|
| ಎನ್‌ಎಸ್‌ಜಿ ಕರಡಿನ ಬಗ್ಗೆ ಆಸ್ಟ್ರಿಯ ಅಪಸ್ವರ |
| ವಿಯೆನ್ನಾ, ಶನಿವಾರ, 6 ಸೆಪ್ಟೆಂಬರ್ 2008 ( 11:22 IST ) | |
ಭಾರತ-ಅಮೆರಿಕ ಅಣುಒಪ್ಪಂದಕ್ಕೆ ಹಸಿರುನಿಶಾನೆ ನೀಡುವ ಮುನ್ನ ಒಮ್ಮತ ರೂಪಿಸಲು ಕೆಲವು ಕೆಲಸಗಳು ಬಾಕಿ ಉಳಿದಿವೆ ಎಂದು ಆಸ್ಟ್ರಿಯ ಶುಕ್ರವಾರ ಸಂಜೆ ತಿಳಿಸಿದೆ. ನಿರ್ಣಾಯಕ ದಾಖಲೆಯಲ್ಲಿ ಕೆಲವು ಸಹಾಯಕ ಕ್ರಮಗಳನ್ನು ಅಳವಡಿಸಲು ಆಸ್ಟ್ರಿಯ ಬಯಸಿದ್ದು, ಅಮೆರಿಕದ ಕರಡು ವಿನಾಯಿತಿ ಅನುಮೋದನೆಗೆ ಒಮ್ಮತ ರೂಪಿಸುವುದಕ್ಕೆ ತಡೆಯಾಗಿದೆ. ಐರ್ಲೆಂಡ್ ಕೂಡ ಕರಡಿನ ಪ್ರಸಕ್ತ ರೂಪದ ಬಗ್ಗೆ ಅಪಸ್ವರ ಎತ್ತಿದೆಯೆಂದು ವರದಿಯಾಗಿದೆ.
ಆಸ್ಟ್ರಿಯ ಮತ್ತದರ ಸಹಯೋಗಿ ರಾಷ್ಟ್ರಗಳು ಅಂತಾರಾಷ್ಟ್ರೀಯ ಭದ್ರತಾ ರಚನೆಯಲ್ಲಿ ಗುಣಾತ್ಮಕ ಸುಧಾರಣೆಯತ್ತ ಶ್ರಮಿಸುತ್ತಿವೆ. ನಾವು ಭಾರತದ ಇಂಧನ ಅಗತ್ಯಗಳಿಗೆ ಗೌರವಿಸುತ್ತೇವೆ. ಭಾರತಕ್ಕೆ ಅದರ ಗುರಿ ಸಾಧನೆಯನ್ನು ತಪ್ಪಿಸುವ ಪ್ರಶ್ನೆ ಇದಲ್ಲ ಎಂದು ಆಸ್ಟ್ರಿಯ ವಿದೇಶಾಂಗ ಖಾತೆ ಅಧಿಕಾರಿ ತಿಳಿಸಿದರು. ಭಾರತ ಏಕಪಕ್ಷೀಯ ನಿಯಂತ್ರಣ ವಿಧಿಸುವ ಕುರಿತು ಪ್ರಣವ್ ಮುಖರ್ಜಿ ಹೇಳಿಕೆಯನ್ನು ಕೂಡ ಅವರು ಶ್ಲಾಘಿಸಿದರು.
ಅವರ ಹೇಳಿಕೆಯು ಅಂತಾರಾಷ್ಟ್ರೀಯ ಅಣ್ವಸ್ತ್ರ ಪ್ರಸರಣ ನಿಷೇಧ ನೀತಿಯನ್ನು ಬಲಪಡಿಸುವ ಚಟುವಟಿಕೆಗಳಿಗೆ ದ್ಯೋತಕವಾಗಿದೆ. ಆಸ್ಟ್ರಿಯ ಮತ್ತು ಅದರ ಸಹಯೋಗಿ ರಾಷ್ಟ್ರಗಳ ಉದ್ದೇಶ ಕೂಡ ಅದೇ ಆಗಿದೆ ಎಂದು ಅವರು ನುಡಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ವಿಶಿಷ್ಟ ಕಥಾಹಂದರವನ್ನೊಳಗೊಂಡ ಸೈಕೋ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸೆನ್ಸಾರ್ ಮುಂದೆ ಬಂದಿದೆ. |
| |
|
|
|
|
|
|
|