ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ವಿದೇಶ
ಬೆಟಾನ್‌ಕೋರ್ಟ್‌ಗೆ "ವರ್ಷದ ಮಹಿಳೆ" ಪ್ರಶಸ್ತಿ
ವಿಯೆನ್ನಾ, ಶನಿವಾರ, 6 ಸೆಪ್ಟೆಂಬರ್ 2008   ( 16:15 IST )
ap
ಎಡಪಂಥೀಯ ಬಂಡುಕೋರರ ಸೆರೆಯಿಂದ ಪಾರಾದ ಕೊಲಂಬಿಯದ ಮಾಜಿ ಅಧ್ಯಕ್ಷೀಯ ಅಭ್ಯರ್ಥಿಯಾದ ಇನ್‌ಗ್ರಿಡ್ ಬೆಟಾನ್‌ಕೋರ್ಟ್ ಅವರನ್ನು "ವರ್ಷದ ಮಹಿಳೆ" ಎಂದು ವಿಶ್ವ ಪ್ರಶಸ್ತಿಗಳ ಒಕ್ಕೂಟ ಹೆಸರಿಸಿದೆ. ವಿಯೆನ್ನಾ ಮ‌ೂಲದ ವಿಶ್ವ ಪ್ರಶಸ್ತಿಗಳ ಒಕ್ಕೂಟವು ಶುಕ್ರವಾರ 2008 ವರ್ಷದ ಮಹಿಳಾ ಪ್ರಶಸ್ತಿ ಪುರಸ್ಕೃತರನ್ನಾಗಿ ಮಾಡಿದೆ ಎಂದು ವರದಿ ತಿಳಿಸಿದೆ.

ಅಕ್ಟೋಬರ್ 26ರಂದು ನಡೆಯುವ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಲಿದ್ದು, ವಿವರಗಳನ್ನು ಬಳಿಕ ಪ್ರಕಟಿಸಲಾಗುವುದು ಎಂದು ವರದಿ ಹೇಳಿದೆ. ಬೆಟಾನ್‌ಕೋರ್ಟ್ ಕೊಲಂಬಿಯ ಮತ್ತು ಫ್ರಾನ್ಸ್ ದ್ವಿಪೌರತ್ವ ಹೊಂದಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಅಮೋಘ ಸೇವೆ ಸಲ್ಲಿಸಿದವರಿಗೆ ಪ್ರತಿವರ್ಷವೂ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಡಬ್ಲ್ಯುಎಎ ಅಧ್ಯಕ್ಷ ಮಾಜಿ ಸೋವಿಯಟ್ ನಾಯಕ ಮೈಕೆಲ್ ಗೋರ್ಬಚೆವ್ ಮತ್ತು ಅದರ ಅಧ್ಯಕ್ಷ ಜಾರ್ಜ್ ಕಿಂಡೆಲ್ ಹೇಳಿಕೆಯೊಂದನ್ನು ನೀಡಿ, ಬೆಟಾನ್‌ಕೋರ್ಟ್ ತಮ್ಮ ಧೈರ್ಯ ಮತ್ತು ಸ್ವಾತಂತ್ರ್ಯದ ಆಶಯದೊಂದಿಗೆ ಲಕ್ಷಾಂತರ ಜನರಿಗೆ ಆದರ್ಶಪ್ರಾಯರಾಗಿದ್ದಾರೆಂದು ತಿಳಿಸಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಪಾಕ್ ಅಧ್ಯಕ್ಷೀಯ ಚುನಾವಣೆಗೆ ಮತದಾನ
ನೇಪಾಳದಲ್ಲಿ ಸಿಕ್ಕಿಬಿದ್ದ ಮುಂಬೈ ಸ್ಫೋಟದ ಶಂಕಿತರು
ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಇರಾನ್ ದಿಗ್ಬಂಧನ ಬೆದರಿಕೆ
ಎನ್‌ಎಸ್‌ಜಿ ಕರಡಿನ ಬಗ್ಗೆ ಆಸ್ಟ್ರಿಯ ಅಪಸ್ವರ
ಟ್ರಕ್ ಚಕ್ರಕ್ಕೆ ಸಿಕ್ಕಿ ಭಾರತೀಯ ಅಕ್ರಮ ವಲಸಿಗನ ಸಾವು
ದಾಖಲೆಯ ಅಂಶಗಳನ್ನು ಬಚ್ಚಿಟ್ಟಿಲ್ಲ: ಅಮೆರಿಕ
ಗ್ರಹ ಗತಿ
ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಉಚಿತ ವಿದ್ಯುತ್‌ಗೆ ಸರ್ಕಾರ ಬದ್ಧ: ಯಡಿಯ‌ೂರಪ್ಪ
ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವ ನಿರ್ಧಾರದಿಂದ ರಾಜ್ಯ ಸರ್ಕಾರ ...
ಭಯೋತ್ಪಾದನೆ ವಿರುದ್ಧ ಸಮರದಲ್ಲಿ ಬಲಿಪಶುಗಳು
ಮಳೆ ಹಾನಿ ನೆರವು-ದೆಹಲಿಗೆ ನಿಯೋಗ: ಸಿಎಂ
ಮನರಂಜನೆ
ಚಿತ್ರ ಸುದ್ದಿ - ವಿಶಿಷ್ಟ ಕಥಾಹಂದರವನ್ನೊಳಗೊಂಡ ಸೈಕೋ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸೆನ್ಸಾರ್ ಮುಂದೆ ಬಂದಿದೆ.
ಮುಂದೆ ಓದಿ|ಮತ್ತಷ್ಟು...