ ಸ್ಯಾಂಡಲ್ವುಡ್‌ನಿಂದ ಬಂದಿದೆ. ಇಂತಿ ನಿನ್ನ ಪ್ರೀತಿಯ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಾಯಕಿ ನಟಿ ಸೋನು ಈಗ 'ಗುಲಾಮ'ನಿಗೆ ನಾಯಕಿ. ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಎಲ್ಲರೂ
ಮುಂದೆ ಓದಿ|ಮತ್ತಷ್ಟು...