|
| ನೇಪಾಳದಲ್ಲಿ ಸಿಕ್ಕಿಬಿದ್ದ ಮುಂಬೈ ಸ್ಫೋಟದ ಶಂಕಿತರು |
| ಕಠ್ಮಂಡು, ಶನಿವಾರ, 6 ಸೆಪ್ಟೆಂಬರ್ 2008 ( 15:48 IST ) | |
ಭೂಗತಲೋಕದ ಪಾತಕಿ ದಾವೂದ್ ಇಬ್ರಾಹಿಂ ಅವರ ಇಬ್ಬರು ಭಾರತೀಯ ಸಹಚರರನ್ನು ನೇಪಾಳ ಪೊಲೀಸರು ಬಂಧಿಸಿ ಭಾರತದ ಅಧಿಕಾರಿಗಳಿಗೆ ಗುಪ್ತ ಕಾರ್ಯಾಚರಣೆ ಮೂಲಕ ಶೀಘ್ರವಾಗಿ ಹಸ್ತಾಂತರಿಸಿದ್ದಾರೆಂದು ತಿಳಿದುಬಂದಿದೆ. 1993ರ ಮುಂಬೈ ಸರಣಿ ಸ್ಫೋಟಗಳಲ್ಲಿ ಇವರಿಬ್ಬರ ಪಾತ್ರವಿರಬಹುದೆಂದು ಶಂಕಿಸಲಾಗಿದೆ.
1997ರಲ್ಲಿ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ನೀಡಿದ್ದ ಸಲೀಂ ಅಬ್ದುಲ್ ಗನಿ ಗಾಜಿ ಅಲಿಯಾಸ್ ಅಸ್ಫಕ್ ಅಹ್ಮದ್ ಶಾ ಮತ್ತು ರಿಯಾಜ್ ಕತ್ರಿ ಅಲಿಯಾಸ್ ರಿಯಾಜ್ ಅಬುಕರ್ ಲೋನ್ ಅವರ ಅಡಗುತಾಣದಿಂದ ಕಠ್ಮಂಡು ಪೊಲೀಸರಿಗೆ ಸಿಕ್ಕಿಬಿದ್ದರು.
ವಿಷಯದ ಸೂಕ್ಷ್ಮತೆ ಹಿನ್ನೆಲೆಯಲ್ಲಿ ಬಂಧನವನ್ನು ಮುಚ್ಚಿಡಲಾಗಿದ್ದು, ಸಿಬಿಐ ನೇತೃತ್ವದ ಭಾರತೀಯ ತಂಡಕ್ಕೆ ತ್ರಿಭುವನ್ ವಿಮಾನನಿಲ್ದಾಣದಲ್ಲಿ ಹಸ್ತಾಂತರಿಸಲಾಯಿತು. ಇಬ್ಬರು ಆರೋಪಿಗಳು ಹತ್ಯೆ, ಹತ್ಯೆ ಯತ್ನ, ಕ್ರಿಮಿನಲ್ ಒಳಸಂಚು ಮತ್ತು ಭಯೋತ್ಪಾದನೆ ಕೃತ್ಯಗಳ ಆರೋಪಗಳನ್ನು ಎದುರಿಸುತ್ತಿದ್ದಾರೆಂದು ನೇಪಾಳ ಪೊಲೀಸರು ತಿಳಿಸಿದ್ದು, ಇಂಟರ್‌ಪೋಲ್ ಅವರ ಬಂಧನಕ್ಕೆ ಕಟ್ಟೆಚ್ಚರದ ನೋಟಿಸ್ ನೀಡಿತ್ತು ಎಂದು ಹೇಳಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ವಿಶಿಷ್ಟ ಕಥಾಹಂದರವನ್ನೊಳಗೊಂಡ ಸೈಕೋ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸೆನ್ಸಾರ್ ಮುಂದೆ ಬಂದಿದೆ. |
| |
|
|
|
|
|
|
|